ಬೆರಳಚ್ಚು ಸಮಸ್ಯೆ: ಹಿರಿಯ ನಾಗರಿಕರಿಗೆ ಪಡಿತರ ಖೋತಾ

KannadaprabhaNewsNetwork |  
Published : Jul 02, 2025, 12:19 AM IST
ಮೊಬೈಲ್  | Kannada Prabha

ಸಾರಾಂಶ

ಪಡಿತರದಿಂದ ವಂಚಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಪಡಿತರ ಚೀಟಿದಾರರಲ್ಲಿ ಅಸಮಾಧಾನ, ಆಕ್ರೋಶ ಹುಟ್ಟುಹಾಕಿದೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಪ್ರತಿ ತಿಂಗಳ ಪಡಿತರ ಅಕ್ಕಿ ಪಡೆಯಲು ಈ ಹಿಂದೆ ಮೊಬೈಲ್ ಮೂಲಕ ಒಟಿಪಿ ಪಡೆಯುವುದು ಮುಖ್ಯವಾಗಿತ್ತು. ಆದರೆ ಈ ವ್ಯವಸ್ಥೆಯಲ್ಲಿ ದೋಷಗಳು ಮತ್ತು ದುರುಪಯೋಗ ಕಂಡು ಬಂದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರೇ ನ್ಯಾಯಬೆಲೆ ಅಂಗಡಿಗೆ ಬಂದು ಗಣಕ ಯಂತ್ರದ ಮೂಲಕ ಹೆಬ್ಬೆಟ್ಟು ಸಹಿ ನೀಡಬೇಕಾಗಿದೆ. ಆದರೆ ಈ ವ್ಯವಸ್ಥೆಯು ಪಡಿತರ ಚೀಟಿದಾರರಿಗೆ ಬಾಣೆಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯನ್ನು ನಿರ್ಮಾಣಮಾಡಿದೆ.ಥಂಬ್‌ ನೀಡುವ ವ್ಯವಸ್ಥೆಯಲ್ಲಿ ವಯಸ್ಕರಿಗೆ ಬೆರಳಚ್ಚು ಸಹಿ ಸರಿಯಾಗಿ ಬೀಳದ ಹಿನ್ನೆಲೆಯಲ್ಲಿ ಪಡಿತರದಿಂದ ವಂಚಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಪಡಿತರ ಚೀಟಿದಾರರಲ್ಲಿ ಅಸಮಾಧಾನ, ಆಕ್ರೋಶ ಹುಟ್ಟುಹಾಕಿದೆ.ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪಡಿತರ ಪಡೆಯಬೇಕಾಗಿದ್ದು, ೬೫ರಿಂದ ೯೦ ವರ್ಷ ಮೇಲ್ಪಟ್ಟ ಪಡಿತರ ಚೀಟಿದಾರರು ತಮ್ಮ ಸಹಾಯಕರೊಂದಿಗೆ ನ್ಯಾಯಬೆಲೆ ಅಂಗಡಿಗೆ ಬೆರಳಚ್ಚು ಕೊಡಲು ಹರಸಾಹಸ ಪಡಬೇಕಾಗಿದೆ. ಯಂತ್ರದಲ್ಲಿ ಅವರ ಬೆರಳಚ್ಚು ಸಹಿ ದಾಖಲಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯವರು ಕೂಡ ಈ ವಿಷಯದಲ್ಲಿ ಅಸಹಾಯಕರಾಗಿದ್ದು, ಸರ್ಕಾರದ ನಿಯಮದಂತೆ ಆನ್‌ಲೈನ್‌ನಲ್ಲಿ ಬೆರಳಚ್ಚು ಸಹಿ ದಾಖಲಾದರೆ ಮಾತ್ರ ಪಡಿತರ ಅಕ್ಕಿ ಪಡೆಯಲು ಸಾಧ್ಯ. ಇದರಿಂದಾಗಿ ಪಡಿತರ ಅಕ್ಕಿಯನ್ನು ಅವಲಂಬಿಸಿದ ಹಿರಿಯಜೀವಿಗಳು ತೊಂದರೆಗೀಡಾಗಿದ್ದಾರೆ.......................

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದೆಷ್ಟೋ ಹಿರಿಯ ಜೀವಿಗಳು ನೆಲೆಸಿದ್ದು, ಅವರಿಗೆ ಸರ್ಕಾರದಿಂದ ಪಡಿತರ ಚೀಟಿಯನ್ನು ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಭಾರಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರಲ್ಲಿ ಒಟಿಪಿ ಪದ್ಧತಿಯನ್ನು ರದ್ದುಗೊಳಿಸಿ ಗಣಕ ಯಂತ್ರದ ಮೂಲಕ ಬೆರಳಚ್ಚು ನೀಡುವ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಸಂಕಷ್ಟಕ್ಕೆ ತುತ್ತಾಗಿದ್ದು ೬೫ ರಿಂದ ಮೇಲ್ಪಟ್ಟ ಕೆಲವು ಮಂದಿ. ಅವರ ಬೆರಳಚ್ಚುಗೊಳ್ಳದ ಹಿನ್ನೆಲೆಯಲ್ಲಿ ತಮ್ಮ ಪಡಿತರ ದೊರೆಯದೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆಯವರು ಇದಕ್ಕೆ ಬದಲಿ ವ್ಯವಸ್ಥೆ ಹಿರಿಯ ಜೀವಿಗಳಿಗೆ ಅವಲಂಬಿತ ಪಡಿತರ ಅಕ್ಕಿ ದೊರೆಯುವಂತಾಗಬೇಕು.

। ಪಿ.ಆರ್.ಸುನಿಲ್‌ ಕುಮಾರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ.ಗ್ರಾಮೀಣ ಪ್ರದೇಶದಲ್ಲಿರುವ ನೆಲೆಸಿರುವ ಹಿರಿಯರು ಪಡಿತರ ಅಕ್ಕಿಯನ್ನೇ ಅವಲಂಬಿತರಾಗಿದ್ದು, ಅವರಿಗೆ ರಾಜ್ಯ ಸರ್ಕಾರದ ಹೊಸ ನಿಯಮದಿಂದ ಬೆರಳಚ್ಚು ಸರಿಹೊಂದದೆ ಪಡಿತರದಿಂದ ವಂಚಿಗೊಳ್ಳುತ್ತಿದ್ದಾರೆ. ಸರ್ಕಾರವು ಹಿರಿಯ ಜೀವಿಗಳ ಸಮಸ್ಯೆ ಗಂಭೀರತೆಯನ್ನು ಅರಿತು ಅವರಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು.

। ಮಂದೋಡಿ ಜಗನ್ನಾಥ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ

---------------ಪಡಿತರ ಚೀಟಿಗೆ ಪಡಿತರವನ್ನು ಈ ಹಿಂದೆ ಓಟಿಪಿ ಪಡೆದು ವಿತರಿಸಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಟಿಪಿ ಮಾದರಿಯನ್ನು ರದ್ದುಗೊಳಿಸಿ ಬೆರಳಚ್ಚು ನೀಡುವಂತೆ ನಿಯಮ ಜಾರಿಗೆ ತರಲಾಗಿದೆ. ಅದೆಷ್ಟೋ ವಯೋವೃದ್ಧರ ಕೈ ಬೆರಳುಗಳ ಹಚ್ಚು ಲಭ್ಯವಾಗದೆ ಪಡಿತರ ರದ್ದುಗೊಂಡಿರುವ ಘಟನೆಗಳು ನಡೆದಿವೆ. ಕೆಲವರು ಆಧಾರ್ ತಿದ್ದುಪಡಿ ಕೇಂದ್ರಗಳಿಗೆ ತೆರಳಿ ಬೆರಳಹಚ್ಚು ನೀಡಿದರೂ ಅದು ಸರಿಹೊಂದದೆ ಪಡಿತರ ಸೌಲಭ್ಯದಿಂದ ವಂಚಿಗೊಳ್ಳುವಂತಾಗಿದೆ.

। ಕೆ.ಎಸ್. ಮಂಜುನಾಥ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ