- ಮಾತಿನ ಚಕಮಕಿ, ವಾತಾವರಣ ತಿಳಿಗೊಳಿಸಿದ ದಂಡಾಧಿಕಾರಿ---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಪಟ್ಟಣದ ತಾಪಂ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯು ತಹಸಿಲ್ದಾರ್ ಬಸವರಾಜು ಅವರ ಅದ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಸಭೆ ಪ್ರಾರಂಭದಲ್ಲಿ ಗೋಪಾಲ್ ಮಾತನಾಡಿ, ನಾನು ಬಾಬು ಜಗಜೀವನರಾವ್ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಹಿಂದೆ ಇದ್ದಂತಹ ಪದಾಧಿಕಾರಿಗಳು ಇಲ್ಲ ಎಂದು ಹೇಳುತ್ತಿದ್ದಂತೆ ಹಿಂದಿನ ಅಧ್ಯಕ್ಷ ಬಾಲರಾಜುರವರು ನಾನೇ ಅಧ್ಯಕ್ಷ, ನೀನು ಯಾರು ಎಂದು ಪ್ರಶ್ನಿಸುತ್ತಿದ್ದಂತೆ 2 ಗುಂಪುಗಳ ಮುಖಂಡರಲ್ಲಿ ಗದ್ದಲ, ಏರುಧ್ವನಿಯ ಮಾತಿನ ಚಕಮಕಿ ಪ್ರಾರಂಭವಾಯಿತು. ಪರಸ್ಪರ ಆರೋಪ, ಪ್ರತ್ಯಾರೋಪಗಳು ಈ ವೇಳೆ ಕೇಳಿ ಬಂತು.ಏತನ್ಮಧ್ಯೆ ಸಭೆಯಲ್ಲಿದ್ದ ತಹಸಿಲ್ದಾರ್ ಬಸವರಾಜು ಅವರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಸಿಗೊಳಿಸಿದರು.ನಿಮ್ಮಲ್ಲಿರುವ ಸಮಸ್ಯೆ, ಗೊಂದಲಗಳನ್ನು ನಿಮ್ಮ ವೇದಿಕೆಗಳಲ್ಲಿ ಬಗೆಹರಿಸಿಕೊಳ್ಳಿ. ಇದು ಜಗಜೀವನರಾಂ ಜಯಂತಿ ಆಚರಣಾ ಸಭೆ, ಅಷ್ಟಕ್ಕೆ ನೀವು ಸಹಕಾರ ನೀಡಿ ಎಂದರು.ಏ.5ರಂದು ಜಯಂತಿ ಆಚರಿಸಲಾಗುವುದು, ಮುಖಂಡರ ಸಲಹೆಯಂತೆ ಸಮಾಜದಲ್ಲಿ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಪುರಸ್ಕಾರ ನೀಡಲಾಗುವುದು. ಮುಖ್ಯ ಭಾಷಣಕಾರರನ್ನು ನಿಮ್ಮ ಸಲಹೆಯಂತೆ ತೀರ್ಮಾನಿಸಲಾಗುವುದು ಎಂದರು.ಈ ವೇಳೆ ಹಾಜರಿದ್ದ ಹಲವು ಮುಖಂಡರು ತಾಲೂಕು ಆಡಳಿತ ಬಾಬು ಜಗಜೀವರಾಂ ಸಮುದಾಯ ಭವನ ಕೊಳ್ಳೇಗಾಲದಲ್ಲಿ ನಿರ್ಮಾಣಕ್ಕೆ ಸಹಕರಿಸಬೇಕು. ಸಮಾಜದ ಅಭ್ಯುದಯಕ್ಕೆ ತಾಲೂಕು ಆಡಳಿತ, ಜಿಲ್ಲಾಡಳಿತ ಸ್ಪಂದಿಸಬೇಕು. ಈ ಕುರಿತು ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ತಾಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ, ನಗರಸಭೆ ಪೌರಾಯುಕ್ತೆ ರುದ್ರಮ್ಮ ಶರಣಯ್ಯ, ಮುಳ್ಳೂರು ಮಂಜು ಇನ್ನಿತರಿದ್ದರು.
---25ಕೆಜಿಎಲ್13 ಪೂರ್ವಭಾವಿ ಸಭೆಯಲ್ಲಿ ನಡೆದ ಗದ್ದಲ.