ಬ್ಯಾಡಗಿಯಲ್ಲಿ ಸಂಭ್ರಮದ ಗ್ರಾಮದೇವತೆ ಜಾತ್ರಾ ಮಹೋತ್ಸವ ಮೆರವಣಿಗೆ

KannadaprabhaNewsNetwork |  
Published : Mar 06, 2025, 12:33 AM IST
ಮ | Kannada Prabha

ಸಾರಾಂಶ

ಮಂಗಳವಾರ ಸಂಜೆ 4.30ಕ್ಕೆ ಆರಂಭವಾದ ಮೆರವಣಿಗೆ ಬುಧವಾರ ಬೆಳಗಿನ ಜಾವ 4 ಗಂಟೆಗೆ ಸಂಪನ್ನಗೊಂಡಿತು. ಸುಮಾರು 12 ತಾಸು ನಡೆದ ಮೆರವಣಿಗೆ ಇಡೀ ಪಟ್ಟಣವನ್ನೇ ಮಂತ್ರಮುಗ್ಧರನ್ನಾಗುವಂತೆ ಮಾಡಿತು.

ಬ್ಯಾಡಗಿ: ಎಲ್ಲಿ ನೋಡಿದರೂ ಭಕ್ತರ ದಂಡು. ಬಾಯಲ್ಲಿ ಉಧೋ.. ಉಧೋ.. ಉದ್ಘೋಷ. ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದ ಯುವಕರು...

ಇದು ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಕಂಡುಬಂದ ದೃಶ್ಯಗಳು.

ಮಂಗಳವಾರ ಸಂಜೆ 4.30ಕ್ಕೆ ಆರಂಭವಾದ ಮೆರವಣಿಗೆ ಬುಧವಾರ ಬೆಳಗಿನ ಜಾವ 4 ಗಂಟೆಗೆ ಸಂಪನ್ನಗೊಂಡಿತು. ಸುಮಾರು 12 ತಾಸು ನಡೆದ ಮೆರವಣಿಗೆ ಇಡೀ ಪಟ್ಟಣವನ್ನೇ ಮಂತ್ರಮುಗ್ಧರನ್ನಾಗುವಂತೆ ಮಾಡಿತು. 25ಕ್ಕೂ ಹೆಚ್ಚು ಕಲಾ ತಂಡಗಳು: ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು 25ಕ್ಕೂ ಹೆಚ್ಚು ಕಲಾ ತಂಡಗಳು ಮೆರವಣಿಗೆಯುದ್ದಕ್ಕೂ ಸಾಗಿದವು. ನವದುರ್ಗೆಯರ ವೇಷ, ಮದ್ದಳೆ ಕಲಾತಂಡ, ನಂದಿಕೋಲು, ಸಮಾಳ, ವಿವಿಧ ವೇಷಭೂಷಣಗಳು ಜನರನ್ನು ಆಕರ್ಷಿಸಿದವು.8 ಕಿಮೀ ಮೆರವಣಿಗೆ: ಚಾವಡಿ ರಸ್ತೆಯಲ್ಲಿರುವ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಮುಖ್ಯರಸ್ತೆ ವಾಲ್ಮೀಕಿ ಸಂಘ, ಸ್ಟೇಷನ್ ರಸ್ತೆ ಇಸ್ಲಾಂಪೂರ ಗಲ್ಲಿ, ವಿದ್ಯಾನಗರ, ಎಪಿಎಂಸಿ, ಅಗಸನಹಳ್ಳಿ, ಬಸವೇಶ್ವರ ನಗರ, ಹಳೇ ಪುರಸಭೆ ಹಾಗೂ ಸುಭಾಸ್ ವೃತ್ತ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಒಟ್ಟು 8 ಕಿಮೀ ಮೆರವಣಿಗೆ ಸಾಗಿತು.ಸುಭಾಸ್ ವೃತ್ತ, ಕದರಮಂಡಲಗಿ ಕ್ರಾಸ್, ಹಳೇ ಪುರಸಭೆ ಸೇರಿದಂತೆ ಇನ್ನಿತರ ಕಡೆ ಸುಮಾರು ಮದ್ದುಗಳನ್ನು ಸುಡಲಾಯಿತು. ಭಟ್ಕಳ ಜೈ ಮಾರುತಿ ಕಲಾ ಸಮಿತಿ, ವಿರಾಟ ಘರ್ಜನೆ, ಡೋಲ್ ಪ್ರತಾಪ್ ಶಿರೋಳ, ಬಸವಕಲಾ ಲೋಕ ಬಸಾಪುರ, ದಾವಣಗೆರೆ ನಂದೀಶ ತಾಜ್ ಮ್ಯಾಜಿಕಲ್ ಬ್ಯಾಂಡ ಕಂಪನಿ ಗುಡಗೇರಿ ಹಾಗೂ ವಿವಿಧ ಆಕರ್ಷಕ ಕಲಾ ತಂಡಗಳೊಂದಿಗೆ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಪೊಲೀಸ್ ಬಿಗಿ ಬಂದೋಬಸ್ತ್‌: ಎಸ್ಪಿ ಅಂಶುಕುಮಾರ, ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರೋಳಕರ್, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಅವರ ನೇತೃತ್ವದಲ್ಲಿ ಸಿಪಿಐ ಮಹಾಂತೇಶ ಲಂಬಿ ಅವರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು. ಇದಕ್ಕಾಗಿ 2 ಸಿಪಿಐ, 6 ಪಿಎಸ್‌ಐ, 12 ಎಎಸ್‌ಐ, 88 ಪೊಲೀಸ್‌ ಸಿಬ್ಬಂದಿ ಹಾಗೂ 2 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು.ಮಾಜಿ ಶಾಸಕ ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಪುರಸಭೆ ಆಧ್ಯಕ್ಷ ಡಾ. ಬಾಲಚಂದ್ರಗೌಡ ಪಾಟೀಲ, ಸದಸ್ಯ ಬಸವರಾಜ ಛತ್ರದ, ಮುಖಂಡರಾದ ಗಂಗಣ್ಣ ಎಲಿ ಸೇರಿದಂತೆ ಹಲವು ಗಣ್ಯರು ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಟ್ಟಪ್ಪ ಚತ್ರದ, ವಿನಯಕುಮಾರ ಹಿರೇಮಠ. ಜಾತ್ರಾ ಸಮಿತಿ ಶಂಭು ಮಠದ, ನಾಗರಾಜ ದೇಸೂರ, ನಂದೀಶ ವೀರನಗೌಡ್ರ ಸೇರಿದಂತೆ ಇತರರು ಮೆರವಣಿಗೆಯ ನೇತೃತ್ವ ವಹಿಸಿದ್ದರು.ಜೋಯಿಸರಹರಳಹಳ್ಳಿ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ರಾಣಿಬೆನ್ನೂರು: ತಾಲೂಕಿನ ಜೋಯಿಸರಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗದೀಶ ಕುಂಚೂರು, ಉಪಾಧ್ಯಕ್ಷರಾಗಿ ಚಂದ್ರಗೌಡ ಚೌಡಪ್ಪಳವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಪರಮೇಶಪ್ಪ ಮುದ್ದಪ್ಪಳವರ, ಶ್ರೀಕಾಂತ ಹೊಟ್ಟಿಗೌಡ್ರು, ಬಸವರಾಜ ಮುದ್ದಪ್ಪಳವರ, ಬಸವರಾಜ ಗುಡಗೂರ, ಕುಮಾರ ಶಂಕ್ರಿಕೊಪ್ಪದ, ಅಶೋಕ ಗೋಣಿಮಠ, ಪ್ರೇಮಾ ನಂದಿಹಳ್ಳಿ, ಗಂಗಪ್ಪ ಕರಡೆರ, ಬಸವಂತಪ್ಪ ಮ್ಯಾಗೇರಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸುಧಾ ಕುಲಕರ್ಣಿ ತಿಳಿಸಿದ್ದಾರೆ.ಈ ವೇಳೆ ಜಿಪಂ ಮಾಜಿ ಸದಸ್ಯ ಶಿವಕುಮಾರ ಮುದ್ದಪ್ಪಳವರ, ಗ್ರಾಪಂ ಮಾಜಿ ಅಧ್ಯಕ್ಷ ದಾನಪ್ಪಗೌಡ ಪಾಟೀಲ, ಮಾಜಿ ಅಧ್ಯಕ್ಷ ಮಂಜಪ್ಪ ಮುದ್ದೆಮ್ಮನವರ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದ್ರಪ್ಪ ಮಾರೇರ, ಚಂದ್ರು ಶಿಡೇನೂರ, ಸಿದ್ದು ಹೊರಕೇರಿ, ಕೆಸಿಸಿ ಬ್ಯಾಂಕ್ ನಿರೀಕ್ಷಕ ಎಚ್.ಎನ್. ಪಾಟೀಲ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''