ಕನ್ನಡಪ್ರಭ ವಾರ್ತೆ ಅರಕಲಗೂಡು
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿಯ 122 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಅ.25ರಂದು ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಕೆಲವು ಪ್ರಭಾವಿ ಶಕ್ತಿಗಳು ಇದಕ್ಕೆ ತಡೆಯೊಡ್ಡಲು ಪ್ರಯತ್ನ ನಡೆಸಿದ್ದಾರೆ. ಇಂತಹ ಒತ್ತಡಗಳಿಗೆ ಮಣಿಯದೆ ನಿಗದಿಯಂತೆ ಹರಾಜು ನಡೆಯಬೇಕು. ಇದರಿಂದ ಪಪಂ ಆದಾಯ ಗಣನೀಯವಾಗಿ ಹೆಚ್ಚಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ. ಒತ್ತಡಕ್ಕೆ ಮಣಿದು ಹರಾಜು ಕಾರ್ಯ ನಡೆಸದಿದ್ದರೆ ರೈತ ಸಂಘ ತೀವ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದರು. ತಾಲೂಕು ರೈತಸಂಘದ ಅಧ್ಯಕ್ಷ ದಿನೇಶ್, ಮುಖಂಡ ಹೊಂಬೇಗೌಡ ಗೋಷ್ಠಿಯಲ್ಲಿದ್ದರು.