ಲಕ್ಷ್ಮೇಶ್ವರ: ಮೆಕ್ಕೆಜೋಳದ ರಾಶಿಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡ್ಮೂರು ರಾಶಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ರೈತರಿಗೆ ಅಪಾರ ಹಾನಿ ಸಂಭವಿಸಿದ ಘಟನೆ ಸೋಮವಾರ ಪಟ್ಟಣ ಸಮೀಪದ ಮಂಜಲಾಪುರ ಗ್ರಾಮದಲ್ಲಿ ಜರುಗಿದೆ.
ಕಮಲವ್ವ ಹೊಸಮನಿ ಅವರಿಗೆ ಸೇರಿದ ಆರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಶಿರಾಜುದ್ದೀನ್ ಹೊಸಮನಿ ಅವರಿಗೆ ಸೇರಿದ ಏಳು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿ ಸುಟ್ಟು ಕರಕಲಾಗಿದೆ.
ಉಳಿದತೆ ಪರಮೇಶ ಕಿತ್ಲಿ ಮತ್ತು ದಾನಪ್ಪ ಲಮಾಣಿ ಅವರಿಗೆ ಸೇರಿದ ಮೆಕ್ಕೆಜೋಳದ ಮೇವು ಭಸ್ಮವಾಗಿದೆ. ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು.ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ವೇಗವಾಗಿ ಹರಡುತ್ತಿದ್ದು, ರಾಶಿ ಹಾಕಿರುವ ಉಳಿದ ರೈತರಲ್ಲಿ ಭಯ ಮೂಡಿಸಿತ್ತು. ತಹಸೀಲ್ದಾರ್ ಭೇಟಿ: ವಿಷಯ ಗೊತ್ತಾಗುತ್ತಿದ್ದಂತೆ ತಹಸೀಲ್ದಾರ್ ಎಂ. ಧನಂಜಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಕೆ. ಪಠಾಣ, ಬಸವರಾಜ ಹಳ್ಳಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಲಿಸಿದರು.
ಬೀದಿನಾಯಿಗಳ ಹಾವಳಿ ಕಡಿವಾಣ ಹಾಕಲು ಮನವಿನರಗುಂದ: ಪಟ್ಟಣದ ವಾಜಪೇಯ ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈ ಬೀದಿನಾಯಿಗಳ ಉಪಟಳ ನಿಯಂತ್ರಣ ಮಾಡಬೇಕೆಂದು ತಾಲೂಕು ಕರವೇ ಅಧ್ಯಕ್ಷ ನಬಿಸಾಬ ಕಿಲ್ಲೇದಾರ ಆಗ್ರಹಿಸಿದರು.ಸೋಮವಾರ ಪಟ್ಟಣದ ಪುರಸಭೆಗೆ ಕರವೇ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿ ನಂತರ ಮಾತನಾಡಿ, ಪಟ್ಟಣದ ಹಿರೇಕೊಪ್ಪದ ರಸ್ತೆಗೆ ಹೊಂದಿಕೊಂಡಿರುವ ವಾಜಪೇಯ ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ.ಪ್ರತಿದಿನ ಮಕ್ಕಳು, ವೃದ್ಧರು, ಓಡಾಟ ಮಾಡುವುದು ಕಷ್ಟವಾಗಿದೆ. ಈಗಾಗಲೇ ಹಲವಾರು ಬಾರಿ ಪುರಸಭೆ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಅಧಿಕಾರಿಗಳಗೆ ಕಾಲ ಮಿಂಚಿಲ್ಲ. ಆದಷ್ಟು ಬೇಗ ಪಟ್ಟಣದಲ್ಲಿ ಬೀಡು ಬಿಟ್ಟಿರುವ ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕು.ಒಂದು ವೇಳೆ ಅಧಿಕಾರಿಗಳು ಬೀದಿನಾಯಿಗಳ ಉಪಟಳ ನಿಯಂತ್ರಣ ಮಾಡದಿದ್ದರೆ ವಾಜಪೇಯ ನಗರದ ನಿವಾಸಿಗಳು ಮತ್ತು ಕರವೇ ಪದಾಧಿಕಾರಿಗಳು ಸೇರಿಕೊಂಡು ಮುಂದಿನ ದಿನಗಳಲ್ಲಿ ಪುರಸಭೆ ಮುಂದೆ ಅಧಿಕಾರಿಗಳ ವಿರುದ್ಧ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.ಪುರಸಭೆ ಅಧಿಕಾರಿ ಆನಂದ ಅವರು, ಮನವಿ ಸ್ವೀಕರಿಸಿ ಮಾತನಾಡಿ, ಬೀದಿನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಮಾಲಾ ಪಾಟೀಲ, ಚನ್ನಪ್ಪ ತಿಮ್ಮನಕಟ್ಟಿ, ಬಸಪ್ಪ ಹುಲಜೋಗಿ, ಮಹಾದೇವಪ್ಪ ಈಟಿ, ಕಲಂದರ ನರಗುಂದ, ಸಯ್ಯದ ಯಲಿಗಾರ, ಬಾಬುಸಾಬ ಹಜರತನವರ, ಮಾದೇವಪ್ಪ ಆಶೆದಾರ, ಆದಮ ಮಕನದಾರ, ರಾಮಣ್ಣ ಕಳ್ಳಿಗುಡ್ಡಿ, ಸುಲ್ತಾನಸಾಬ ಮುಲ್ಲಾನವರ ಇದ್ದರು.