-ಎದುರಾಳಿಗಳು ಮಗಳ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆಂದು ಬಿಂಬಿಸಲು ಯತ್ನ। ತನಿಖೆಯಲ್ಲಿ ಕೃತ್ಯ ಬಯಲು
ಕನ್ನಡಪ್ರಭ ವಾರ್ತೆ ಕಲಬುರಗಿ
ಜಮೀನು ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಲು ಮಗಳನ್ನು ತಾನೇ ಕೊಲೆ ಮಾಡಿ ಎದುರಾಳಿಗಳು ಆಕೆಯನ್ನ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆಂದು ತಂದೆಯೇ ಬಿಂಬಿಸಲು ಯತ್ನಿಸಿದ ಹೇಯ ಕೃತ್ಯವೊಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.ವಿಕಲಚೇತನಳಾದ ಮಂಜುಳಾ ನಿಲೂರ (17) ಈಕೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಮನೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬಾಲಕಿಯ ತಾಯಿ ವಿಮಲಾಬಾಯಿ ನೀಲೂರ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಮಗಳನ್ನು ತಂದೆಯೇ ಕೊಲೆ ಮಾಡಿ ನೇಣು ಹಾಕಿರುವ ಘಟನೆ ಕಲ್ಲಹಂಗರಗಾ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿ ತಂದೆ ಗುಂಡೆರಾವ ನೀಲೂರ್ ಎಂಬಾತನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಜಮೀನು ದಾರಿಗಾಗಿ ಪಕ್ಕದ ಜಮೀನಿನ ಮಾಲೀಕರೊಂದಿಗೆ ಜಗಳ ಸಾಗಿತ್ತು. ಪಕ್ಕದ ಜಮೀನಿನವರನ್ನು ಜೈಲಿಗೆ ಅಟ್ಟಲು ಗುಂಡೇರಾವ ಖರ್‌ನಾಕ್ ಸಂಚು ರೂಪಿಸಿದ್ದ. ತನ್ನ ಮಗಳಿಗೆ ಆತ್ಮಹತ್ಯೆಗೆ ಪ್ರಚೋದಿಸಿದ ಬಳಿಕ ಗುಂಡೇರಾವ್ ಸ್ಥಳದಿಂದ ಹೊರಹೋಗಿದ್ದ. ಕುಟುಂಬದವರು ಈ ಬಗ್ಗೆ ಕೇಳಿದರೆ ತನಗೆ ಏನೂ ಗೊತ್ತಿಲ್ಲದವರಂತೆ ನಟಿಸಿದ್ದ. ಇವೆಲ್ಲ ಸಂಗತಿಗಳನ್ನು ಖುದ್ದು ಗುಂಡೇರಾವ ವಿಚಾರಣೆಯಲ್ಲಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆಂದು ಕಮೀಶ್ನರ್ ಶರಣಪ್ಪ ಹೇಳಿದ್ದಾರೆ.
ಮೃತಳ ತಂದೆ ಗುಂಡೇರಾಯ ನೀಲೂರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಫೋಟೋ- ಗುಂಡೇರಾವ್ ಫಾದರ್
ಮಂಜುಳಾ, ಮೃತ ದರ್ದೈವವಿ