ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ವೇದಾವತಿ ನಗರದಲ್ಲಿರುವ ಉಪ್ಪಾರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉಪ್ಪಾರ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಉಪ್ಪಾರ ಸಮುದಾಯ ಭವನದ 25 ಲಕ್ಷ ರು. ವೆಚ್ಚದ ಮುಂದುವರೆದ ಕಾಮಗಾರಿ ಸ್ಥಗಿತಗೊಂಡು ಸುಮಾರು ಒಂದೂವರೆ ವರ್ಷಗಳು ಕಳೆದಿದ್ದು ಉತ್ತಮ ಗುಣಮಟ್ಟದ ಕಾಮಗಾರಿಯೂ ನಡೆದಿಲ್ಲ. ಇದಕ್ಕೆ ಕಾಮಗಾರಿ ನಿರ್ವಹಿಸುತ್ತಿರುವ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ. ಆದ್ದರಿಂದ ಕೂಡಲೇ ಸಂಬoಧಪಟ್ಟ ಅಧಿಕಾರಿಗಳು ಕ್ರಮವಹಿಸುವ ಮೂಲಕ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಆಲೂರು ರಾಮಣ್ಣ ಮಾತನಾಡಿ, ದಾರಿ ಸಮಸ್ಯೆ ಸುಮಾರು ವರ್ಷಗಳ ಬೇಡಿಕೆಯಾಗಿದ್ದು ಸತತ ಹೋರಾಟದ ಫಲವಾಗಿ ಇಂದು ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ತಹಸೀಲ್ದಾರ್ ಹಾಗೂ ಪೌರಾಯುಕ್ತರು ಜಾಗ ನಿಗದಿ ಮಾಡಿದ್ದಾರೆ. ಆದರೂ ರಸ್ತೆ ಒತ್ತುವರಿ ಬಿಟ್ಟುಕೊಡುತ್ತಿಲ್ಲ. ಇದು ಹೀಗೇ ಮುಂದುವರೆದರೆ ನಾವು ಸಹ ರಸ್ತೆ ಮುಚ್ಚ ಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.