ಕನ್ನಡಪ್ರಭ ವಾರ್ತೆ ಚಿಂತಾಮಣಿ
ರಥ ಸ್ಥಳಾಂತರಕ್ಕೆ ವಿರೋಧ
ನೂರಾರು ವರ್ಷಗಳ ಹಿಂದಿನಿಂದಲೂ ದೇವಾಲಯದ ಮುಂಭಾಗವೇ ರಥವನ್ನು ನಿಲ್ಲಿಸಲಾಗುತ್ತಿತ್ತು. ಕೆಲವು ವರ್ಷಗಳ ಹಿಂದೆ ರಥವು ಶಿಥಿಲಗೊಂಡಿದ್ದರಿಂದ ೬ ತಿಂಗಳಿಂದ ಟ್ರಸ್ಟ್ ಮತ್ತು ಹಿಂದೂ ಪರ ಸಂಘಟನೆಗಳು ಸೇರಿ ಪುನರ್ ನಿರ್ಮಿಸಿ ಚಾಲನೆ ಕೊಟ್ಟ ನಂತರ ಇದೀಗ ದಿಢೀರನೆ ರಥವನ್ನು ಸ್ಥಳಾಂತರ ಮಾಡಬೇಕು, ಚೌಕವನ್ನ ಅಭಿವೃದ್ಧಿಪಡಿಸುತ್ತೇವೆಂದು ನಗರಸಭೆಯ ಪೌರಾಯುಕ್ತರು ಹೇಳಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಥವನ್ನು ಸ್ಥಳಾಂತರಿಸಲು ಬಿಡುವುದಿಲ್ಲ. ಒಂದು ವೇಳೆ ಬಲವಂತವಾಗಿ ಸ್ಥಳಾಂತರಿಸಲು ಮುಂದಾದರೆ ದೇವಾಲಯ ಟ್ರಸ್ಟ್ ಹಾಗೂ ಹಿಂದೂ ಪರ ಸಂಘಟನೆಗಳಿಂದ ಉಗ್ರ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ. ಸರ್ವೇ ಮಾಡಿಸುವ ಭರವಸೆನಂತರ ಮಾತನಾಡಿದ ತಹಸಿಲ್ದಾರ್ ಸುದರ್ಶನ್ ಯಾದವ್ ಭಕ್ತಾದಿಗಳ ಅಹವಾಲು ಅಲಿಸಿದ ನಂತರ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೇ ಮಾಡಿಸುತ್ತೇವೆ. ನಮ್ಮಲ್ಲಿ ದಾಖಲೆಗಳಿದ್ದಲ್ಲಿ ಸರ್ವೆ ಮಾಡಲು ಸುಗಮವಾಗಲಿದೆ. ಇಲ್ಲದಿದ್ದಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ದಾಖಲೆಗಳನ್ನು ತರಿಸಿಕೊಂಡು ಸರ್ವೇ ಮಾಡಿಸಿಕೊಡಲಾಗುತ್ತದೆಯೆಂದರು. ಈ ಸಂದರ್ಭದಲ್ಲಿ ವಕೀಲ ನೀಲಿ ಮಂಜುನಾಥ್, ಸನಾತನ ಸೇವಾ ಸಂಘದ ಅನುಪಮಾರೆಡ್ಡಿ, ಜಗದೀಶ್, ರವಿ ಅನಿಲ್‌ಕುಮಾರ್, ಮಣಿಕಂಠ, ಮಾಡಿಕೆರೆ ಅರುಣ್, ಕುರುಟಹಳ್ಳಿ ನಾಗೇಶ್, ಜಿತೇಂದ್ರ, ಸುನಿಲ್‌ಕುಮಾರ್, ಮೋಹನ್, ಕಾಳಿ, ಮತ್ತಿತರ ಮುಖಂಡರುಗಳು ಉಪಸ್ಥಿತರಿದ್ದರು