ಕನ್ನಡಪ್ರಭ ವಾರ್ತೆ ಜಮಖಂಡಿ
ಸ್ವಚ್ಛ ಮತ್ತು ಸ್ಥಳಾವಕಾಶವಿರುವಲ್ಲಿ ಮಾತ್ರ ಪ್ರಸಾದದ ವ್ಯವಸ್ಥೆ ಮಾಡುವಂತೆ ಗಣೇಶೋತ್ಸವ ಸಮಿತಿಗಳಿಗೆ ಮನವಿ ಮಾಡಿದ ಅವರು ರಸ್ತೆಗಳಲ್ಲಿ ಮತ್ತು ಕಾಲುವೆ ಪಕ್ಕದಲ್ಲಿ ದೇವರ ಪ್ರಸಾದ ಮಾಡುವುದು ಬೇಡ ಅದರ ಬದಲಾಗಿ ಪ್ರತಿಭಾನ್ವಿತರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿರಿ ಎಂದರು.
ಬಿಜೆಪಿ ನಗರ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ಶಾಸಕರು ಪ್ರತಿವರ್ಷದಂತೆ ಆರ್ಥಿಕ ಸಹಾಯ ನೀಡಲಿದ್ದು ಸಾರ್ವಜನಿಕ ಗಣೇಶ ಉತ್ಸವ ಸಮಿತಿ ಅವರು ಕಚೇರಿ ಸಮಯದಲ್ಲಿ ಭೇಟಿಯಾಗಿ ಆರ್ಥಿಕ ಸಹಾಯ ಪಡಯಬೇಕೆಂದರು.ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಲದ ಅಧ್ಯಕ್ಷ ಸುನೀಲ ಬೋವಿ ಮಾತನಾಡಿ, ಅನ್ನ ಪ್ರಸಾದ ಮಾಡುವ ಸಮಿತಿ ಅವರು ಒಂದೇ ದಿನ ಎಲ್ಲ ಕಡೆಗಳಲ್ಲಿ ಪ್ರಸಾದ ಮಾಡದೇ ಒಂದೊಂದು ದಿನ ಒಂದು ಕಡೆ ಮಾತ್ರ ವ್ಯವಸ್ಥೆ ಮಾಡಿರಿ ಎಂದು ಮನವಿ ಮಾಡಿದರು. ಎಲ್ಲ ಸಮಿತಿಗಳಿಗೆ ಪರವಾನಿಗೆ ಕೊಡಿಸಲು ಮಹಾಮಂಡಲದಿಂದ ವ್ಯವಸ್ಥೆ ಮಾಡಲಾಗುವುದು. ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸುಂದರ ಅಲಂಕೃತ ಗಣಪತಿಗಳಿಗೆ ವಿಶೇಷ ಬಹುಮಾನ ನೀಡಲಾಗುವುದು. ಮನೆಗಳಿಗೆ ಭೇಟಿ ಕಾರ್ಯಕ್ರಮವಿದ್ದು ಅಲಂಕಾರಿಕ ಗಣೇಶಕ್ಕೆ ಬಹುಮಾನ ನೀಡಲಾಗುವುದೆಂದರು.
ರಾಕೇಶ್‌ಲಾಡ್ ಮಾತನಾಡಿ, ಸೆ.6ರ ಒಳಗಾಗಿ ನಗರದ ಎಲ್ಲ ಮಂಡಳಿ ಅವರು ಫಾರ್ಮ್‌ಗಳನ್ನು ಪಡೆದು ಭರ್ತಿ ಮಾಡಿ ಕೊಡಬೇಕು. ನಗರದಲ್ಲಿ 108 ಮತ್ತು ಗ್ರಾಮೀಣದಲ್ಲಿ 240ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಯಾಗಲಿದೆ ಎಂದರು.