ಕನ್ನಡಪ್ರಭ ವಾರ್ತೆ ಕೆಜಿಎಫ್ಚಿನ್ನದ ಗಣಿಗಳ ಮುಚ್ಚಿದ ಸಂದರ್ಭದಲ್ಲಿ ೨೮೦೦ ಕಾರ್ಮಿಕರು ವಾಸ ಮಾಡುವ ಮನೆಗಳನ್ನು ಅವರಿಗೇ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಕಳೆದ ೨೩ ವರ್ಷದಿಂದ ಇದಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಚಿನ್ನದ ಗಣಿಗಳ ಕಾರ್ಮಿಕರಿಗೆ ಕೊನೆಗೂ ಸ್ವಂತ ಮನೆಗಳ ಹಕ್ಕುಪತ್ರ ಪಡೆಯುವ ಕನಸು ನನಸಾಗಿದೆ.
ಸಂಸದ ಎಸ್.ಮುನಿಸ್ವಾಮಿ ಅವರು ಶನಿವಾರ ಚಿನ್ನದ ಗಣಿಗಳ 40 ಕಾರ್ಮಿಕರಿಗೆ ಸಾಂಕೇತಿಕವಾಗಿ ಮನೆಗಳ ಹಕ್ಕುಪತ್ರಗಳನ್ನು ವಿತರಿಸಿದರು. ಮೊದಲನೇ ಹಂತದಲ್ಲಿ ೫೦೦ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.ಪ್ರತಿ ಮನೆಯ ಚದರಡಿಗೆ ₹10:
ಭಾರತ್ ಗೋಲ್ಡ್ ಮೈನಿಂಗ್ ಕಾರ್ಪೋರೇಷನ್ ಸಂಸ್ಥೆಯವರು ನಿವೃತ್ತ ಕಾರ್ಮಿಕರಿಗೆ ಒಂದು ಚದರಕ್ಕೆ ೧೦ ರೂ.ಗೆ ವಾಸ ಮಾಡುವ ಮನೆಗಳನ್ನು ಕೊಡಲು ಕಾರ್ಮಿಕರ ಬಳಿ ಮುಂಗಡ ಹಣ ಕಟ್ಟಿಸಿಕೊಂಡಿತ್ತು, ಕಳೆದ ೨೨ ವರ್ಷದಿಂದ ಕಾರ್ಮಿಕರು ವಾಸ ಮಾಡುವ ಮನೆಗಳ ಹಕ್ಕು ಪತ್ರಕ್ಕೆ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿದ್ದರು, ಈ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಗಣಿ ಇಲಾಖೆ ೨೮೦೦ ಕಾರ್ಮಿಕರ ಮನೆಗಳ ಹಕ್ಕುಪತ್ರ ನೀಡಲು ಮುಂದಾಗಿದೆ.ಮೊದಲ ಹಂತದಲ್ಲಿ ೫೦೦ ಹಕ್ಕುಪತ್ರ:
ಒಟ್ಟು ೨೮೦೦ ಕಾರ್ಮಿಕರಿಗೆ ಎಸ್‌ಟಿಬಿಪಿ ಅಡಿಯಲ್ಲಿ ಮನೆಗಳ ಹಕ್ಕು ಪತ್ರಗಳು ಮಂಜೂರಾಗಿದು, ಮೊದಲ ಹಂತದಲ್ಲಿ ೫೦೦ ಕಾರ್ಮಿಕರಿಗೆ ಹಕ್ಕು ಪತ್ರ ನೀಡಲಾಗುವುದು, ಅರ್ಹ ಫಲಾನುಭಿವಿಗಳ ಪಟ್ಟಿ ಸ್ವರ್ಣ ಭವನದ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದ್ದು, ಫಲಾನುಭವಿಗಳ ಮನೆಗಳ ಹಕ್ಕು ಪತ್ರ ಪಡೆಯಲು ಮಧ್ಯಾಹ್ನ ೧೨ ರಿಂದ ೩ ಗಂಟೆಯ ಒಳಗಾಗಿ ಪಡೆಯಬಹುದೆಂದು ಸಂಸದ ಮುನಿಸ್ವಾಮಿ ತಿಳಿಸಿದರು.ಪಟ್ಟಿಯಲ್ಲಿರುವವರು ಖುದ್ದಾಗಿ ಬರಲು ಸಾಧ್ಯವಾಗದೆ ಇರುವವರು ಜ.೧ ರಂದು ಸ್ವರ್ಣ ಭವನದ ಕಚೇರಿಗೆ ಬಂದು ಮಾಲೀಕತ್ವದ ಪ್ರಮಾಣ ಪತ್ರ ಪಡೆಯಬಹುದು, ಗಣಿ ಕಾರ್ಮಿಕರು ತಮ್ಮ ಗುರುತಿನ ಚೀಟಿ ತರಬೇಕೆಂದು ತಿಳಿಸಿದರು.
ಕಾರ್‍ಯಕ್ರಮದಲ್ಲಿ ಕೇಂದ್ರ ಗಣಿ ಇಲಾಖೆಯ ಜಂಟಿ ಕಾರ್‍ಯದರ್ಶಿ ಫರೀದಾ ನಾಯಕ್ ಹಾಗೂ ನಿವೃತ್ತ ಗಣಿ ಕಾರ್ಮಿಕರು ಇದ್ದರು. ಮನೆಗಳ ಹಕ್ಕುಪತ್ರಗಳನ್ನು ಹಂತ ಹಂತವಾಗಿ ೨೩೦೦ ಕಾರ್ಮಿಕರಿಗೂ ನೀಡಲಾಗುವುದೆಂದು ತಿಳಿಸಿದರು.ಕೇಂದ್ರ ಸಚಿವರ ಸಮ್ಮಖದಲ್ಲಿ ಕಾರ್‍ಯಕ್ರಮ:
ಗಣಿ ಸಚಿವ ಪ್ರಹ್ಲಾದ್ ಜ್ಯೋಷಿ, ಶಾಸಕಿ ರೂಪಕಲಾಶಶಿಧರ್‌ರ ಸಮ್ಮಖದಲ್ಲಿ ಬೃಹತ್ ಕಾರ್‍ಯಕ್ರಮವನ್ನು ಹಮ್ಮಿಕೊಂಡು ಚಿನ್ನದ ಗಣಿಗಳ ಎರಡು ಸಾವಿರ ಕಾರ್ಮಿಕರಿಗೆ ಮನೆಗಳ ಹಕ್ಕು ಪತ್ರಗಳನ್ನು ನೀಡಲಾಗುವುದೆಂದು ಸಂಸದ ಮುನಿಸ್ವಾಮಿ ತಿಳಿಸಿದರು.ಚಿನ್ನದ ಗಣಿಗಳು ಮುಚ್ಚಿ ೨೨ ವರ್ಷ ಕಳೆದರೂ ಮನೆಗಳ ಹಕ್ಕು ಪತ್ರ ಸಿಕ್ಕಿರಲಿಲ್ಲ, ಈಗ ನಮಗೆ ಖಷಿಯಾಗಿದ್ದು, ಕನಿಷ್ಟ ನಮಗೆ ಒಂದು ಸ್ವಂತ ಸೂರು ಸಿಕ್ಕಿರುವುದು ಸಂತಸ ತಂದಿದೆ.- ರುದ್ರಗೌಡ, ಬಿಜಿಎಂಎಲ್ ಕಾರ್ಮಿಕ.