ರೈತರು ಕೃಷಿ ಇಲಾಖೆಯ ಯೋಜನೆ ಬಳಸಿಕೊಳ್ಳಲಿ

KannadaprabhaNewsNetwork |  
Published : Jan 05, 2025, 01:30 AM IST
ಸಿಕೆಬಿ-5 ಪಿಂಜರ‍್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಚನ್ನಪ್ಪರವರ ಜಮೀನಿನಲ್ಲಿ  ಹಮ್ಮಿಕೊಂಡಿದ್ದ ತೊಗರಿ ಬೆಳೆಯ ಕ್ಷೇತ್ರೋತ್ಸವ | Kannada Prabha

ಸಾರಾಂಶ

ರೈತರು ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ರೈತರು ಕಚೇರಿಗಳಿಗೆ ಭೇಟಿ ನೀಡಿ, ತಮಗೆ ಅವಶ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಯೋಜನೆಗಳ ಅನುಷ್ಟಾನಗೊಳಿಸಲು ಸಹಕರಿಸಲಿ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸವಲತ್ತುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವಂತೆ ಹಾಗೂ ಬೆಳೆ ಸಮೀಕ್ಷೆ ಮತ್ತು ಬೆಳೆ ಕಟಾವು ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಇಲಾಖೆಯನ್ನು ಸಂಪರ್ಕಿಸಬೇಕೆಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಾಪಿರೆಡ್ಡಿ ತಿಳಿಸಿದರು.

ಕೃಷಿ ಇಲಾಖೆಯ ವತಿಯಿಂದ ತೊಂಡೇಬಾವಿ ಹೋಬಳಿಯ ಪಿಂಜರ‍್ಲಹಳ್ಳಿ ಗ್ರಾಮದ ಪ್ರಗತಿಪರ ರೈತ ಚನ್ನಪ್ಪರವರ ಜಮೀನಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತೊಗರಿ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ರವರು ಉದ್ಘಾಟಿಸಿ ಮಾತನಾಡಿದರು.

ಬೆಳೆ ವಿಮೆಗೆ ನೋಂದಣಿ ಮಾಡಿಸಿ

ಸಹಾಯಕ ಕೃಷಿ ನಿರ್ದೇಶಕ ಎಸ್.ಎಂ. ಮೋಹನ್ ಮಾತನಾಡಿ, ತೊಗರಿ ಬೆಳೆಯ ತಳಿಗಳಾದ ಬಿ.ಆರ್.ಜಿ-1, ಬಿ.ಆರ್.ಜಿ-2, ಬಿ.ಆರ್.ಜಿ-3, ಬಿ.ಆರ್.ಜಿ-4, ಬಿ.ಆರ್.ಜಿ-5 ಮತ್ತು ಎನ್.ಟಿ.ಎಲ್-2 ತಳಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ರೈತರಿಗೆ ತಿಳಿಸಿದರು ಹಾಗೂ ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷವೂ ಜೂನ್ ಮತ್ತು ಜುಲೈ ಮಾಹೆಯಲ್ಲಿ ರೈತರು ಕಡ್ಡಾಯವಾಗಿ ತೊಗರಿ, ಮುಸುಕಿನ ಜೋಳ, ರಾಗಿ ಮತ್ತು ನೆಲಗಡಲೆ ಬೆಳೆಗಳಿಗೆ ಬೆಳೆ ವಿಮೆಗೆ ನೊಂದಣಿ ಮಾಡಿಸಿಕೊಳ್ಳಲು ಮನವಿ ಮಾಡಿದರು.

ಪ್ರಗತಿಪರ ರೈತ ಬೆಳಚಿಕ್ಕನಹಳ್ಳಿ ಗ್ರಾಮದ ಶ್ರೀರಾಮರೆಡ್ಡಿ ಮಾತನಾಡಿ, ರೈತರು ರಸಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸಬೇಕು. ಸರ್ಕಾರದಿಂದ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ರೈತರು ಕಚೇರಿಗಳಿಗೆ ಭೇಟಿ ನೀಡಿ, ತಮಗೆ ಅವಶ್ಯವಿರುವ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇಲಾಖೆಯ ಅಧಿಕಾರಿಗಳೊಂದಿಗೆ ಕೈ ಜೋಡಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.ಯೋಜನೆಯ ಸೌಲಭ್ಯ ಪಡೆಯಿರಿ

ಆತ್ಮ ಯೋಜನೆಯ ಜಿಲ್ಲಾ ಉಪಯೋಜನಾ ನಿರ್ದೇಶಕ ಸತೀಶ್‌ ಕುಮಾರ್ ಮಾತನಾಡಿ, “ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ”ಯು ಭಾರತದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಾಗಿದೆ. ಮಳೆಗಳು ಮತ್ತು ಅಕಾಲಿಕ ಮಳೆಗಳು ಹೆಚ್ಚಾಗಿ ಬಿತ್ತನೆಯ ಮುಂಚಿನ ನಷ್ಟಗಳು ಹಾಗೂ ಕೋಯ್ಲಿನ ನಂತರದ ನಷ್ಟಗಳನ್ನು ಕೂಡ ಈ ಯೋಜನೆಯು ಭರಿಸುತ್ತದೆ. ಆದ್ದರಿಂದ ಗ್ರಾಮೀಣ ಪ್ರದೇಶದ ರೈತರು ತಾವು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬೇಕು ಹಾಗೂ ಈ ಯೋಜನೆಯಡಿ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ರೈತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಕೆ.ವಿ.ಭವ್ಯ ಹಾಗೂ ಪ್ರಗತಿಪರ ರೈತರುಗಳಾದ ಭೀಮೇಗೌಡ, ಜಗದಾಂಬ, ನಯಾಜ್‌ ಖಾನ್ ಮತ್ತಿತರರು ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?