ಕಾರ್ಕಳ: ನಬಾರ್ಡ್ ಆಶ್ರಯದಲ್ಲಿ ಜಿಲ್ಲಾ ಮಲೆಕುಡಿಯ ಸಂಘ ಉಡುಪಿ ಇದರ ಸಹಯೋಗದೊಂದಿಗೆ ಆರ್ಥಿಕ ಹಾಗೂ ಡಿಜಿಟಲ್ ಸಾಕ್ಷರತಾ ಕಾರ್‍ಯಕ್ರಮ ಗುರುವಾರ ಕಾರ್ಕಳದ ಮಾಳ–ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ನಡೆಯಿತು.
ಪಿಎಂಎಫ್‌ಎಂಇ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವೆಂಕಟೇಶ ಮಾತನಾಡಿ, ಪಿಎಂಎಫ್‌ಎಂಇ ಯೋಜನೆಯಡಿ ದೊರೆಯುವ ಸೌಲಭ್ಯಗಳು ಮತ್ತು ಉದ್ಯಮ ಆರಂಭಕ್ಕೆ ಇರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಶ್ರೀಲತಾ ಅವರು ಇಲಾಖೆ ವತಿಯಿಂದ ಮಹಿಳೆಯರು ಹಾಗೂ ಮಕ್ಕಳಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು.ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ಇಂತಹ ಕಾರ್‍ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಜೊತೆಗೆ ನಬಾರ್ಡ್ ಹಾಗೂ ಲೀಡ್ ಬ್ಯಾಂಕ್ ವತಿಯಿಂದ CSR ಅನುದಾನ ಒದಗಿಸುವಂತೆ ಮನವಿ ಮಾಡಿದರು. ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಉಪಸ್ಥಿತರಿದ್ದರು.
ವಿನುತ ಹಾಗೂ ಕಮಲಾಕ್ಷೀ ಶಿರ್ಲಾಲು ಪ್ರಾರ್ಥಿಸಿದರು. ಜಿಲ್ಲಾ ಮಲೆಕುಡಿಯ ಸಂಘದ ಪ್ರಧಾನ ಕಾರ್‍ಯದರ್ಶಿ ಅಶೋಕ್ ಕೆರ್ವಾಶೆ ನಿರೂಪಿಸಿದರು. ಪ್ರದೀಪ್ ಅಂಡಾರು ಸ್ವಾಗತಿಸಿ, ಕೆನರಾ ಬ್ಯಾಂಕಿನ ಎಫ್‌ಎಲ್‌ಸಿ ಪ್ರದೀಪ್ ಕೆ. ವಂದಿಸಿದರು.