ದ್ರಾಕ್ಷಿ ತೋಟಕ್ಕೆ ಬೆಂಕಿ ಲಕ್ಷಾಂತರ ಮೌಲ್ಯದ ಬೆಳೆ ನಷ್ಟ

KannadaprabhaNewsNetwork |  
Published : Mar 07, 2025, 12:46 AM IST
ವಿಜೆಪಿ ೦೬ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದ ರೈತ ಮುನಿರಾಜಪ್ಪ ಅವರ ದ್ರಾಕ್ಷಿ ತೋಟವು ಬೆಂಕಿಗೆ ಆಹುತಿಯಾಗಿ ಸುಟ್ಟು ಹೋಗಿರುವುದು. | Kannada Prabha

ಸಾರಾಂಶ

ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮದ ರೈತ ಮುನಿರಾಜಪ್ಪಗೆ ಸೇರಿದ ದ್ರಾಕ್ಷಿ ತೋಟದ ಪಕ್ಕದಲ್ಲಿರುವ ಬಯಲಿನಲ್ಲಿ ಬೆಳೆದಿದ್ದ ಗಿಡಗಂಟಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಕಟಾವಿಗೆ ಬಂದಿದ್ದ ದ್ರಾಕ್ಷಿ ಗಿಡ ಸಮೇತ ಗೊಂಚಲು ಸುಟ್ಟು ಹೋಗಿವೆ.

ವಿಜಯಪುರ: ಹೋಬಳಿಯ ಕೋರಮಂಗಲ ಗ್ರಾಮದ ರೈತ ಮುನಿರಾಜಪ್ಪಗೆ ಸೇರಿದ ದ್ರಾಕ್ಷಿ ತೋಟದ ಪಕ್ಕದಲ್ಲಿರುವ ಬಯಲಿನಲ್ಲಿ ಬೆಳೆದಿದ್ದ ಗಿಡಗಂಟಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಕಟಾವಿಗೆ ಬಂದಿದ್ದ ದ್ರಾಕ್ಷಿ ಗಿಡ ಸಮೇತ ಗೊಂಚಲು ಸುಟ್ಟು ಹೋಗಿವೆ.

ರೈತ ಮುನಿರಾಜಪ್ಪ ಅವರು, ಆವತಿಯ ಕೆನರಾ ಬ್ಯಾಂಕಿನಲ್ಲಿ 5 ಲಕ್ಷ ಸಾಲ ಮಾಡಿ ದ್ರಾಕ್ಷಿ ತೋಟ ಮಾಡಿದ್ದು, ಬೆಳೆಯೂ ಚೆನ್ನಾಗಿ ಬಂದಿತ್ತು. 20 ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಬುಧವಾರ ಸಂಜೆ ನಮ್ಮ ತೋಟದ ಪಕ್ಕದಲ್ಲಿರುವ ಬಯಲಿನಲ್ಲಿ ಬೆಳೆದಿದ್ದ ಗಿಡಗಂಟಿಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ 400 ಗಿಡಗಳು ಸುಟ್ಟುಹೋಗಿವೆ. ಈ ಗಿಡಗಳಲ್ಲಿ ಬೆಳೆದಿದ್ದ ದ್ರಾಕ್ಷಿ ಗೊಂಚಲೂ ಸುಟ್ಟಿವೆ. ಇದರಿಂದ 5 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ರೈತ ರವಿಕುಮಾರ್ ಮಾತನಾಡಿ, ನಮಗೆ ಇರುವುದು ಇದೊಂದೇ ತೋಟ. ಇದರಲ್ಲಿ ಬೆಳೆದುಕೊಂಡು ಜೀವನ ಮಾಡುತ್ತಿದ್ದೇವೆ. ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದೆವು. ಆದರೆ, ತಾಪಮಾನ ಹೆಚ್ಚಳದಿಂದ ಹುಳು ಸಾಕಾಣಿಕೆ ಮಾಡುವುದು ಕಷ್ಟವಾಗುತ್ತಿದೆ. ದ್ರಾಕ್ಷಿ ಬೆಳೆಯನ್ನೆ ನಂಬಿಕೊಂಡು ಬೇಸಾಯ, ಔಷಧಿಗಳಿಗೆ ಬಂಡವಾಳ ಹೂಡಿಕೆ ಮಾಡಿದ್ದೇವೆ. ಈಗ ಸಾಲ ತೀರಿಸುವುದು ಹೇಗೆ? ಸುಟ್ಟು ಗಿಡಗಳ ಸ್ಥಳದಲ್ಲಿ ಮತ್ತೆ ಗಿಡ ಬೆಳೆಸುವುದು ಹೇಗೆಂಬ ಆತಂಕ ಕಾಡುತ್ತಿದೆ. ಸರ್ಕಾರದಿಂದ ನಮಗೆ ಏನಾದರೂ ಪರಿಹಾರ ದೊರಕಿಸಿಕೊಟ್ಟರೆ, ಈ ಸಮಯದಲ್ಲಿ ನಮಗೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಒಂದು ಗಿಡ ನಾಟಿ ಮಾಡಿ ಅದರಲ್ಲಿ ಫಲ ಕಾಣುವಷ್ಟರಲ್ಲಿ ಒಂದು ಗಿಡಕ್ಕೆ 25-30 ಸಾವಿರ ಖರ್ಚು ಬರುತ್ತದೆ. 1500 ಅಡಿಗಳ ಆಳದಿಂದ ನೀರು ಹೊರತೆಗೆದು ಬೆಳೆ ಬೆಳೆಯುವುದು ಸುಲಭದ ಕೆಲಸವಲ್ಲ, ಸರ್ಕಾರ, ಪ್ರಾಕೃತಿಕ ವಿಕೋಪಗಳಿಗೆ ಮಾತ್ರ ಪರಿಹಾರ ಕೊಡುತ್ತದೆ. ರೈತರಿಗೆ ತಮ್ಮದಲ್ಲದ ತಪ್ಪಿನಿಂದಾಗಿ ಈ ರೀತಿ ಬೆಳೆ ನಷ್ಟವಾದಾಗ ರೈತರ ನೆರವಿಗೆ ಧಾವಿಸಬೇಕು ಎಂದು ರೈತ ಬೈರಾಪುರ ಕೊಂಡಪ್ಪ ಒತ್ತಾಯಿಸಿದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರ ಹೋಬಳಿ ಕೋರಮಂಗಲ ಗ್ರಾಮದ ರೈತ ಮುನಿರಾಜಪ್ಪಗೆ ಸೇರಿದ ದ್ರಾಕ್ಷಿ ತೋಟ ಬೆಂಕಿಗೆ ಆಹುತಿಯಾಗಿರುವುದು.

PREV

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ