ಸೊರಬದಲ್ಲಿ ಕಳಪೆ ವಿದ್ಯುತ್ ಪೂರೈಕೆಗೆ ಮೆಸ್ಕಾಂ ವಿರುದ್ಧ ರೈತ ಸಂಘ ಆಕ್ರೋಶ

KannadaprabhaNewsNetwork |  
Published : Feb 23, 2025, 12:31 AM IST
ಫೋಟೊ:೨೨ಕೆಪಿಸೊರಬ-೦೨ : ಸೊರಬ ಪಟ್ಟಣದ ತಾಲೂಕು ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ರೈತರ ಪಂಪ್ ಸೆಟ್‌ಗಳಿಗೆ ಕಳಪೆ ವಿದ್ಯುತ್ ನೀಡುತ್ತಿರುವ ಮೆಸ್ಕಾಂ ಇಲಾಖೆಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ರೈತರ ಪಂಪ್ ಸೆಟ್‌ಗಳಿಗೆ ಕಳಪೆ ವಿದ್ಯುತ್ ನೀಡುತ್ತಿರುವ ಮೆಸ್ಕಾಂ ಇಲಾಖೆಯ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಧರಣಿ । ಪರಿಹಾರಕ್ಕೆ ಗಡುವು

ಸೊರಬ: ರೈತರ ಪಂಪ್ ಸೆಟ್‌ಗಳಿಗೆ ಕಳಪೆ ವಿದ್ಯುತ್ ನೀಡುತ್ತಿರುವ ಮೆಸ್ಕಾಂ ಇಲಾಖೆಯ ಧೋರಣೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಬೇಸಿಗೆ ಆರಂಭವಾಗುತ್ತಿದ್ದು, ಸುಡು ಬಿಸಿಲಿಗೆ ಬೆಳೆಗಳು ಬಾಡುತ್ತಿವೆ. ನೀರು ಅವಶ್ಯಕವಾಗಿರುವ ಹೊತ್ತಿನಲ್ಲಿ ರೈತರ ಪಂಪ್ ಸೆಟ್ ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಜೊತೆಗೆ ಕೆಟ್ಟು ಹೋದ ಪರಿವರ್ತಕಗಳನ್ನು ನೀಡಲಾಗುತ್ತಿದೆ. ಸುಟ್ಟ ಪರಿವರ್ತಕ ಸರಿಪಡಿಸಲು ೧೫ ರಿಂದ ೨೦ ದಿನ ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ದಿನಕ್ಕೆ ೩ ಪೇಸ್ ವಿದ್ಯುತ್ ಸರಿಯಾಗಿ ನೀಡದೆ ರೈತರನ್ನು ಸತಾಯಿಸುತ್ತಿದ್ದಾರೆ. ತಕ್ಷಣ ಇದನ್ನು ಸರಿಪಡಿಸಬೇಕು. ಪರಿವರ್ತಕಗಳನ್ನು ಎರಡು ದಿನದಲ್ಲಿ ಸರಿಪಡಿಸಿಕೊಡಬೇಕು. ೩ ಪೇಸ್ ವಿದ್ಯುತ್ ಟ್ರಿಪ್ ಆದಲ್ಲಿ ಅದನ್ನು ಬೇರೆ ಸಮಯದಲ್ಲಿ ರೈತರಿಗೆ ನೀಡಬೇಕು. ನಿರಂತರ ಜ್ಯೋತಿ ೩ ಪೇಸ್ ವಿದ್ಯುತ್ ಹಾಕುವುದನ್ನು ನಿಲ್ಲಿಸಬೇಕು. ವಿಭಾಗಾಧಿಕಾರಿಗಳು ಆಯಾ ಭಾಗದ ರೈತರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ರೈತರಿಗೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ರೈತರ ಒತ್ತಾಯಗಳನ್ನು ರೈತರ ಸಮಸ್ಯೆಗಳನ್ನು ೧೫ ದಿನಗಳೊಳಗಾಗಿ ಬಗಿಹರಿಸಬೇಕು. ಇಲ್ಲವಾದಲ್ಲಿ ವಿದ್ಯತ್ ಇಲಾಖೆಯ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಂಜುನಾಥಗೌಡ, ರಾಜ್ಯ ಕಾರ್ಯದರ್ಶಿ ಉಮೇಶ್ ಎನ್. ಪಾಟೀಲ್, ಜಿಲ್ಲಾಧ್ಯಕ್ಷ ಮಂಜುನಾಥ್ ಆರೇಕೊಪ್ಪ, ತಾಲೂಕು ಘಟಕದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಹುಚ್ಚಪ್ಪ, ಪರಸಪ್ಪ, ಸೋಮಶೇಖರ್ ಶಿಗ್ಗಾ, ಗ್ಯಾನಪ್ಪ, ಮೂಕಪ್ಪ, ಜಯಕುಮಾರ್, ಕೃಷ್ಣಮೂರ್ತಿ ಶಿಗ್ಗಾ, ಶಿವಕುಮಾರ್, ಶಶಿಧರ, ಬಸವರಾಜಪ್ಪ, ಭಾಸ್ಕರ, ನೂರಾರು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ