ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ-48ರ ಲಕ್ಕೂರು ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ರೈಲ್ವೆ ಇಲಾಖೆ ಮುನ್ನೆಚ್ಚರಿಕೆಯಿಂದ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.
ದಾಬಸ್‌ಪೇಟೆ: ರಾಷ್ಟ್ರೀಯ ಹೆದ್ದಾರಿ-48ರ ಲಕ್ಕೂರು ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ರೈಲ್ವೆ ಇಲಾಖೆ ಮುನ್ನೆಚ್ಚರಿಕೆಯಿಂದ ಬಾರಿ ಅನಾಹುತವೊಂದು ತಪ್ಪಿದಂತಾಗಿದೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ-48ರ ತುಮಕೂರು ರಸ್ತೆಯಲ್ಲಿ ನಿರ್ಮಿಸಿರುವ ರೈಲ್ವೆ ಬ್ರಿಡ್ಜ್ ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಇದರಿಂದ ತಡೆಗೋಡೆ ವಾಲಿಕೊಂಡು ರೈಲ್ವೆ ಹಳಿಯ ಮೇಲೆ ಬೀಳುವ ಆತಂಕ ಎದುರಾಗಿದ್ದನ್ನು ಮನಗಂಡ ರೈಲ್ವೆ ಇಲಾಖೆ ಇಬ್ಬಂದಿ ವಾಲಿದ್ದ ತಡೆಗೋಡೆ ತೆರವುಗೊಳಿಸಿದೆ.
ರೈಲುಗಳ ಸಂಚಾರ ವ್ಯತ್ಯಯ: ರೈಲ್ವೆ ಬ್ರಿಡ್ಜ್ ಮೇಲಿನ ತಡೆಗೋಡೆ ಕುಸಿಯುವ ಆತಂಕದಲ್ಲಿ ತುಮಕೂರು-ಬೆಂಗಳೂರು ಮಧ್ಯೆ ಸಂಚರಿಸುವ ಹಲವು ರೈಲುಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.
ಇನ್ನು ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಹರಸಾಹಸಪಟ್ಟರು.
ಪೋಟೋ 2 :
ದಾಬಸ್‌ಪೇಟೆಯ ರಾಷ್ಟ್ರೀಯ ಹೆದ್ದಾರಿ,48ರಲ್ಲಿ ಲಕ್ಕೂರು ಬ್ರಿಡ್ಜ್ ಬಳಿಯ ರೈಲ್ವೆ ಬ್ರಿಡ್ಜ್ ತಡೆಗೋಡೆ ಕುಸಿಯುವ ಹಂತ ತಲುಪಿದ್ದು ಪೊಲೀಸ್ ಆರಕ್ಷಕ ರಾಜು ಭೇಟಿ ನೀಡಿ ಪರಿಶೀಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.