ಡಾ. ರಾಮದಾಸ್ ಎಂ. ಪೈ ಅವರಿಗೆ ‘ಫಿಕ್ಕಿ ಅವಾರ್ಡ್‌’

KannadaprabhaNewsNetwork |  
Published : Oct 13, 2026, 02:45 AM IST
10ಪೈ | Kannada Prabha

ಸಾರಾಂಶ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಫೆಡರೇಷನ್ ಆಫ್ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ನೀಡುವ ಪ್ರತಿಷ್ಠಿತ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ - 2026’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಣಿಪಾಲ; ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿವಿಯ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಫೆಡರೇಷನ್ ಆಫ್ ಇಂಡಿಯನ್ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ನೀಡುವ ಪ್ರತಿಷ್ಠಿತ ‘ಲೆಜೆಂಡರಿ ಇನ್‌ಸ್ಟಿಟ್ಯೂಷನ್ ಬಿಲ್ಡರ್ - 2026’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನವದೆಹಲಿಯಲ್ಲಿ 12 ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಮಾಜಿ ಸಚಿವ ಡಾ. ಮುರಳಿ ಮನೋಹರ ಜೋಶಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ರಾಮದಾಸ್‌ ಎಂ. ಪೈ ಅವರ ಪರವಾಗಿ ಮಾಹೆಯ ಕುಲಪತಿ ಡಾ. ಶರತ್‌ ಕೆ. ರಾವ್‌ ಈ ಗೌರವ ಸ್ವೀಕರಿಸಿದರು.ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮಾಜಪರ ಕಾರ್ಯಗಳ ಮೂಲಕ ಸದೃಢ ರಾಷ್ಟ್ರನಿರ್ಮಾಣಕ್ಕೆ ಡಾ. ರಾಮದಾಸ್ ಎಂ. ಪೈ ಅವರು ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಡಾ. ಪೈ ಅವರು 2018 ರಲ್ಲಿ ಎಫ್‌ಸಿಸಿಐ ಯ ಜೀವಮಾನ ಸಾಧನೆ’ ಪ್ರಶಸ್ತಿ, ಪದ್ಮಭೂಷಣ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳಿಗೆ, ವಿದೇಶಗಳಲ್ಲಿಯೂ ಹಲವು ಮನ್ನಣೆಗಳಿಗೆ ಪಾತ್ರರಾಗಿದ್ದಾರೆ.

ಡಾ. ರಾಮದಾಸ್‌ ಪೈ ಅವರಿಗೆ ಎಫ್‌ಐಸಿಸಿಐ ಪ್ರಶಸ್ತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಾಹೆಯ ವರಿಷ್ಠರು, ಜ್ಞಾನಪ್ರಸರಣ, ಆರೋಗ್ಯ ಸೇವೆ, ಸಂಶೋಧನೆ ಮತ್ತು ಸೇವಾಬದ್ಧತೆಯ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಸಂಸ್ಥೆಗಳ ನಿರ್ಮಾತೃನ ಬದುಕಿನ ಬದ್ಧತೆಗೆ ಸಂದ ಗೌರವವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ಅವ್ಯವಸ್ಥೆ: ಸಿಬ್ಬಂದಿಗೆ ತರಾಟೆ
ಏತ ನೀರಾವರಿ ಯೋಜನೆಗಳಿಗೆ ಸಿಎಂ ಚಾಲನೆ