ಕನ್ನಡಪ್ರಭ ವಾರ್ತೆ ಪಾವಗಡ
ರೈತರು ಸಂಘಟಿತರಾಗಿ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ರೈತರಿಗೆ ತಲುಪುವಂತೆ ಧ್ವನಿ ಎತ್ತಬೇಕು. ಬರಪೀಡಿತ ಪ್ರದೇಶವಾದ ಈ ತಾಲೂಕಿನಲ್ಲಿಗ ಶಾಶ್ವತ ನೀರಾವರಿ ಯೋಜನೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸಗಳು ಜಾರಿಯಾಗಿಲ್ಲ. ರೈತರು ಹಾಗೂ ಹಲವಾರು ಪ್ರಗತಿಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಸರ್ಕಾರವು ಶಾಶ್ವತ ಕುಡಿಯುವ ನೀರಿನ ಅನುಷ್ಠಾನಕ್ಕಾಗಿ 2,352 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಇದೇ ರೀತಿ ರೈತರ ಬೆಳೆಗಳ ಸಂರಕ್ಷಣೆ ಹಿನ್ನಲೆಯಲ್ಲಿ ಕೊಳವೆಬಾವಿಗಳ ಅಂತರ್ ಜಲ ಹೆಚ್ಚಿಸಲು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತ ಗೊಳಿಸಬೇಕು. ಪೈಪ್ ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ರೈತರಿಗೆ ನೀರು ಹರಿಸಬೇಕೆಂದು ಅವರು ಆಗ್ರಹಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡನೂರು ಶಿವು ಮಾತನಾಡಿ, ಚಿಕ್ಕಜಾಲೊಡು ಗ್ರಾಮದ ನೂತನ ಘಟಕ ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ವೇದಿಕೆಯಾಗಲಿದೆ. ರೈತರ ಹಿತದೃಷ್ಟಿಯಿಂದ ಹೋರಾಟಗಳನ್ನು ಚುರುಕುಗೊಳಿಸಲು ಸಂಘ ಸದಾ ಕಾರ್ಯನಿರ್ವಹಿಸಲಿದೆ ಎಂದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಾಂಜಿ, ಸದಸ್ಯರಾದ ಗೋಪಾಲ್, ಹೊನ್ನೂರಪ್ಪ,ತಿಪ್ಪೇ ಸ್ವಾಮಿ, ಜಾಲೊಡು ಹನುಮಂತರಾಯ,ಈರಣ್ಣ,ನರಸಿಂಹಪ್ಪ,ಹನುಮಂತರಾಯಪ್ಪ, ರಂಗಪ್ಪ ರಾಮಾಂಜಿನಪ್ಪ ಇತರೆ ಅನೇಕ ಮಂದಿ ಗ್ರಾಮದ ರೈತ ಮುಖಂಡರು ಉಪಸ್ಥಿತರಿದ್ದರು.