ಬೆಳ್ತೂರು ಡೈರಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ.

KannadaprabhaNewsNetwork |  
Published : Aug 30, 2026, 01:30 AM IST
29ಕೆಎಂಎನ್ ಡಿ25 | Kannada Prabha

ಸಾರಾಂಶ

ವಿವಿಧ ಸಂಘದಲ್ಲಿ ಅಕಾಲಿಕವಾಗಿ ನಿಧನ ಹೊಂದಿದ ಸದಸ್ಯರ ಕುಟುಂಬಗಳಾದ ಯಮದೂರು ಸಿದ್ದಲಿಂಗೇಗೌಡ, ಅಂಜನೇಯ, ಬಿ.ಆರ್.ಸುನೀತಾ, ಜಯಮ್ಮ, ಹೊಸಪುರ ನೆಲ್ಲಿಗೆರಯ್ಯ, ತಿಮ್ಮಮ್ಮ, ಕೊನ್ನಾಪುರ ನಂಜುಂಡೇಗೌಡ, ನರೀಪುರ ರಾಜಮ್ಮ ಅವರಿಗೆ ಮನ್ಮುಲ್ ವತಿಯಿಂದ ₹15 ಸಾವಿರ ಮೌಲ್ಯದ ಚೆಕ್ ವಿತರಿಸಲಾಯಿತು.

ಹಲಗೂರು: ಸಮೀಪದ ಬೆಳ್ತೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಡೈರಿಯ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಕಲಿತು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿ ಬಿ.ಎ.ಪುಷ್ಪವತಿ, ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಾದ ಬಿ.ಎ.ಬಿಂದುಶ್ರೀ, ಲಕ್ಷ್ಮಿ ಅವರನ್ನು ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ ಸನ್ಮಾನಿಸಿ ಅಭಿನಂದಿಸಿದರು.

ನಂತರ ಮಾತನಾಡಿದ ಅವರು, ಹಾಲು ಕರೆಯುವ, ಹುಲ್ಲು ಕತ್ತರಿಸುವ ಯಂತ್ರವನ್ನು ನೀಡುವ ಸೌಲಭ್ಯ ನಮ್ಮ ಸಂಘದಲ್ಲಿದೆ. ರಾಸುಗಳಿಗೆ ಫೀಡ್ಸ್ ನೀಡಲಾಗುತ್ತಿದೆ. ಹೆಣ್ಣು ಕರು ಸುರಕ್ಷಣಾ ಎಂಬ ಯೋಜನೆ ಮಾಡಲಾಗುತ್ತಿದೆ. ಸಂಘದ ವತಿಯಿಂದ ಸಬ್ಸಿಡಿ ದರದಲ್ಲಿ ಸಿಗುವ ಸೌಲತ್ತು, ವಿಮಾ ಯೋಜನೆಗಳನ್ನು ಹಾಲು ಉತ್ಪಾದಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಾಲಿನಲ್ಲಿ ₹5,87,625 ನಿವ್ವಳ ಲಾಭ ಬಂದಿದ್ದು , ಅದರಲ್ಲಿ ಸದಸ್ಯರಿಗೆ ಬೋನಸ್ ರೂಪದಲ್ಲಿ ₹2,44,000 ಅತಿ ಶೀಘ್ರದಲ್ಲೇ ನೀಡಲಾಗುತ್ತದೆ ಎಂದರು.

ಸಂಘದ ಅಧ್ಯಕ್ಷ ಬಿ.ಸಿ.ಈರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘದ ಸದಸ್ಯರು ಪ್ರತಿದಿನವೂ ಗುಣಮಟ್ಟದ ಹಾಲು ಸರಬರಾಜು ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ವಿವಿಧ ಸಂಘದಲ್ಲಿ ಅಕಾಲಿಕವಾಗಿ ನಿಧನ ಹೊಂದಿದ ಸದಸ್ಯರ ಕುಟುಂಬಗಳಾದ ಯಮದೂರು ಸಿದ್ದಲಿಂಗೇಗೌಡ, ಅಂಜನೇಯ, ಬಿ.ಆರ್.ಸುನೀತಾ, ಜಯಮ್ಮ, ಹೊಸಪುರ ನೆಲ್ಲಿಗೆರಯ್ಯ, ತಿಮ್ಮಮ್ಮ, ಕೊನ್ನಾಪುರ ನಂಜುಂಡೇಗೌಡ, ನರೀಪುರ ರಾಜಮ್ಮ ಅವರಿಗೆ ಮನ್ಮುಲ್ ವತಿಯಿಂದ ₹15 ಸಾವಿರ ಮೌಲ್ಯದ ಚೆಕ್ ವಿತರಿಸಲಾಯಿತು.

ಈ ವೇಳೆ ಮನ್ಮುಲ್ ವಿಸ್ತರಣಾಧಿಕಾರಿ ಹರೀಶ್, ದಿವ್ಯಾ, ಸದಾಶಿವ, ಸಂಘದ ಉಪಾಧ್ಯಕ್ಷ ಬಿ.ಕೆ.ಸೋಮಶೇಖರ್, ನಿರ್ದೇಶಕರಾದ ಬಿ.ವಿ.ದಿಲೀಪ, ಕೆ.ನಾಗರಾಜು, ಬಿ.ಕೆ.ಪರಮೇಶ್, ಕೆ.ಬಸವರಾಜು, ರತ್ನಮ್ಮ, ಸಿ.ಶೃತಿ, ಶಿವಮ್ಮ, ನಾಗರಾಜು ಅರಸು, ಬಿ.ಸಿ.ರಾಜೇಶ, ಮುಖ್ಯ ಕಾರ್ಯ ನಿರ್ವಾಹಕಿ ಬಿ.ಡಿ.ಪವಿತ್ರ, ಹಾಲು ಪರೀಕ್ಷಕಿ ಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ಹಣ ವಾಪಾಸ್‌ವರೆಗೂ ಹೋರಾಟ: ಬಿವೈವಿ
ಮುಂದಿನ ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ಡಾ। ಪರಂ