ಭರ್ತಿಯಾದ ಕೆರೆ, ಸಂತಸಗೊಂಡ ರೈತರು!

KannadaprabhaNewsNetwork |  
Published : Oct 05, 2026, 03:00 AM IST
ತುಂಬಿದ ಕೆರೆ, ಹರ್ಷಗೊಂಡ ರೈತರು! | Kannada Prabha

ಸಾರಾಂಶ

ಮಧುರಖಂಡಿ-ಯಲ್ಲಟ್ಟಿ ಮಾರ್ಗದ ಮಧ್ಯದಲ್ಲಿರುವ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಪಕ್ಕದ ಕೆರೆ ನೀರಿನಿಂದ ಭರ್ತಿಯಾಗಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಧುರಖಂಡಿ-ಯಲ್ಲಟ್ಟಿ ಮಾರ್ಗದ ಮಧ್ಯದಲ್ಲಿರುವ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಪಕ್ಕದ ಕೆರೆ ನೀರಿನಿಂದ ಭರ್ತಿಯಾಗಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆ ಕೊರತೆಯಿಂದ ಹಲವು ದಿನಗಳಿಂದ ಈ ಭಾಗದಲ್ಲಿ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದರು.ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿತ್ತು. ಜಮೀನುಗಳಲ್ಲಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಅಗತ್ಯ ನೀರು ದೊರೆಯದೆ ರೈತರು ಆತಂಕಗೊಂಡಿದ್ದರು. ಇದೀಗ ಕೆರೆಗೆ ನೀರು ತುಂಬಿದ್ದರಿಂದ ಸುತ್ತಮುತ್ತಲಿನ ಸಾವಿರಾರು ರೈತರಿಗೆ ಅನುಕೂಲವಾಗಿದೆ. ಕೆರೆಯಲ್ಲಿ ನೀರು ಸಂಗ್ರಹವಾಗಿರುವ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚುವ ನಿರೀಕ್ಷೆ ಮೂಡಿದ್ದು, ಈ ಭಾಗದಲ್ಲಿರುವ ಅನೇಕ ಕೊಳವೆಬಾವಿ, ಬೋರ್‌ವೆಲ್ ಹಾಗೂ ತೆರೆದ ಬಾವಿಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ನೆರವು ದೊರೆಯಲಿದೆ.

ಕೆರೆ ಭರ್ತಿಯಾಗಿರುವುದು ರೈತರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ನೂರಾರು ಏಕರೆ ಜಮೀನಿನ ರೈತರಿಗೆ ನೆಮ್ಮದಿ ತಂದಿದೆ. ಈಗ ಕಬ್ಬು ಶೇಂಗಾ, ಅರಿಷಿಣ ಇನ್ನಿತರ ಆಣಿಜ್ಯ ಬೆಳೆಗಳಿಗೆ ನೀರಿನ ಅವಶ್ಯಕತೆ ಉಂಟಾಗಿತ್ತು. ಈಗ ಅನುಕೂಲವಾಗಿದೆ ಎನ್ನುತ್ತಾರೆ ಈ ಭಾಗದ ರೈತರು. ಬೇಸಿಗೆಯ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕೆರೆ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿ, ಮಳೆನೀರು ಸಂಗ್ರಹಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಜಿಎಲ್‌ಬಿಸಿ ಕಾಲುವೆಯ ಅಧಿಕಾರಿಗಳ ಅಭಿಪ್ರಾಯಟ್ಟಿದ್ದಾರೆ.

ಕೆರೆ ತುಂಬಿರುವುದರಿಂದ ಈ ಭಾಗದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಂತಾಗಿದೆ. ಜಿಎಲ್‌ಬಿಸಿ ಪ್ರಮುಖ ಕಾಲುವೆ ಮೂಲಕ ಕೆರೆ ಸಂಪೂರ್ಣ ಭರ್ತಿಯಾಗಿರುವುದಕ್ಕೆ ರೈತ ಮುಖಂಡ ಜಟ್ಟೆಪ್ಪ ದೊಡಮನಿ ಮತ್ತು ಹಲವು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಡವಾಳ ಶಾಹಿಗಳ ಹಿಡಿತದಲ್ಲಿ ಪ್ರಪಂಚ
ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಧಿಕಾರಕ್ಕೆ