ಹೋರಾಟಗಾರರಿಗೆ 21 ರಂದು ಸನ್ಮಾನ

KannadaprabhaNewsNetwork | Published : Apr 19, 2025 12:30 AM

ಸಾರಾಂಶ

ನೀರಾವರಿ ಹೋರಾಟ ವೇದಿಕೆಯಿಂದ ಸನ್ಮಾನ ಮಾಡಲು ನಿರ್ಧರಿಸಲಾಗಿದ್ದು ದಿ.21ರಂದು ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ವೇದಿಕೆ ಅಧ್ಯಕ್ಷ ಎಸ್‌ ಶಿವಪ್ರಸಾದ್ ಹಾಗೂ ಕಾರ್ಯದರ್ಶಿ ಸೊಗಡು ವೆಂಕಟೇಶ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿಗೆ ತುಂಗಭದ್ರಾ ನೀರಿನ ಪೂರೈಕೆಯಾಗುತ್ತಿದ್ದು ಹರ್ಷ ತಂದಿದೆ. ಈ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಜನ ಹೋರಾಟ ಮಾಡಿದ್ದು ಅವರನ್ನು ನೀರಾವರಿ ಹೋರಾಟ ವೇದಿಕೆಯಿಂದ ಸನ್ಮಾನ ಮಾಡಲು ನಿರ್ಧರಿಸಲಾಗಿದ್ದು ದಿ.21ರಂದು ಪಟ್ಟಣದ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ವೇದಿಕೆ ಅಧ್ಯಕ್ಷ ಎಸ್‌ ಶಿವಪ್ರಸಾದ್ ಹಾಗೂ ಕಾರ್ಯದರ್ಶಿ ಸೊಗಡು ವೆಂಕಟೇಶ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಲ್ಲದೇ ದಶಕಗಳ ಕಾಲ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲೂ ಕುಡಿಯುವ ನೀರಿಗಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದರು. ಆದರೆ ಯಾವ ಕಾಲದಲ್ಲೂ ಯೋಜನೆಗಳು ಬಂದಿರಲಿಲ್ಲ. ಕೊನೆಗೆ 30ದಿನಗಳ ಕಾಲ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಪಾವಗಡದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿ ಒತ್ತಡ ಹೇರಿದ ಪರಿಣಾಮ 2352ಕೋಟಿ ವೆಚ್ಚದಲ್ಲಿ ವಿಜಯನಗದ ಜಿಲ್ಲೆ ಹೊಸಪೇಟೆ ಡ್ಯಾಂನಿಂದ ತುಂಗಭದ್ರಾ ನದಿ ಪೂರೈಕೆ ಸಾಧ್ಯವಾಗಿದೆ. ಈ ನೀರು ತಾಲೂಕಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಾವಗಡ ಸಮಗ್ರ ನೀರು ಹೋರಾಟ ವೇದಿಕೆ, ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟಗಾರರನ್ನು ಗೌರವಿಸಲು ಇದೇ ದಿ.21ರಂದು ಬೆಳಗ್ಗೆ 11ಗಂಟೆಗೆ ಎಸ್‌ಎಸ್‌ಕೆ ಸಮುದಾಯ ಭವನದಲ್ಲಿ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು. ಕಾರ್ಯಕ್ರಮಕ್ಕೂ ಮೊದಲು ಪಟ್ಟಣದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಜಪಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ, ತಾಲೂಕು ಜೆಡಿಎಸ್‌ ಮುಖಂಡರಾದ ರಾಜಶೇಖರಪ್ಪ, ಹೋರಾಟಗಾರ ಹಾಗೂ ಪ್ರಗತಿ ಪರ ಚಿಂತಕರಾದ ಪುರುಷೋತ್ತಮರೆಡ್ಡಿ , ಹಿರಿಯ ಮುಖಂಡರಾದ ಜಿ.ಟಿ.ಗಿರೀಶ್,ಡಾ.ಕೆ.ಎಂ.ಪ್ರಭಾಕರ್,ಶಿವಕುಮಾರ್ ಸಾಕೇಲ್, ಕವಲಗೇರಿ ರಾಮಾಂಜನಪ್ಪ, ಬ್ಯಾಡನೂರು ಶಿವು ಇತರರಿದ್ದರು.

Share this article