ಹಾವೇರಿ ಜಿಲ್ಲಾದ್ಯಂತ ಸಂಭ್ರಮದ ರಂಜಾನ್ ಹಬ್ಬ ಆಚರಣೆ

KannadaprabhaNewsNetwork | Published : Apr 1, 2025 12:48 AM

ಸಾರಾಂಶ

ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಮರು ನಗರದ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹಾವೇರಿ: ದಾನ, ಧರ್ಮಗಳ ಹಾಗೂ ಮಾನವ ಮೈತ್ರಿ ಸಂದೇಶ ಸಾರುವ, ಪರಸ್ಪರ ಬಾಂಧವ್ಯ, ಸಹೋದರತ್ವದ, ಸಮಾನತೆಯ ಬದುಕಿಗೆ ಪ್ರೇರಕವಾಗಿರುವ ರಂಜಾನ್(ಈದ್ ಉಲ್ ಫಿತ್ರ್) ಹಬ್ಬವನ್ನು ಸೋಮವಾರ ಜಿಲ್ಲಾದ್ಯಂತ ಮುಸ್ಲಿಮರು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಿದರು.

ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಮರು ನಗರದ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೃದ್ಧರು, ಯುವಕರು, ಅಂಗವಿಕಲರು, ಮಕ್ಕಳು ಎಲ್ಲರೂ ಒಂದಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಗುರುಗಳು(ಮೌಲ್ವಿಗಳು) ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ಹೊಸ ಬಟ್ಟೆಗಳನ್ನು ಧರಿಸಿ, ಸುಗಂಧ ದ್ರವ್ಯಗಳನ್ನು ಸಿಂಪಡಿಸಿ, ಅತಿಥಿ ಸತ್ಕಾರ, ಪರಸ್ಪರ ಆಲಿಂಗನ, ಹಸ್ತಲಾಘವದಿಂದ ಪರಸ್ಪರ ಶುಭ ಕೋರಿದರು.

ನಂತರ ಆವರಣದಲ್ಲಿದ್ದ ಭಿಕ್ಷುಕರು, ಬಡವರಿಗೆ ದಾನ ಮಾಡಿದರು. ಒಂದು ತಿಂಗಳ ಭಕ್ತಿ ಸಾಂದ್ರವಾದ ಕಠಿಣ ಉಪವಾಸ ವ್ರತಾಚರಣೆಯ ಅನಂತರ ಚಂದ್ರ ದರ್ಶನ ಆಧಾರದಲ್ಲಿ ಹಬ್ಬ ಆಚರಿಸಲಾಯಿತು. ಹಬ್ಬವನ್ನು ಜಿಲ್ಲಾದ್ಯಂತ ವೈಭವದಿಂದ ಆಚರಿಸಿ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಗರದಲ್ಲಿ ವಿವಿಧ ಪಕ್ಷಗಳ ಮುಖಂಡರು, ಗಣ್ಯರು ಮುಸ್ಲಿಮರಿಗೆ ರಂಜಾನ್ ಹಬ್ಬದ ಶುಭ ಕೋರಿದರು.

ಈ ವೇಳೆ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ, ಉಪಾಧ್ಯಕ್ಷರಾದ ಅನ್ವರ್ ಕಡೇಮನಿ, ಚಮನ್ ಮುಲ್ಲಾ, ಕಾರ್ಯದರ್ಶಿ ಮುಜಫರ್ ಕೊಟ್ಟಿಗೆರಿ, ಖಜಾಂಚಿ ಗುಲಾಮ್ ಬಂಕಾಪುರ್, ಸದಸ್ಯರಾದ ಉಸ್ಮಾನ್ ಸಾಬ್ ಪಟವೇಗಾರ, ಇಮಾಮ್ ಹುಸೇನ್ ಬಾಲೇವಾಯಿ, ಜಮೀರ್ ಜಿಗರಿ, ಸಾಧಿಕ್ ಸವಣೂರ, ಅಮಿರಜಾನ ಬೆಪಾರಿ, ಹಜರತ್ ಅಲಿ ತಹಶೀಲ್ದಾರ್, ಸಾದಿಕ ಕೋತ್ವಾಲ್, ಖಮರ್ ಕಲ್ಯಾಣಿ, ಇಕ್ಬಾಲ್ ಶಿಡ್ಗನಾಳ, ಅಜಮತ್ ಶೇಕ್, ಖಾಸಿಂಸಾಬ್ ಅಗಡಿ,ಕರಿಮ್ ಕೊಡದ, ರಫೀಕಸಾಬ ಸವಣೂರ, ಸಾಧಿಕ್ ಮೇಲ್ಮುರಿ, ಭಾಷಾ ತಹಶೀಲ್ದಾರ್, ಸಾದಿಕ ಮುಲ್ಲಾ, ಅಬ್ದುಲ್, ಶಫಿ ಗೋಲಿಬಾರ್, ಇಕ್ಬಾಲ್ ಶಿಡಿಗನಾಳ, ಮನ್ಸೂರ್ ಮುಲ್ಲಾ, ಬಾಬುಲಾಲ್ ಬಾಲೇಬಾಯಿ, ಅಯುಬ್ ಬಸವನಕೊಪ್ಪ, ನಸ್ತಾರ ಗುಡಿಗೇರಿ, ಇಸ್ಮೈಲ್ ಲಭೇರ, ಅಬ್ದುಲ್ ಖಾದರ್ ಧಾರವಾಡ, ಗೌಸ್ ಹತ್ತಿಕಾಳ, ವಲಿ ಅತ್ತಾರ, ವಾಷಿಂ ಸನ್ನುಖಾನನವರ, ಅಂಜುಮನ್ ಇಸ್ಲಾಂ ಸಂಸ್ಥೆ ಸದಸ್ಯರು, ನಗರಸಭೆ ಸದಸ್ಯರು, ಸಮಾಜದ ಮುಖಂಡರು, ಹಾವೇರಿಯ ಎಲ್ಲ ಜಮಾತಿನ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಇದ್ದರು.ಸಹಬಾಳ್ವೆ, ಸಾಮರಸ್ಯ ಮೂಡಲಿ

ಹಾನಗಲ್ಲ: ಪವಿತ್ರ ರಂಜಾನ್ ಹಿನ್ನೆಲೆ ಸೋಮವಾರ ಇಲ್ಲಿನ ದರ್ಗಾ ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಮರನ್ನು ಶಾಸಕ ಶ್ರೀನಿವಾಸ ಮಾನೆ ಭೇಟಿ ಮಾಡಿ ಹಬ್ಬದ ಶುಭ ಕೋರಿದರು.ದ್ವೇಷ, ಅಸೂಯೆ ಸುಡುವ ಮೂಲಕ ಪ್ರೀತಿ, ಬಾಂಧವ್ಯಗಳನ್ನು ಬೆಸೆಯುವ, ಸಹೋದರತೆ, ಸೌಹಾರ್ದತೆಯ ಸಂದೇಶಗಳನ್ನು ಸಾರುವ ಪವಿತ್ರ ರಂಜಾನ್ ಹಬ್ಬ ದೇಶದ ಐಕ್ಯತೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿ. ಎಲ್ಲೆಡೆ ಶಾಂತಿ, ಸಹಬಾಳ್ವೆ, ಸಾಮರಸ್ಯ ಮೂಡಲಿ ಎಂದು ಶಾಸಕ ಮಾನೆ ಇದೇ ಸಂದರ್ಭದಲ್ಲಿ ಆಶಿಸಿದರು.

ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮಾಜಿ ಅಧ್ಯಕ್ಷ ಖುರ್ಷಿದ್ ಹುಲ್ಲತ್ತಿ, ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ಮುಖಂಡರಾದ ಸಿಕಂದರ್ ವಾಲಿಕಾರ, ಮಕ್ಬೂಲ್‌ಸಾಬ ಬಡಗಿ, ಇರ್ಫಾನ್ ಸೌದಾಗರ, ಇಲಿಯಾಸ್ ಮಿಠಾಯಿಗಾರ, ಈರಣ್ಣ ಬೈಲವಾಳ, ಆದರ್ಶ ಶೆಟ್ಟಿ, ಪ್ರವೀಣ ಹಿರೇಮಠ, ಬಸವನಗೌಡ ಪಾಟೀಲ, ಲಿಂಗರಾಜ ಮಡಿವಾಳರ, ರಾಜೂ ಗಾಡಿಗೇರ, ರಾಮಚಂದ್ರ ಕಲ್ಲೇರ ಇದ್ದರು.

Share this article