ಸುಂಟಿಕೊಪ್ಪ: ಶ್ರೀ ಚಾಮುಂಡೇಶ್ವರಿ ದೇವಳದಲ್ಲಿ ನವರಾತ್ರಿ ಉತ್ಸವ

KannadaprabhaNewsNetwork | Published : Oct 7, 2024 1:30 AM

ಸಾರಾಂಶ

ಶ್ರೀ ದೇವಿಗೆ ನೈವೇದ್ಯ ಪೂಜೆ, ಮಲ್ಲಿಗೆ ಹೂವಿನ ಪೂಜೆ, ಪುಷ್ಪಾರ್ಚನೆ, ಗಂಧದ ಅಭಿಷೇಕ ನಡೆಯಿತು. ಹೋಬಳಿ ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿದ್ದರು.

ಸುಂಟಿಕೊಪ್ಪ: ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲ್ಲಿ 4ನೇ ದಿನವಾದ ಭಾನುವಾರ ಬೆಳಗ್ಗೆ ದೇವಿಗೆ ನೈವೇದ್ಯ ಪೂಜೆ, ಮಲ್ಲಿಗೆ ಹೂವಿನ ಪೂಜೆ, ಪುಷ್ಪಾರ್ಚನೆ, ಗಂಧದ ಅಭಿಷೇಕ ನಡೆಯಿತು.

ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ನೇತೃತ್ವದಲ್ಲಿ ಸಂಜೆ ವಿಶೇಷ ಪೂಜೆ, ನಂತರ ಮಹಾಪೂಜೆ, ದೇವಿಗೆ ಭಸ್ಮದ ಅಲಂಕಾರ ಮಾಡುವುದರ ಮೂಲಕ ದೇವಾಲಯದಲ್ಲಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಯಿತು. ರಾತ್ರಿ ಮಹಾಪೂಜೆ, ಆರತಿ ಪೂಜೆ, ತುಪ್ಪದ ದೀಪ ಆರಾಧನೆ ನಡೆಯಿತು.

ಹೋಬಳಿ ವ್ಯಾಪ್ತಿಯ ನೂರಾರು ಭಕ್ತರು ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ 9 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

------------------------------------------------

ಸ್ನೇಹಮಯಿ ಕೃಷ್ಣ ಬಿಜೆಪಿ, ಜೆಡಿಎಸ್‌ ಪರ ವ್ಯಕ್ತಿ: ಚಲುವರಾಯ ಸ್ವಾಮಿಕನ್ನಡಪ್ರಭ ವಾರ್ತೆ ಮಡಿಕೇರಿ

ಸಚಿವ ಬೈರತಿ ಸುರೇಶ್ ವಿರುದ್ಧ ಸ್ನೇಹಮಯಿ ಕೃಷ್ಣ ನೀಡಿರುವ ದೂರು ರಾಜಕೀಯ ಪ್ರೇರಿತ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಹೇಳಿದ್ದಾರೆ.

ಮಡಿಕೇರಿಯಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ಸ್ನೇಹಮಯಿ ಕೃಷ್ಣ ಮತ್ತಿತರರು ಜೆಡಿಎಸ್ ಮತ್ತು ಬಿಜೆಪಿಯ ಉತ್ಪನ್ನಗಳು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಅದಕ್ಕೆ ನಾವು ಕಾಯಬೇಕು. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ತಪ್ಪು ಇಲ್ಲ. ಈಗ ನಿವೇಶನಗಳನ್ನು ವಾಪಸ್ ಕೊಡಲಾಗಿದೆ. ತನಿಖೆ ನಡೆಯುತ್ತಿದೆ. ತೀರ್ಪು ಬಂದ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದರು.ಬಿಜೆಪಿ, ಜೆಡಿಎಸ್‌ಗೆ ಕಾಂಗ್ರೆಸ್ ಸರ್ಕಾರವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಕೊಡಬೇಕಾದ ಅನುದಾನದ ಬಗ್ಗೆ ಕೇಂದ್ರವನ್ನ ಕೇಳುವ ಧೈರ್ಯ ರಾಜ್ಯದ ಬಿಜೆಪಿ, ಜೆಡಿಎಸ್ ಸಂಸದರಿಗಿಲ್ಲ. ಆ ಕೆಲಸ ಬಿಟ್ಟು ವಾರಕ್ಕೆ ಮೂರು ದಿನ ಇಲ್ಲಿ ಈ ವಿಚಾರ ಮಾತಾಡುತ್ತಾರೆ. ಬೇಲ್‌ನಲ್ಲಿ ಇರುವವರ ಕೇಸ್, ಲೋಕಾಯುಕ್ತ ಕೇಸಿನ ತನಿಖೆ ಗೊತ್ತಿದೆ. ಅದೆಲ್ಲಕ್ಕಿಂತ ಸಿದ್ದರಾಮಯ್ಯ ಅವರ ಕೇಸು ದೊಡ್ಡದೇನು ಅಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬೇರೆಯವರನ್ನ ಜೈಲಲ್ಲಿ ಕೂರಿಸಲು ಪ್ಲಾನ್ ಮಾಡಿದರು. ಆದರೆ ಅವರೇ ಆ ಸುಳಿಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರೇನೋ ಗೊತ್ತಿಲ್ಲ. ಏನೂ ಮಾಡಿಲ್ಲ ಎಂದ ಮೇಲೆ ಎಚ್‌ಡಿಕೆಗೆ ಜೈಲಿಗೆ ಹೋಗುವ ಭಯ ಯಾಕೆ ಎಂದು ಪ್ರಶ್ನಿಸಿದರು.

ಜಾತಿ ಸಮೀಕ್ಷೆ ಬಿಡುಗಡೆ ವಿಚಾರದಲ್ಲಿ ಪರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇಡೀ ರಾಷ್ಟ್ರದಲ್ಲಿ ಜಾತಿ ಸಮೀಕ್ಷೆ ಆಗಬೇಕು ಎನ್ನುವುದು ನನ್ನ ಅಭಿಪ್ರಾಯ. ಅದರಿಂದ ಏನೋ ನಡೆಯುತ್ತದೆ ಎನ್ನುವುದರ ಬಗ್ಗೆ ಅಪಪ್ರಚಾರ ಆಗುತ್ತಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಮಿತಿ ಇದೆ. ಲೋಪದೋಷ ಇದ್ದರೆ ಸರಿ ಮಾಡಲಾಗುತ್ತದೆ ಎಂದರು.

Share this article