ಕನ್ನಡಪ್ರಭ ವಾರ್ತೆ ಗದಗ
ಸ್ಥಳೀಯ ಎಂ.ಜಿ.ಆರ್.ಡಿ.ಪಿ.ಆರ್ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಮೂತ್ರಶಾಸ್ತ್ರ ಸಂಘ ಹಾಗೂ ಗದಗ ಕಸಿ ಮತ್ತು ಮೂತ್ರಜನಕಾಂಗ ಸಂಘದ ಸಹಯೋಗದಲ್ಲಿ ವೈದ್ಯರ ಸಮ್ಮೇಳನದಲ್ಲಿ ನಡೆದ ಉಳಿಸುವ ಕೌಶಲ್ಯ: ವೈದ್ಯಕೀಯ ವೃತ್ತಿಯ ಆಧ್ಯಾತ್ಮಿಕ ಆಯಾಮ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ನೀವೆಲ್ಲ ಹಿಪ್ಪೋಕ್ರೆಟಿಕ್ ಪ್ರಮಾಣ ಸ್ವೀಕರಿಸಿದವರು. ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಎಂಬುದು ಅದರ ಸಾರ. ಆದರೆ ಇದನ್ನೇ ನಮ್ಮ ಋಷಿಗಳು ಸಾವಿರಾರು ವರ್ಷಗಳ ಹಿಂದೆಯೇ ಹೇಳಿದ್ದಾರೆ. ಪ್ರೊಫೆಷನಲ್ ಎಥಿಕ್ಸ್ ಜೊತೆಗೆ ಪರ್ಸನಲ್ ಎಥಿಕ್ಸ್ ಮುಖ್ಯ. ಸರ್ವೇ ಸಂತು ಸುಖಿನಃ, ಸರ್ವೇ ಸಂತು ನಿರಾಮಯಾಃ ಎಲ್ಲರೂ ಸುಖಿಗಳಾಗಿರಬೇಕು, ಎಲ್ಲರೂ ನಿರೋಗಿಗಳಾಗಿರಬೇಕು ಎಂದು ಋಷಿಗಳು ಹೇಳಿದ್ದಾರೆ. ಅವರು ನಮ್ಮ ಜಾತಿ, ನಮ್ಮ ಧರ್ಮದವರು ಮಾತ್ರ ಸುಖವಾಗಿರಲಿ ಎನ್ನಲಿಲ್ಲ ಎಂದು ವಿವರಿಸಿದರು.ಅಧ್ಯಾತ್ಮ ಎಂದರೆ ಗುಹೆಯಲ್ಲಿ ಕಣ್ಣು ಮುಚ್ಚಿ ಕೂರುವುದಲ್ಲ, ಕಣ್ಣು ತೆರೆದು ನೋಡುವುದು ಧ್ಯಾನ. ಕೈ ಕಟ್ಟಿ ಕೂರುವುದಲ್ಲ, ಕೈಯಿಂದ ಸತ್ಕಾರ್ಯ ಮಾಡುವುದು ಧ್ಯಾನ. ಯೋಗಃ ಕರ್ಮಸು ಕೌಶಲಂ ಯಾವ ಕೆಲಸವನ್ನೇ ಕೌಶಲ್ಯದಿಂದ ಮಾಡಿದರೂ ಅದೇ ಯೋಗ. ವೈದ್ಯರು ತಮ್ಮ ಕಾರ್ಯವನ್ನು ಕೌಶಲ್ಯದಿಂದ ಮಾಡುವುದೇ ಯೋಗ ಎಂದು ತಿಳಿಸಿದರು.