ಗದಗ: ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ಹನುಮನ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ನಗರದ ಪ್ರಧಾನ ಅಂಚೆ ಕಚೇರಿ ಆವರಣದ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಅಂಚೆ ಮನರಂಜನಾ ಕೂಟದ ಪದಾಧಿಕಾರಿಗಳು ವಿವಿಧ ಹೂವು, ಹಾರ, ತಳಿರು ದೇವಸ್ಥಾನವನ್ನು ತೋರಣಗಳಿಂದ ಸಿಂಗರಿಸಿ ಹನುಮ ಜಯಂತಿ ಆಚರಿಸಿದರು.ವೆಂಕಟೇಶ ಕುಲಕರ್ಣಿ ಅವರ ನೇತೃತ್ವದಲ್ಲಿ ಪಂಚಾಮೃತದೊಂದಿಗೆ ಅಭಿಷೇಕಗೈದು, ಅಷ್ಟೋತ್ತರ ನಾಮಾವಳಿ ಸಹಿತ ಎಲ್ಲ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ನಂತರ ಮಹಿಳೆಯರೆಲ್ಲ ಸೇರಿ ಬಾಲ ಹನುಮನ ಕುರಿತಾದ ಭಕ್ತಿಗೀತೆಗಳ ಗಾಯನದ ಮೂಲಕ ತೊಟ್ಟಿಲೋತ್ಸವ ನೆರವೇರಿಸಿದರು. ನಂತರ ಅಭಿಷೇಕ, ಪಾನಕ, ಕೋಸಂಬರಿ ವಿತರಣೆ ಕಾರ್ಯಕ್ರಮ ಜರುಗಿತು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ವೇಳೆ ಮನರಂಜನಾ ಕೂಟದ ಸದಸ್ಯರಾದ ಡಿ.ಜಿ. ಮ್ಯಾಗೇರಿ, ವಿ.ಎಂ. ಅಂಗಡಿ, ಮುತ್ತಣ್ಣ ಆನೆಗುಂದಿ, ಮನೋಹರ ಕಡಿಯವರ, ಬಸವರಾಜ ಶೇಡದ, ಸವಿತಾ ಗುಡ್ಡದ, ವಾಣಿಶ್ರೀ ಜೋಷಿ, ಎಸ್.ವಿ. ಹಿರೇಮಠ, ಮಂಜುಳಾ ಕಡ್ಡಿವರ, ಶರಣಪ್ಪ ಬೆನಾಳ, ಸೂರಪ್ಪ ಎಚ್., ವಾಣಿ ಮಾಂಡ್ರೆ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ, ಯಂಕಪ್ಪ ಗುಗ್ಗರಿ, ಶಿವಕುಮಾರ ಸುಳ್ಳದ, ಈರಣ್ಣ ವಾಲ್ಮೀಕಿ, ರಾಮಚಂದ್ರ ದೇಶಪಾಂಡೆ, ಬಸವರಾಜ ಮೊರಬದ ಮತ್ತಿತರರು ಇದ್ದರು. 5ರಂದು ಡಾ. ಬಾಬು ಜಗಜೀವನರಾಂ ಜಯಂತಿ
ಗದಗ: ಡಾ. ಬಾಬು ಜಗಜೀವನರಾಂ 119ನೇ ಜಯಂತಿ ಕಾರ್ಯಕ್ರಮ ಏ. 5ರಂದು ಬೆಳಗ್ಗೆ 10.30ಕ್ಕೆ ನಗರದ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್ಲಿ ನಡೆಯಲಿದೆ.ಕಾರ್ಯಕ್ರಮಕ್ಕೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ವರ್ಗ ಮತ್ತು ಎಲ್ಲ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಚುನಾಯಿತ ಸದಸ್ಯರು ಹಾಗೂ ಸಮಾಜದ ಮುಖಂಡರು ಆಗಮಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.