ಅಭಿವೃದ್ಧಿ ಹೆಸರಿನಲ್ಲಿ ಲೂಟಿ ವಿರುದ್ಧ ಹೋರಾಟ

KannadaprabhaNewsNetwork |  
Published : Aug 27, 2025, 01:00 AM IST
26ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಕಾಡು ಕದಿರೇನಹಳ್ಳಿ ಗ್ರಾಮದ ಡೇರಿ ವಾರ್ಷಿಕೋತ್ಸವದಲ್ಲಿ ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿದರು. | Kannada Prabha

ಸಾರಾಂಶ

ನಂಜೇಗೌಡರು ಸತ್ಯವನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸಲು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಡಿಸಿಸಿ ಬ್ಯಾಂಕಿನಿಂದ ಸಾಕಷ್ಟು ಲಾಭ ಪಡೆದು ಅದರಿಂದಲೇ ಶಾಸಕರಾಗಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಗೋವಿಂದೇಗೌಡರ ವಿರುದ್ದ ಸುಳ್ಳು ಆರೋಪ ಮಾಡಿ ಬ್ಯಾಂಕ್‌ನಿಂದ ಯಾರೂ ಸಾಲ ಪಡೆಯದಂತೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಕೋಮುಲ್ ವತಿಯಿಂದ ಕೈಗೊಂಡಿರುವ ಎಂ.ವಿ.ಕೆ ಗೋಲ್ಡನ್ ಡೇರಿ, ಸೋಲಾರ್ ಘಟಕ ಹಾಗೂ ಐಸ್ ಕ್ರೀಂ ಘಟಕ ಸ್ಥಾಪನೆಗೆ ತಮ್ಮ ವಿರೋಧವಿಲ್ಲ. ಆದರೆ ಅದರ ಹೆಸರಲ್ಲಿ ಕೋಟ್ಯತರ ಹಣ ಲೂಟಿ ಮಾಡಲಾಗಿದೆ. ಅದರ ವಿರುದ್ದ ಮಾತ್ರ ನನ್ನ ಹೋರಾಟವೇ ಹೊರತು ಯಾವುದೇ ಸ್ವಾರ್ಥವಿಲ್ಲ ಎಂದು ಶಾಸಕ ಹಾಗೂ ಕೋಮುಲ್ ನಿರ್ದೇಶಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.ತಾಲೂಕಿನ ಕೆ.ಕದಿರೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಿರುವುದಕ್ಕೆ ಕೋಮುಲ್ ಅಧ್ಯಕ್ಷರಾಗಿರುವ ಕೆ.ವೈ.ನಂಜೇಗೌಡರು ಈ ಮೂರು ಘಟಕಗಳ ಶಂಕುಸ್ಥಾಪನೆಯಲ್ಲಿ ಶಾಸಕರು ಭಾಗವಹಿಸಿದ್ದರು. ಆಗ ಅವರು ಧ್ವನಿ ಎತ್ತದೆ ಈಗ ವಿನಾಕಾರಣ ಆರೋಪ ಮಾಡುತ್ತಿರುವುದು ಸರಿಯಿಲ್ಲ ಎಂದಿದ್ದಾರೆ. ಆಂದು ಅವರು ಪೂಜೆಗೆ ಕರೆದಿದ್ದರು ಹೋಗಿದ್ದೆ ಅಷ್ಟೇ ಅದರಲ್ಲಿನ ಭ್ರಷ್ಟಾಚಾರ ನಡೆದಿರುವುದು ಆಗ ಗೊತ್ತಿರಲಿಲ್ಲ ಎಂದರು.

ನಂಜೇಗೌಡರಿಂದ ಗೊಂದಲ ಸೃಷ್ಟಿ

ಅಲ್ಲಿ ನಡೆದಿರುವ ಭ್ರಷ್ಟಾಚಾರ ಈಗ ಗೊತ್ತಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ ಜನರ ಹಿತ ಮಾತ್ರ ಅಡಗಿದೆ . ನಂಜೇಗೌಡರು ಸತ್ಯವನ್ನು ಮರೆಮಾಚಿ ಜನರನ್ನು ದಾರಿ ತಪ್ಪಿಸಲು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಡಿಸಿಸಿ ಬ್ಯಾಂಕಿನಿಂದ ಸಾಕಷ್ಟು ಲಾಭ ಪಡೆದು ಅದರಿಂದಲೇ ಶಾಸಕರಾಗಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಗೋವಿಂದೇಗೌಡರ ವಿರುದ್ದ ಸುಳ್ಳು ಆರೋಪ ಮಾಡಿ ಬ್ಯಾಂಕ್‌ನಿಂದ ಯಾರೂ ಸಾಲ ಪಡೆಯದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗೋವಿಂದೇಗೌಡರ ವಿರುದ್ದ ಮಾಡಿದ್ದ ಎಲ್ಲಾ ಆರೋಪಗಳನ್ನು ಸಾಭಿತುಪಡಿಸಲು ಅವರಿಂದ ಸಾಧ್ಯವಾಗಿಲ್ಲ ಎಂದರಲ್ಲದೆ ಬ್ಯಾಂಕ್ ಹೆಸರೇಳಿಕೊಂಡು ನಾವು ಗೆದ್ದಿಲ್ಲ ಎಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಹಾಲು ಕರೆಯುವ ಮಹಿಳೆಯರ ಋಣ ನನ್ನ ಮೇಲಿದ್ದು ಅವರಿಗೆ ನ್ಯಾಯ ಕೊಡಿಸಲು ಹೋರಾಡುವೆ ವಿನಹ ನಂಜೇಗೌಡರ ವಿರುದ್ದ ಅಲ್ಲ ಎಂದರು.

ಖಾಸಗಿ ಡೇರಿಗಳ ಹಾವಳಿ

ತಾಲೂಕಿನಲ್ಲಿ ಖಾಸಗಿ ಡೇರಿಗಳ ಹಾವಳಿ ಮಿತಿ ಮೀರಿದ್ದು ಮುಂದೆ ಗಡಿಗಳಲ್ಲಿ ಚೆಕ್ ಪೋಸ್ಟ್ ಹಾಕಿ ಹೊರಗಿನಿಂದ ಹಾಲು ಬರದಂತೆ ಹಾಗೂ ಇಲ್ಲಿಂದ ಖಾಸಗಿ ಡೇರಿಗಳಿಗೆ ಹಾಲು ಹೋಗದಂತೆ ತಡೆಯಲಾಗುವುದು ಎಂದು ತಿಳಿಸಿದರು. ಪ್ರತಿ ಗ್ರಾಮದಲ್ಲಿಯೂ ಡೇರಿ ಇಲ್ಲದ ಕಾರಣ ತಾಲೂಕಿಗೆ ಹೆಚ್ಚಿನ ನಿರ್ದೇಶಕ ಸ್ಥಾನ ಸಿಗಲು ಸಾಧ್ಯವಾಗಿಲ್ಲ, ಆದ್ದರಿಂದ ಪ್ರತಿ ಗ್ರಾಮದಲ್ಲಿಯೂ ಡೇರಿ ಸಂಘಗಳನ್ನು ಸ್ಥಾಪನೆ ಮಾಡಲಾಗುವುದು ಎಂದರು.

ತಮ್ಮ ಗುರಿ ಏನಿದ್ದರೂ ಹಾಲು ಡೇರಿಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ದಿಪಡಿಸಿ ರೈತ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸುವುದು ಮಾತ್ರವಾಗಿದೆ ರೈತರ ಒಂದು ರುಪಾಯಿ ಹಣವನ್ನೂ ಮುಟ್ಟದಿರಲು ಶಪತ ಮಾಡಿರುವೆ, ಈ ಹಿನ್ನೆಲೆಯಲ್ಲಿ ಒಕ್ಕೂಟದಲ್ಲಿ ನಡೆಯುವ ಸಭೆಗಳಲ್ಲಿ ಟೀ,ಕಾಫಿ ನೀರು ಸಹ ಮುಟ್ಟದಿರಲು ನಿರ್ಧರಿಸಿರುವೆ ಎಂದರು. ಈ ವೇಳೆ ಸಂಘದ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ರಾಜೇಂದ್ರ, ಒಕ್ಕೂಟದ ಉಪ ವ್ಯವಸ್ಥಾಪಕ ಗಿರಿಶ್ ಗೌಡ, ಭಾನುಪ್ರಕಾಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಮಹಾದೇವ್, ಕಾರ್ಯದರ್ಶಿ ವೆಂಕಟರಾಮ್, ಆ.ನಾ.ಹರೀಶ್ ಇತರರು ಇದ್ದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ