ಕನ್ನಡಪ್ರಭ ವಾರ್ತೆ ಹಳೇಬೀಡು
ಹಳೇಬೀಡು ಸಮೀಪದ ದ್ಯಾವಪ್ಪನಹಳ್ಳಿ ಗ್ರಾಮದಲ್ಲಿ ಹಾಸನದ ಮಹಾಲಕ್ಷ್ಮಿ ಮಂಜಪ್ಪ ಆಸ್ಪತೆ, ತೋಟಗಾರಿಕಾ ಕಾಲೇಜು, ಮೂಡಿಗೆರೆ ಸ್ಥಳೀಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಟಾಟಸಿ ಮಾತನಾಡುತ್ತ, ನಮ್ಮ ಆಸ್ಪತ್ರೆಯಿಂದ ೭೦ ಉಚಿತ ಶಿಬಿರವನ್ನು ಆಯೋಜಿಸಲಾಗಿದ್ದು, ನನಗೆ ಸಂತೋಷವಾಗಿದೆ. ರೈತರು ನಿಮ್ಮ ಆರೋಗ್ಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಸಾಮಾನ್ಯವಾಗಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಕಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳನ್ನು ಮಾಡಿಸಿಕೊಂಡರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಪತ್ರಕರ್ತ ರಘುನಾಥ್ ಮಾತನಾಡುತ್ತ, "ವೈದ್ಯೋ ನಾರಾಯಣೋ ಹರಿ " ಎಂಬ ಮಾತಿನ ಮಹತ್ವ ಇಂದು ಪ್ರತೀತಿಯಾಗಿದೆ. ಇದು ನಿಸ್ವಾರ್ಥ ಸೇವೆಯ ಮಾದರಿ ಎಂದು ಶ್ಲಾಘಿಸಿದರು.ಗ್ರಾಮ ಹಿರಿಯ ಮತ್ತು ಮುಖಂಡ ಡಿ.ಎಲ್.ಸೋಮಶೇಖರ್ ಮಾತನಾಡುತ್ತ, ಆರೋಗ್ಯ ಜೀವನದ ದೈನಂದಿನ ಅವಿಭಾಜ್ಯ ಭಾಗ. ವೈದ್ಯರು ದೇವರಷ್ಟೇ ಮಹತ್ವ ಹೊಂದಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ನಡೆದ ಈ ಶಿಬಿರದಲ್ಲಿ ೩೦೦ ಹೆಚ್ಚು ಗ್ರಾಮಸ್ಥರಿಗೆ ಆರೋಗ್ಯದ ಮಹತ್ವವನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಆರೋಗ್ಯವೇ ನಿಜವಾದ ಸಂಪತ್ತು ಎಂಬ ಸಂದೇಶ ಈ ಕಾರ್ಯಕ್ರಮದ ಮೂಲಕ ಪ್ರತಿಫಲಿತವಾಯಿತು.
ಮಾಯಗೊಂಡನಹಳ್ಳಿ, ಚಟಚಟನಹಳ್ಳಿ, ಕೆಂಪೇಗೌಡನಹಳ್ಳಿ, ದ್ಯಾವಪ್ಪನಹಳ್ಳಿ, ಲಿಂಗಪನಕೊಪ್ಪಲು, ನಂಜಾಪುರ, ಅಲೆಮಾಚೇನಹಳ್ಳಿ, ಮೊಹಮ್ಮದಪುರ, ಕೋಡಿಕೊಪ್ಪಲು, ಹಜ್ಜೆಗನಹಳ್ಳಿ, ಮತ್ತು ಮತ್ತಿಘಟ್ಟ ಸೇರಿದಂತೆ ೧೧ ಗ್ರಾಮಗಳಿಗೆ ಕಾಲೇಜು ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.