ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
12 ದಿನ ಕಳೆದರೂ ರಾಜೀವ್‌ಗೌಡ ಬಂಧಿಸೋಕೆ ಚಿಕ್ಕಬಳ್ಳಾಪುರ ಪೊಲೀಸರು ವಿಫಲರಾಗಿದ್ದಾರೆ ಜನರು ಆರೋಪಿಸಿದ್ದಾರೆ. ಅನಧಿಕೃತ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಕರೆ ಮಾಡಿ ಧಮ್ಕಿ ಹಾಕಿದ್ದ ಕಾಂಗ್ರೆಸ್ ಮಾಜಿ ಮುಖಂಡ ರಾಜೀವ್ ಗೌಡ ಈಗ ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ. ಒಂದಲ್ಲ ಎರಡಲ್ಲ ಅಂತ ಬರೋಬ್ಬರಿ 12 ದಿನಗಳಿಂದ ರಾಜೀವ್ ಗೌಡನೇ ಬಂಧನದ ಭೀತಿಯಂದ ಊರೂರು ಅಲೆಯುವಂತಾಗಿದೆ. ಜಾಮೀನು ಪಡೆದು ಬಂದು ಅಬ್ಬರಿಸೋಣ ಅಂದುಕೊಂಡಿದ್ದ ಆದರೆ ರಾಜೀವ್ ಗೌಡನಿಗೆ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿ ಮುಖಕ್ಕೆ ಮಂಗಳಾರತಿ ಮಾಡಿದೆ.ಕೆಪಿಸಿಸಿ ಸಹ ಪಕ್ಷದಿಂದ ಅಮಾನತು ಮಾಡಿ ಶಾಕ್ ಕೊಟ್ಟಿದೆ. ಮತ್ತೊಂದೆಡೆ ಹೈಕೋರ್ಟ್‍ನಲ್ಲೂ ಎಫ್‌ಐಆರ್ ರದ್ದು ಕೋರಿ ಹಾಕಿದ್ದ ಅರ್ಜಿ ಸಹ ವಜಾಗೊಂಡಿದೆ. ಮಗದೊಂದಡೆ ನಿರಿಕ್ಷಣಾ ಜಾಮೀನು ಕೋರಿ ಚಿಂತಾಮಣಿಯ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದೆ. ಹೀಗೆ ಶಾಕ್ ಮೇಲೆ ಶಾಕ್‌ಗೆ ರಾಜೀವ್ ಗೌಡ ಇಂಗು ತಿಂದ ಮಂಗನಂತಾಗಿರೋ ರಾಜೀವ್ ಗೌಡ ಈಗ ರಾಜ್ಯವೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದಲೂ ಮಂಗಳೂರಿನಲ್ಲೇ ಇದ್ದ ಮಾಹಿತಿ ಮೇರೆಗೆ ಮಂಗಳೂರಿಗೆ ಪೊಲೀಸರು ಹೋಗುವಷ್ಟರಲ್ಲಿ ಮಂಗಳೂರಿನ ರೈಲ್ವೆ ಸ್ಟೇಷನ್‌ನಲ್ಲಿ ರಾಜೀವ್ ಗೌಡ ಕಾರು ಬಿಟ್ಟು ರಾಜ್ಯ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಂಗಳೂರಿನ ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೈ ನಿಲ್ದಾಣ ಸೇರಿದಂತೆ ಹೋಟೆಲ್ ರೆಸಾರ್ಟ್, ಕಾರು ಓಡಾಟ ನಡೆಸಿರುವ ಕಡೆ ಸಿಸಿಟಿವಿಗಳ ಪರಿಶೀಲನೆಯಲ್ಲಿ ಪೊಲೀಸರು ನಿರತರಾಗಿದ್ದಾರೆ.
ರಾಜೀವ್ ಗೌಡ ಕೇರಳ ಅಥವಾ ಮಹಾರಾಷ್ಟ್ರಕ್ಕೆ ಪರಾರಿಯಾಗಿರ ಬಹುದು ಎಂದು ಹೆಸರೇಳಲು ಇಚ್ಚಿದರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮತ್ತೊಂದು ಮಾಹಿತಿಯಂತೆ ಮಂಗಳೂರಿನಿಂದ ದುಬೈಗೆ ಹೋಗಲು ಪ್ರಯತ್ನ ನಡೆಸಿರ ಬಹುದು ಎಂಬ ವದಂತಿಯೂ ಹರಡುತ್ತಿದೆ.ಸಿಕೆಬಿ-4 ರಾಜೀವ್ ಗೌಡ