ಕನ್ಯಾಡಿ ಜಾತ್ರೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Apr 01, 2025, 12:47 AM IST
ರಾಮಮಂದಿರ ಜಾತ್ | Kannada Prabha

ಸಾರಾಂಶ

ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ರಾಮ ನಾಮ ತಾರಕ ಭಜನಾ ಸಪ್ತಾಹದ ಅಖಂಡ ನಂದಾ ದೀಪ ಬೆಳಗಿಸಿ ‘ಶ್ರೀ ರಾಮ ಜಯರಾಮ ಜಯ ಜಯ ರಾಮ’ ನಾಮ ಮಂತ್ರದ ಮೂಲಕ ಜಾತ್ರೋತ್ಸವ ಉದ್ಘಾಟಿಸಲಾಯಿತು.

ಶ್ರೀ ರಾಮ ನಾಮ ತಾರಕ ಭಜನಾ ಸಪ್ತಾಹ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಧರ್ಮಸ್ಥಳ ಗ್ರಾಮದ ಕನ್ಯಾಡಿ ನಿತ್ಯಾನಂದನಗರ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂನ ಶ್ರೀರಾಮ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 65ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ವಾರ್ಷಿಕ ಪ್ರತಿಷ್ಠಾ ಜಾತ್ರೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಜಗದ್ಗುರು ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ರಾಮ ನಾಮ ತಾರಕ ಭಜನಾ ಸಪ್ತಾಹದ ಅಖಂಡ ನಂದಾ ದೀಪ ಬೆಳಗಿಸಿ ‘ಶ್ರೀ ರಾಮ ಜಯರಾಮ ಜಯ ಜಯ ರಾಮ’ ನಾಮ ಮಂತ್ರದ ಮೂಲಕ ಜಾತ್ರೋತ್ಸವ ಉದ್ಘಾಟಿಸಲಾಯಿತು.

ಹುಬ್ಬಳ್ಳಿ ಕೇಶಾವಪುರ ಅದ್ವೈತ ಪೀಠದ ಸ್ವಾಮೀಜಿ ಶ್ರೀ ದಯಾನಂದ ಬಾರ್ಕೂರು, ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು.ಶಾಸಕ ಹರೀಶ್ ಪೂಂಜ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ, ನಿವೃತ್ತ ಎಸ್.ಪಿ. ಪೀತಾಂಬರ ಹೇರಾಜೆ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಸಂಚಾಲಕ ಜಯಂತ ಕೋಟ್ಯಾನ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಬಿ. ಭುಜಬಲಿ ಧರ್ಮಸ್ಥಳ, ಸದಾನಂದ ಪೂಜಾರಿ ಉಂಗಿಲ ಬೈಲು, ಮಂಜುನಾಥ ಶೆಟ್ಟಿ ನಿಡಿಗಲ್, ಜಿ.ಪಂ. ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಪ್ರಶಾಂತ್ ಪಾರೆಂಕಿ, ರಾಜೇಶ್ ಪೂಜಾರಿ ಮೂಡುಕೋಡಿ, ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಅಣ್ಣಿ ಪೂಜಾರಿ ಕಾಶಿಬೆಟ್ಟು, ಚಿದಾನಂದ ಇಡ್ಯಾ, ತಿಮ್ಮಪ್ಪ ಗೌಡ ಬೆಳಾಲು, ಸುಜಾತಾ ಅಣ್ಣಿ ಪೂಜಾರಿ, ವಿನೋದಿನಿ ರಾಮಪ್ಪ, ಜಯಶಂಕರ್ ಎಂ.ಬಿ., ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಧರ್ಮಸ್ಥಳ ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಧರ್ಮಸ್ಥಳ, ಕಲ್ಮಂಜ ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಬೆಳಾಲು ಗ್ರಾಮ ಸಮಿತಿ ಅಧ್ಯಕ್ಷ ಜಾರಪ್ಪ ಪೂಜಾರಿ ಬೆಳಾಲು ಪಿ., ಸುನೀಲ್ ಕನ್ಯಾಡಿ, ಗುರುದೇವ ಮಠದ ಟ್ರಸ್ಟಿ ತುಕಾರಾಮ ಸಾಲಿಯಾನ್, ರವೀಂದ್ರ ಪೂಜಾರಿ ಆರ್ಲ, ಚಂದಪ್ಪ ಪೂಜಾರಿ ಬಂದಾರು, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು, ಊರವರು, ರಥ ಬೀದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.ಭಾನುವಾರ ಬೆಳಗ್ಗೆ ಶ್ರೀ ನಿತ್ಯಾನಂದ ಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಮಹಾ ದೇವಿಗೆ ಅಲಂಕಾರ ಪೂಜೆ, ಮಹಾ ಗಣಯಾಗ ಶ್ರೀ ಸಿದ್ಧಿವಿನಾಯಕ, ಕ್ಷೇತ್ರ ಪಾಲ ಗಣಪತಿ ದೇವರಿಗೆ ವಿಶೇಷ ಪೂಜೆಯು ಲಕ್ಷ್ಮೀಪತಿ ಗೋಪಾಲಚಾರ್ಯ ಮತ್ತು ವೈದಿಕ ವೃಂದದ ನೇತೃತ್ವದಲ್ಲಿ ನಡೆಯಿತು. ಬಳಿಕ ತೋಟತ್ತಾಡಿ ಮತ್ತು ಚಿಬಿದ್ರೆ ಗ್ರಾಮಸ್ಥರ ನೇತೃತ್ವದಲ್ಲಿ ನಿರಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಇಂದು ಪಾಲಕಿ ಉತ್ಸವ:

ಏ.1ರಂದು ಶ್ರೀರಾಮದೇವರ ರಜತ ಪಾಲಕಿ ಉತ್ಸವ, ಏ.2ರಂದು ರಾತ್ರಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಪುಷ್ಪ ರಥೋತ್ಸವ, ಏ.3ರಂದು ಶ್ರೀ ದುರ್ಗಾಪರಮೇಶ್ವರಿ ದೇವಿ ಮೂರ್ತಿ ಬಲಿ ಉತ್ಸವ, ಚಂದ್ರಮಂಡಲೋತ್ಸವ, ಏ.4ರಂದು ಬಲಿಮೂರ್ತಿ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಏ.5ರಂದು ಸಂಜೆ ಯಾಗ ಶಾಲಾ ಪ್ರವೇಶ, ಭಗವದ್ ವಾಸುದೇವ ಪುಣ್ಯಾಹ, ಪ್ರಧಾನ ಹೋಮಗಳು, ರಾತ್ರಿ ದತ್ತಾತ್ರೇಯ ಮೂರ್ತಿ ಮತ್ತು ಶ್ರೀ ಆಂಜನೇಯ ದೇವರ ಮೂರ್ತಿ ಬಲಿ ಉತ್ಸವ ಮತ್ತು ಶ್ರೀ ಹನುಮಾನ್ ರಥೋತ್ಸವ ಜರಗಲಿದೆ.ಏ.6ರಂದು ಶ್ರೀ ರಾಮನವಮಿ ಪ್ರಯುಕ್ತ ಬೆಳಗ್ಗೆ ಶ್ರೀರಾಮ ನಾಮ ತಾರಕ ಮಂತ್ರ ಭಜನಾ ಮಂಗಳಂ, ಮಧ್ಯಾಹ್ನ ಪಾಲಕಿ ಬಲಿ, ಉತ್ಸವ, ರಾತ್ರಿ ರಕ್ತೇಶ್ವರಿ ಮತ್ತು ಗುಳಿಗ ದೈವಗಳ ನೇಮೋತ್ಸವ, ಮಹಾ ಬ್ರಹ್ಮರಥೋತ್ಸವ ಹಾಗೂ ಏ.8ರಂದು ದೇವರಗುಡ್ಡೆ ಆದಿ ಪಜಿರಡ್ಕದಲ್ಲಿ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ, ರಾತ್ರಿ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ- ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ