ಆಸ್ತಿ ವಿಷಯಕ್ಕೆ ಗ್ರಾಪಂ ನಲ್ಲಿ ತಂದೆ, ಮಗಳ ಹತ್ಯೆ

KannadaprabhaNewsNetwork |  
Published : Sep 17, 2026, 03:00 AM IST
ಚನ್ನಮ್ಮನ ಕಿತ್ತೂರು | Kannada Prabha

ಸಾರಾಂಶ

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗಳನ್ನು ಗ್ರಾಮ ಪಂಚಾಯತಿಯಲ್ಲಿ ಹಾಡುಹಗಲೇ ಕುಡುಗೊಲಿನಿಂದ ಕಡಿದು ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಯಲ್ಲಿ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗಳನ್ನು ಗ್ರಾಮ ಪಂಚಾಯತಿಯಲ್ಲಿ ಹಾಡುಹಗಲೇ ಕುಡುಗೊಲಿನಿಂದ ಕಡಿದು ಹತ್ಯೆ ಮಾಡಲಾಗಿದ್ದು, ಘಟನೆಯಲ್ಲಿ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಅವರಾದಿ ಗ್ರಾಮ ಪಂಚಾಯತಿಯಲ್ಲಿ ಬುಧವಾರ ನಡೆದಿದೆ.

ರುದ್ರಪ್ಪ ಶಿವನಪ್ಪ ಕುಂದರಗಿ (67) ಹಾಗೂ ರುದ್ರಪ್ಪನ ಮಗಳಾದ ಶಶಿಕಲಾ ಹತ್ಯೆಯಾಗಿರುವ ದುರ್ದೈವಿಗಳು. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ರಾಹುಲ್ ಲೋಕಂಡೆ (28) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ರುದ್ರಪ್ಪನ ಅಣ್ಣ ಅವರಾದಿ ಗ್ರಾಮದ ನಿವಾಸಿಗಳಾದ ಸಂಗಪ್ಪ, ತಮ್ಮ ಬಸಪ್ಪ ಹಾಗೂ ಮಗನಾದ ಮಡಿವಾಳಪ್ಪ ಈ ಕೊಲೆ ಮಾಡಿದ್ದಾಗಿ ತಿಳಿದು ಬಂದಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚಿಸಿ ಬಲೆ ಬೀಸಲಾಗಿದೆ.ಘಟನಾ ಸ್ಥಳಕ್ಕೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸೈ ಜಿ.ಜಿ.ಹಂಪಣ್ಣವರ ಸೇರಿದಂತೆ ವಿಧಿ ವಿಜ್ಞಾನ ಪ್ರಯೊಗಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆಗಿದ್ದೇನು?:

ಆಸ್ತಿ ವಿಚಾರವಾಗಿ ಕಳೆದ ಹಲವು ವರ್ಷಗಳಿಂದ ಹತ್ಯೆಗೊಳಗಾದ ವ್ಯಕ್ತಿ ರುದ್ರಪ್ಪ ಶಿವನಪ್ಪ ಕುಂದರಗಿ ಹಾಗೂ ಬಸಪ್ಪ ಶಿವನಪ್ಪ ಕುಂದರಗಿ, ಸಂಗಪ್ಪ ಶಿವನಪ್ಪ ಕುಂದರಗಿ, ಮಡಿವಾಳಪ್ಪ ಕುಂದರಗಿ ಅವರ ಸಹೋದರರ ನಡುವೆ ಕೋರ್ಟ್‌ನಲ್ಲಿ ಸಿವಿಲ್ ಕೇಸು ದಾಖಲಾಗಿ ಕೋರ್ಟ್‌ದಿಂದ ಆದೇಶ ಆಗಿರುತ್ತದೆ.ಕೋರ್ಟ್‌ನ ಆದೇಶದ ಪ್ರಕಾರ ಜಮೀನು ದಾಖಲು ಮಾಡಲು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸೆ.3 ರಂದು ರುದ್ರಪ್ಪ ಅರ್ಜಿ ಸಲ್ಲಿಸಿದ್ದರು. ನಂತರ ಬುಧವಾರ ಬೆಳಗ್ಗೆ ಮತ್ತೆ ಜಮೀನು ಸರ್ವೇ ಮಾಡುವ ಉದ್ದೇಶದಿಂದ ಮರಣ ಹೊಂದಿದ ವ್ಯಕ್ತಿ ಹಾಗೂ ಮಗಳು ಧಾರವಾಡದಿಂದ ಅವರಾದಿ ಗ್ರಾಮಕ್ಕೆ ಆಗಮಿಸಿದ್ದರು.ಅದೇ ಸಮಯದಲ್ಲಿ ಅವರು ಅರ್ಜಿ ಏನಾಯಿತೆಂದು ಕೇಳಲು ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸಿದ್ದನ್ನು ನೋಡಿದ ಆರೋಪಿಗಳು ಪಂಚಾಯತಿ ಕಾರ್ಯಾಲಯಕ್ಕೆ ಬಂದು ಏಕಾಏಕಿ ಕುಡಗೋಲಿನಿಂದ ರುದ್ರಪ್ಪ ಶಿವನಪ್ಪ ಕುಂದರಗಿ ಅವರನ್ನು ಕೊಚ್ಚಿದ್ದಾರೆ. ಅದನ್ನು ನೋಡಿ ಮಗಳು ಶಶಿಕಲಾ ಜೋರಾಗಿ ಅಳುತ್ತಾ ಬಾಯಿ ಬಾಯಿ ಬಡೆದುಕೊಂಡು ತಂದೆಯನ್ನು ಕಾಪಾಡಲು ತೆರಳಿದಾಗ ಅವಳನ್ನು ಸಹಿತ ಹಿಗ್ಗಾಮುಗ್ಗಾ ಕೊಚ್ಚಿ ಕೊಲೆ ಮಾಡಿದ್ದಾರೆ. ಅವರ ಜೊತೆ ಬಂದ ರಾಹುಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ರಾಹುಲನನ್ನು ಸಮೀಪದ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂಬುವುದು ತಿಳಿದು ಬಂದಿದೆ.

ತಂದೆ ಹಾಗೂ ಮಗಳ ಕೊಲೆಯೂ ಆಸ್ತಿ ವಿಚಾರವಾಗಿ ನಡೆದಿದೆ. ಈಗ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ. ಅವರನ್ನು ಕೂಡಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು. ಆರೋಪಿಗಳ ವಿರುದ್ಧ ಎಲ್ಲ ಸಾಕ್ಷ್ಯಾಧಾರಗಳು ದೊರೆತಿದ್ದು, ಕೊಲೆ ಮಾಡುತ್ತಿರುವ ಆರೋಪಿಗಳ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

-ಕೆ.ರಾಮರಾಜನ್,

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟ್ಯಂತರ ಅನುದಾನ: ಆಮೆಗತಿ ಕಾಮಗಾರಿ!
ಹಿಂದೂ ಸಮಾಜ ಒಗ್ಗಟ್ಟಾಗಿ ತನ್ನ ಶಕ್ತಿ ಪ್ರದರ್ಶಿಸಬೇಕಿದೆ: ಯತ್ನಾಳ