ರಾಜ್ಯದಲ್ಲಿ ಮಠಗಳ ಕ್ಷೀಣತೆಯಿಂದ ಬೇಸರ: ಸೋಮಶೇಖರ್‌ ಸ್ವಾಮಿ

KannadaprabhaNewsNetwork |  
Published : May 02, 2024, 12:18 AM ISTUpdated : May 02, 2024, 12:19 AM IST
1ಎಚ್ಎಸ್ಎನ್5 : ಪುಷ್ಪಗಿರಿ ಕಲಾ ಕ್ಷೇತ್ರದಲ್ಲಿ  ಶ್ರೀ  ಬಸವರಾಜದೇಶೀಕೇಂದ್ರ ಮಹಾ ಸ್ವಾಮೀಜಿಯ ೨೦ನೇ ಪುಣ್ಯ ಸಂಸ್ಮರಣೆ ಸಂದರ್ಭದಲ್ಲಿ ಮಠಾಧೀಶರದಿಂದ ಪುಷ್ಪಾರ್ಚನೆ | Kannada Prabha

ಸಾರಾಂಶ

ಹಳೇಬೀಡಿನ ಪುಷ್ಪಗಿರಿ ಕಲಾ ಕ್ಷೇತ್ರದಲ್ಲಿ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮೀಜಿ ೨೦ನೇ ಪುಣ್ಯ ಸಂಸ್ಮರಣೆ ಹಾಗೂ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀ ಪುಷ್ಪಗಿರಿ ಕ್ಷೇತ್ರದ ಸೋಮಶೇಖರ ಶಿವಾಚಾರ್ಯ ಮಾತನಾಡಿದರು.

ಹೊಯ್ಸಳ ನಾಡಲ್ಲಿ ಮಠಾಧೀಶರ ಕಾರ್ಯಕ್ರಮ

ಹಳೇಬೀಡು: ಕರ್ನಾಟಕ ರಾಜ್ಯದಲ್ಲಿ ೫ ಸಾವಿರ ಮಠಗಳು ಇದ್ದು ಕ್ರಮೇಣವಾಗಿ ಪ್ರತಿ ವರ್ಷ ಎರಡು ಮಠಗಳು ಕಡಿಮೆಯಾಗುತ್ತ ಬಂದಿರುವುದು ಬೇಸರದ ವಿಚಾರವಾಗಿದೆ ಎಂದು ಶ್ರೀ ಪುಷ್ಪಗಿರಿ ಕ್ಷೇತ್ರದ ಸೋಮಶೇಖರ ಶಿವಾಚಾರ್ಯ ವಿಷಾದಿಸಿದರು.

ಇಲ್ಲಿನ ಪುಷ್ಪಗಿರಿ ಕಲಾ ಕ್ಷೇತ್ರದಲ್ಲಿ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮೀಜಿ ೨೦ನೇ ಪುಣ್ಯ ಸಂಸ್ಮರಣೆ ಹಾಗೂ ಮಠಾಧೀಶರ ಸಮನ್ವಯ ಸಮಿತಿಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ‘ಪುಷ್ಪಗಿರಿಗೆ ನಾನು ೧೩ ವರ್ಷದ ಬಾಲ ಸನ್ಯಾಸಿಯಾಗಿ ಬಂದಾಗ ಇಲ್ಲಿಯ ಹಿಂದಿನ ಬಸವರಾಜ ದೇಶೀಕೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳನ್ನು ಒಳಗೊಂಡಂತೆ ಹಲವಾರು ಸಾಧನೆಯನ್ನು ಮಾಡುತ್ತ ಬಂದಿದ್ದೇನೆ. ಹಳೇಬೀಡು ಇತಿಹಾಸದಲ್ಲಿ ಹೊಯ್ಸಳರ ರಾಜ್ಯ ಮನೆತನದಿಂದ ಬಂದಂತ ಜಗದ್ಗುರು ಈ ಪುಷ್ಪಗಿರಿ ಕ್ಷೇತ್ರದ ಪೀಠಾಧೀಶರು ಹಿಂದಿನ ಶ್ರೀಗಳು ಎತ್ತಿನಗಾಡಿಯಲ್ಲಿ ಹಾಗೂ ನಡೆದುಕೊಂಡು ಜೀವನ ಮಾಡಿದರು’ ಎಂದು ಹೇಳಿದರು.

‘ಆಸೆ ಆಕಾಂಕ್ಷೆಯನ್ನು ತೊರದು ಸ್ವಾಮೀಜಿ ಹಲವಾರು ಸಾಧನೆ ಮಾಡಿದ್ದಾರೆ. ಇವತ್ತು ಹಾವೇರಿ, ಧಾರವಾಡ, ದಾವಣಗೆರೆ, ಹಲವಾರು ರಾಜ್ಯಗಳಲ್ಲಿ ಪುಷ್ಪಗಿರಿ ಕ್ಷೇತ್ರ ಹೆಸರುವಾಸಿಯಾಗಿದೆ. ಅಂದಿನ ದಿನದಲ್ಲಿ ಶ್ರೀಗಳು ಮಕ್ಕಳಿಗೆ ಶಾಲಾ ಕಾಲೇಜು ಹಾಸ್ಟೆಲ್‌ಗಳನ್ನು ನಿರ್ಮಿಹಿಸಿ ಸಾವಿರಾರು ಮಕ್ಕಳಿಗೆ ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಮುಂದುವರಿಸಲು ಕಾರಣವಾಗಿದ್ದು ಮಠಾಧೀಶರು. ಮುಂದಿನ ದಿನಗಳಲ್ಲಿ ಮಠಾಧೀಶರು ಜೀವನ ಹೇಗೆ ಎಂಬುದು ಕಷ್ಟಕರವಾಗಿದೆ. ಜನರಲ್ಲಿ ಮಠಾಧೀಶರ ಬೆಲೆಯೂ ಅರ್ಥವಾಗುತ್ತಿಲ್ಲ. ಸ್ಥಳೀಯವಾಗಿ ಜನತೆ ಮಠಗಳಿಗೆ ಸಹಕಾರ ಮಾಡಬೇಕು’ ಎಂದು ತಿಳಿಸಿದರು.

ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮಿಜಿ, ಬಸವಮರುಳ ಸಿದ್ದ ಸ್ವಾಮಿಜಿ, ಜಯಚಂದ್ರಶೇಖರ ಸ್ವಾಮಿಜಿ, ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮಿಜಿ, ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮಿಜಿ, ಚಂದ್ರಶೇಖರ ಸ್ವಾಮಿಜಿ, ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಜಿ, ವಿಭವ ವಿದ್ಯಾಶಂಕರ ದೇಶೀಕೇಂದ್ರ ಸ್ವಾಮಿಜಿ, ಶಿವಶಂಕರ ಶಿವಯೋಗಿ ೧೦ ಸ್ವಾಮಿಜಿಗಳು ಇದ್ದರು.

ಹಳೇಬೀಡಿನಲ್ಲಿ ಪುಷ್ಪಗಿರಿ ಕಲಾ ಕ್ಷೇತ್ರದಲ್ಲಿ ಬಸವರಾಜ ದೇಶೀಕೇಂದ್ರ ಮಹಾ ಸ್ವಾಮೀಜಿಯ ೨೦ನೇ ಪುಣ್ಯ ಸಂಸ್ಮರಣೆ ಸಂದರ್ಭದಲ್ಲಿ ಮಠಾಧೀಶರದಿಂದ ಪುಷ್ಪಾರ್ಚನೆ ನೆರವೇರಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ