27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಗುರುಕರ್

KannadaprabhaNewsNetwork |  
Published : Oct 15, 2026, 01:15 AM IST
ಫೋಟೊ-14ಬಿವೈಡಿ3 | Kannada Prabha

ಸಾರಾಂಶ

ಸಲ್ಲಿಕೆಯಾಗಿರುವ 12,233 ಅರ್ಜಿಗಳಲ್ಲಿ ಫಾರಂ ನಂಬರ್ 6ರಲ್ಲಿ 5,945 ಅರ್ಜಿಗಳು ಸಲ್ಲಿಕೆಯಾಗಿವೆ. ಫಾರಂ ನಂಬರ್ 6ಎ ರಲ್ಲಿ 2, ಫಾರಂ ನಂಬರ್ 7ರಲ್ಲಿ 1,021 ಹಾಗೂ ಫಾರಂ ನಂಬರ್ 8ರಲ್ಲಿ 5,265 ಅರ್ಜಿಗಳು ಸಲ್ಲಿಕೆಯಾಗಿವೆ.

ಕನ್ನಡಪ್ರಭವಾರ್ತೆ ರಾಮನಗರ

ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಅ.27ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭಾಗವಾಗಿ ಆಗಸ್ಟ್ 24 ರಂದು ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 2026ರ ಆಗಸ್ಟ್ 24 ರಿಂದ ಸೆ. 23ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು. ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 12,233 ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 3,599, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 3,894, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 2,456 ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2,284 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.

ಸಲ್ಲಿಕೆಯಾಗಿರುವ 12,233 ಅರ್ಜಿಗಳಲ್ಲಿ ಫಾರಂ ನಂಬರ್ 6ರಲ್ಲಿ 5,945 ಅರ್ಜಿಗಳು ಸಲ್ಲಿಕೆಯಾಗಿವೆ. ಫಾರಂ ನಂಬರ್ 6ಎ ರಲ್ಲಿ 2, ಫಾರಂ ನಂಬರ್ 7ರಲ್ಲಿ 1,021 ಹಾಗೂ ಫಾರಂ ನಂಬರ್ 8ರಲ್ಲಿ 5,265 ಅರ್ಜಿಗಳು ಸಲ್ಲಿಕೆಯಾಗಿವೆ.

2026ರ ಅಕ್ಟೋಬರ್ 22ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳ ವಿಲೇವಾರಿ ಕಾರ್ಯ ನಡೆಯಲಿದೆ. 2026ರ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ, ಇದುವರೆಗೆ ನೋ ಮ್ಯಾಪಿಂಗ್ ಹಾಗೂ ಅನಾಮಲಿಸ್ (2002ಕ್ಕೆ ಮ್ಯಾಪಿಂಗ್‌ನಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳು) ಒಳಗೊಂಡಂತೆ 20,189 ಮತದಾರರಿಗೆ ನೋಟೀಸ್ ತಲುಪಿಸಲಾಗಿದ್ದು, 20,017 ನೋಟೀಸ್‌ಗಳ ವಿಚಾರಣೆ ನಡೆಸಲಾಗಿದೆ. 174 ವಿಚಾರಣೆ ಬಾಕಿಯಿದೆ ಎಂದು ಯಶವಂತ್ ವಿ.ಗುರುಕರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸದ ತಿಪ್ಪೆಯಲ್ಲಿ ಅವಧಿ ಮುಗಿದ ಔಷಧಿ ಡಬ್ಬಿಗಳು ಪತ್ತೆ
ಟಿಎಲ್‌ಬಿಸಿ ಮೇಲ್ಭಾಗ ನೀರಿನ ಕಳ್ಳಾಟ ಬಯಲು