ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಚ್.ಎಫ್ ಹಸುಗಳು ತಳಿಗಳು ತೇವಾಂಶದ ಪ್ರದೇಶದಲ್ಲಿ ಬೆಳೆಯುವುದರಿಂದ ಬೇಸಿಗೆಯಲ್ಲಿ ಸಾಕಾಣಿಕೆ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ರೈತರು ರಾಸುಗಳನ್ನು ಹೆಚ್ಚಾಗಿ ತೇವಾಂಶ ಇರುವ ಜಾಗದಲ್ಲಿ ಅಥವಾ ತೇವಾಂಶ ಭರಿತ ಆಹಾರವನ್ನು ನೀಡಿ ಸಂರಕ್ಷಣೆ ಮಾಡಬೇಕು ಎಂದರು.
ಅಭಿನಂದನೆ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದೀರಿ. ನನ್ನ ಅಧಿಕಾರ ಅವಧಿಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಪೂಕರವಾಗಿ ಕೆಲಸ ಮಾಡುವ ಜತೆಗೆ ಒಕ್ಕೂಟದಿಂದ ಉತ್ಪಾದಕರಿಗೆ ದೊರೆಯುವ ಸೌವಲತ್ತುಗಳನ್ನು ಒದಗಿಸಿಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.ಡೇರಿಗಳು ದೇವಸ್ಥಾನಗಳು ಇದ್ದಂತೆ. ಇಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ತರಬಾರದು. ಆಡಳಿತ ಮಂಡಳಿ, ನೌಕರರು ಹಾಗೂ ಉತ್ಪಾದಕರು ಜತೆಗೆ ಗೂಡಿ ಕೆಲಸ ಮಾಡಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ವಿಎಸ್.ಎಸ್.ಎನ್.ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ ಮಾತನಾಡಿ, ರೈತರು ಹೈನುಗಾರಿಕೆಗೆ ಹೆಚ್ಚು ಹೊತ್ತು ನೀಡಬೇಕು. ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು, ಜತೆಗೆ ಯಶಸ್ವಿನಿ ಯೋಜನೆಗಳನ್ನು ಮಾಡಿಸಿಕೊಳ್ಳಬೇಕು ಎಂದರು.ಡೇರಿ ಅಧ್ಯಕ್ಷ ಕೆ.ಎಸ್.ಜಯರಾಮು ಮಾತನಾಡಿ, ಮನ್ಮುಲ್ ನೂತನ ನಿರ್ದೇಶಕರಾದ ಶಿವಕುಮಾರ್ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ನಮ್ಮ ಡೇರಿಗೆ ಹೆಚ್ಚಿನ ಆಧ್ಯತೆಯ ಮೇರೆಗೆ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಡೈರಿ ಅಧ್ಯಕ್ಷ ಕೆ.ಎಸ್.ಜಯರಾಮು, ಉಪಾಧ್ಯಕ್ಷ ಗೋಪಾಲಕೃಷ್ಣ, ನಿದೇರ್ಶಕರಾದ ಸ್ವಾಮಿಗೌಡ, ಕಾಂತರಾಜು, ಲಕ್ಷ್ಮೀಶ, ಕಣಿವೆರಾಮು, ತಿಮ್ಮೇಗೌಡ, ಮಾಟ್ಟೇಗೌಡ, ಚಿಕ್ಕತಾಯಮ್ಮ, ಭಾರತಿ, ಗ್ರಾ.ಪಂ. ಸದಸ್ಯರಾದ ಕೆ.ಎಸ್.ರವಿ, ರಮೇಶ್, ಯ.ಮರಿಗೌಡ, ಜವರೇಗೌಡ, ಪಾಪೇಗೌಡ, ಅಂಕೆಗೌಡ, ವಿ.ಎಸ್.ಎಸ್.ಎನ್.ಬಿ. ನಿದೇರ್ಶಕ ಸ್ವಾಮಿಗೌಡ, ಜೆಡಿಎಸ್ ಮುಂಖಡ ಅಂಕೇಗೌಡ, ಡೈರಿ ಕಾರ್ಯದರ್ಶಿ ಕೆ.ಶಿವಣ್ಣ, ಹಾಗೂ ವಿನೋದ್‌ಕುಮಾರ್, ಕಾರ್ತಿಕ್, ಚಂದನ್, ಸೇರಿದಂತೆ ಹಲವರು ಇದ್ದರು.