ದಸರಾ ಉತ್ಸವದಲ್ಲಿ ಬೆಂಕಿರಹಿತ ಅಡುಗೆ ಸ್ಪರ್ಧೆ

KannadaprabhaNewsNetwork |  
Published : Sep 25, 2025, 01:00 AM IST
್ಿ್ಿ್ಿ್ಿ್ಿ | Kannada Prabha

ಸಾರಾಂಶ

ತುಮಕೂರು ದಸರಾ ಸಮಿತಿಯಿಂದ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಬುಧವಾರ ಆಯೋಜಿಸಿತ್ತು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ದಸರಾ ಸಮಿತಿಯಿಂದ ಬೆಂಕಿರಹಿತ ಅಡುಗೆ ಸ್ಪರ್ಧೆಯನ್ನು ಬುಧವಾರ ಆಯೋಜಿಸಿತ್ತು. ನಗರದ ಶ್ರೀರಾಮ ಮಂದಿರ ಆವರಣದಲ್ಲಿ ನಡೆದ ಬೆಂಕಿರಹಿತ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು, ಪುರುಷರು ಉತ್ಸಾಹದಿಂದ ಭಾಗವಹಿಸಿ ರುಚಿಕರ, ಆರೋಗ್ಯಕರ ಅಡುಗೆ ತಯಾರಿಸಿ ಗಮನ ಸೆಳೆದರು. ಹೆಚ್ಚು ರುಚಿಕಟ್ಟಾಗಿಅಡುಗೆ ತಯಾರಿಸಿದವರು ಮೂರು ಹಂತಗಳಲ್ಲಿ 6, 4 ಹಾಗೂ 2 ಸಾವಿರ ರು. ನಗದು ಬಹುಮಾನ, ಪಾರಿತೋಷಕ ಪಡೆದು ಸಂಭ್ರಮಿಸಿದರು. ಹಣ್ಣು, ಹಸಿತರಕಾರಿ, ಮೊಳಕೆ ಕಾಳು, ಒಣಹಣ್ಣುಗಳು ಮುಂತಾದವುಗಳನ್ನು ಬೆಂಕಿರಹಿತ ಅಡುಗೆಗೆ ಬಳಸಲು ಆವಕಾಶವಿತ್ತು.ಆದರೆ ಬಿಸ್ಕತ್ತು, ಬ್ರೆಡ್, ಜಾಮ್‌ಮೊದಲಾದವುಗಳ ಬಳಕೆ ನಿರ್ಬಂಧಿಸಲಾಗಿತ್ತು.

ದಸರಾ ಸಮಿತಿ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಬೆಂಕಿರಹಿತ ಅಡುಗೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಬೆಂಕಿರಹಿತ ಅಡುಗೆ ಮಾಡಲು ಸಾಧ್ಯವಿದೆ. ಪ್ರವಾಸ ಹೋದಾಗ, ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದಾಗ, ಬೇಯಿಸಿದ ಅಡುಗೆ ತಿಂದು ಬೇಸರವಾದಾಗ, ಮನೆಯಲ್ಲಿ ಒಬ್ಬರೇ ಇದ್ದಾಗ, ತುರ್ತು ಸಂದರ್ಭಗಳಲ್ಲಿ ಸುಲಭವಾಗಿ ತಯಾರಿಸಿ ತಿನ್ನಬಹುದಾದ ಅಡುಗೆಗಳು ಇದಾಗಿವೆ ಎಂದರು. ಸ್ಪರ್ಧೆ ಆಯೋಜನೆ ತಂಡದ ರೂಪಾ ಶಿವಮಾಧು ಮಾತನಾಡಿ, ಬೆಂಕಿರಹಿತ ಅಡುಗೆ ಆರೋಗ್ಯಕರ, ಪೌಷ್ಟಿಕದಾಯಕ. ಮನೆಯಲ್ಲಿ ಇರುವ ಹಣ್ಣು, ತರಕಾರಿ, ಆಹಾರ ಪದಾರ್ಥಗಳನ್ನು ಬಳಿಸಿಕೊಂಡು ಸುಲಭವಾಗಿ ಅಡುಗೆ ತಯಾರಿಸಬಹುದು. ಮನೆಗೆ ದಿಢೀರ್ ಅತಿಥಿಗಳು ಬಂದಾಗ ಬಹುಬೇಕ ಬೆಂಕಿ ರಹಿತ ಅಡುಗೆ, ತಿಂಡಿ ತಯಾರಿಸಿ ನೀಡಿ ಉಪಚರಿಸಬಹುದು. ಬೆಂಕಿರಹಿತ ಅಡುಗೆಹೆ ಚ್ಚು ಜನಪ್ರಿಯವಾಗಬೇಕು ಎನ್ನುವ ಕಾರಣಕ್ಕೆ ಈ ಸ್ಪರ್ಧೆಏರ್ಪಡಿಸಲಾಗಿದೆ ಎಂದು ಹೇಳಿದರು. ಸಮಿತಿ ಕಾರ್ಯದರ್ಶಿ ಕೆ.ಪರಶುರಾಮಯ್ಯ, ಅಡುಗೆ ಸ್ಪರ್ಧೆ ತಂಡದ ಕೇಶವಮೂರ್ತಿ, ತಿಲಕ, ಸುಮ, ವೆಂಕಟರಾಘವನ್, ಲತಾ ಮಂಜು, ತೇಜಸ್ವಿನಿ, ಲತಾಗುರುಪ್ರಸಾದ್, ಜಿ.ಎಸ್.ನಂದಿನಾಥ್ ಮೊದಲಾದವರು ಭಾಗವಹಿಸಿದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ