ಮಹದಾಯಿ ಹೋರಾಟಕ್ಕೆ ಮತ್ತೆ ಚಿತ್ರರಂಗ: ಶಿವರಾಜಕುಮಾರ್

KannadaprabhaNewsNetwork |  
Published : Oct 06, 2026, 02:00 AM IST
ಬೇಲ್‌ ಚಿತ್ರದ ಪ್ರಮೋಷನ್‌ಗೆ ಹುಬ್ಬಳ್ಳಿಗೆ ಆಗಮಿಸಿದ್ದ ನಟ ಶಿವರಾಜಕುಮಾರ್‌ ಅ‍ವರನ್ನು ಸಾರೋಟದಲ್ಲಿ ಮೆರವಣಿಗೆ ಮಾಡಲಾಯಿತು. | Kannada Prabha

ಸಾರಾಂಶ

ಮಹದಾಯಿ ವಿಚಾರದಲ್ಲಿ ಕನ್ನಡ ಚಿತ್ರರಂಗ ಈ ಭಾಗದ ಹೋರಾಟದಿಂದ ದೂರ ಉಳಿದಿಲ್ಲ. ಈ ಭಾಗದ ಜ್ವಲಂತ ಸಮಸ್ಯೆಯಾಗಿರುವ ಮಹದಾಯಿ ಹೋರಾಟಕ್ಕೆ ಚಿತ್ರರಂಗ ಸದಾ ಕೈಜೋಡಿಸಲಿದೆ.

ಹುಬ್ಬಳ್ಳಿ:

ತಮ್ಮ ಅಭಿನಯದ "ಬೇಲ್‌ " ಚಿತ್ರದ ಪ್ರಚಾರಕ್ಕಾಗಿ ನಟ ಶಿವರಾಜಕುಮಾರ್ ಸೋಮವಾರ ನಗರಕ್ಕೆ ಆಗಮಿಸಿ ಇಲ್ಲಿನ ಅಪ್ಸರಾ ಚಿತ್ರಮಂದಿರಕ್ಕೆ ಭೇಟಿ ನೀಡಿದರು.

ಚಿತ್ರತಂಡದೊಂದಿಗೆ ಆಗಮಿಸಿದ ಅವರು, ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದರು. ಇದಕ್ಕೂ ಮೊದಲು ಪದ್ಮಾ ಚಿತ್ರ ಮಂದಿರದಿಂದ ಶಿವರಾಜಕುಮಾರ್‌ ಅವರನ್ನು ಅಪ್ಸರಾ ಚಿತ್ರಮಂದಿರದ ವರೆಗೆ ಸಾರೋಟದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ "ಬೇಲ್‌ " ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಟುಂಬ ಸಮೇತ ಜನರು ಚಿತ್ರ ವೀಕ್ಷಿಸುತ್ತಿದ್ದು, ಕಥೆ ಹಾಗೂ ತಾವು ನಿರ್ವಹಿಸಿರುವ ವಿಭಿನ್ನ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದರು.

ಮಹದಾಯಿ ಹೋರಾಟಕ್ಕೆ ಚಿತ್ರರಂಗ:

ಮಹದಾಯಿ ವಿಚಾರದಲ್ಲಿ ಕನ್ನಡ ಚಿತ್ರರಂಗ ಈ ಭಾಗದ ಹೋರಾಟದಿಂದ ದೂರ ಉಳಿದಿಲ್ಲ. ಈ ಭಾಗದ ಜ್ವಲಂತ ಸಮಸ್ಯೆಯಾಗಿರುವ ಮಹದಾಯಿ ಹೋರಾಟಕ್ಕೆ ಚಿತ್ರರಂಗ ಸದಾ ಕೈಜೋಡಿಸಲಿದೆ. ಆದಷ್ಟು ಶೀಘ್ರ ಹೋರಾಟದ ಕುರಿತು ಚಿತ್ರರಂಗದ ಪ್ರಮುಖರೊಂದಿಗೆ ಚರ್ಚೆ ನಡೆಸಲಾಗುವುದು. ಮತ್ತೆ ಕನ್ನಡ ಚಿತ್ರರಂಗ ಮಹದಾಯಿ ಹೋರಾಟಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಚಿತ್ರದ ನಿರ್ದೇಶಕ ಪವನ್‌ ವಡೆಯರ್‌, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಮಾಜಿ ನಿರ್ದೇಶಕ ಶಿವಾನಂದ ಮುತ್ತಣ್ಣವರ, ಅಡಿವೆಪ್ಪ ಶಿವಳ್ಳಿ, ಮಲ್ಲಿಕಾರ್ಜುನ ಕುನ್ನೂರ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡವಾಡದಲ್ಲಿ ರಸ್ತೆ ಹದಗೆಟ್ಟು ಸಂಚಾರ ದುಸ್ತರ
ನೌಕಾನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ವಂಚನೆ: ಆರೋಪ