ಮೊದಲು ಕಾರ್ಯಕರ್ತರು ನಂತರ ನಾಯಕರು

KannadaprabhaNewsNetwork |  
Published : Dec 02, 2024, 01:20 AM IST
ಕಾಂಗ್ರೆಸ್ ಸೇವಾದಳದ 3 ದಿನಗಳ ವಿಶೇಷ ತರಬೇತಿ ಕಾರ್ಯಗಾರ: ಲೋಣಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸೇವಾದಳವು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕವಾಗಿದ್ದು ಇಲ್ಲಿ ಶಿಸ್ತು, ತ್ಯಾಗ, ಸೇವಾ ಭಾವದಿಂದ ಪಕ್ಷ ಸಂಘಟನೆಯಲ್ಲಿ ಸೇವಾ ದಳದ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಮೊದಲು ಕಾರ್ಯಕರ್ತರು ನಂತರ ನಾಯಕರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸೇವಾದಳವು ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕವಾಗಿದ್ದು ಇಲ್ಲಿ ಶಿಸ್ತು, ತ್ಯಾಗ, ಸೇವಾ ಭಾವದಿಂದ ಪಕ್ಷ ಸಂಘಟನೆಯಲ್ಲಿ ಸೇವಾ ದಳದ ಕಾರ್ಯಕರ್ತರು ಕಾರ್ಯನಿರ್ವಹಿಸಲಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಮೊದಲು ಕಾರ್ಯಕರ್ತರು ನಂತರ ನಾಯಕರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಸೇವಾದಳ ಹಾಗೂ ಇನ್ನಿತರೆ ಅಂಗ ಘಟಕಗಳ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕರ್ತರನ್ನು ಪ್ರೋತ್ಸಾಹಿಸಬೇಕು. ಇಂತಹ ಕಾರ್ಯಕ್ರಮಗಳಿಗೆ ಎಲ್ಲ ಮತಕ್ಷೇತ್ರದ ಕಾರ್ಯಕರ್ತರು ಹಾಜರಿರುತ್ತಾರೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಸೇವಾದಳ ಸಮಿತಿಯಿಂದ ನಗರದ ಸೋಲಾಪೂರ ರಸ್ತೆಯಲ್ಲಿರುವ ಕರ್ನಾಟಕ ಎಜುಕೇಶನಲ್ ಟ್ರಸ್ಟ್‌ನ ಜ್ಞಾನಜ್ಯೋತಿ ವಸತಿ ಶಾಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳದ 3 ದಿನಗಳ ವಿಶೇಷ ತರಬೇತಿ ಕಾರ್ಯಾಗಾರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಅವರು ಮಾತನಾಡಿದರು.

ರಾಜ್ಯ ಮುಖ್ಯ ಸೇವಾದಳ ಸಂಘಟಕ ರಾಮಚಂದ್ರ ಎಂ. ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಸೂಚನೆಯಂತೆ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮ ಅಯೋಜಿಸಲಾಗಿದೆ. ಇಂದು ಮೊಟ್ಟ ಮೊದಲನೆಯದಾಗಿ ವಿಜಯಪುರ ಜಿಲ್ಲೆಯಿಂದಲೇ ಈ ಕಾರ್ಯಾಗಾರ ಪ್ರಾರಂಭಿಸಲಾಗಿದೆ. ಹಾಗೂ ನ.29,30 ಹಾಗೂ ಡಿ.1ರ ವರೆಗೆ ಮೂರು ದಿನಗಳವರೆಗೆ ನಡೆಯಲ್ಲಿದೆ ಎಂದರು.

ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅಧ್ಯಕ್ಷತೆ ವಹಿಸಿದ ಏಕೈಕ ಕಾಂಗ್ರೆಸ್ ಅಧಿವೇಶನ ಕರ್ನಾಟಕದ ಬೆಳಗಾವಿಯಲ್ಲಿ 1984ರಲ್ಲಿ ನಡೆದು ಇಂದಿಗೆ 100 ವರ್ಷಗಳಾಯಿತು. ಈ ನೆನಪಿಗೋಸ್ಕರ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ವರ್ಷವಿಡೀ ಸಂಭ್ರಮಾಚರಣೆ ಹಮ್ಮಿಕೊಂಡಿದೆ.ಈ ವೇಳೆ ಹಿರಿಯ ಮುಖಂಡ ಎಂ.ಆರ್‌.ಪಾಟೀಲ, ಕಾಂಗ್ರೆಸ್ ಮುಖಂಡ ಅಬ್ದುಲ್‌ ಹಮೀದ ಮುಶ್ರೀಫ, ವಿದ್ಯಾರಾಣಿ ತುಂಗಳ ಮಾತನಾಡಿದರು. ಪಾಲಿಕೆ ಮೇಯರ್ ಮೆಹೆಜಬೀನ ಹೊರ್ತಿ, ಉಪಮೇಯರ್ ದಿನೇಶ ಹಳ್ಳಿ, ಬಿಡಿಎ ಅಧ್ಯಕ್ಷ ಕನ್ನಾನ ಮುಶ್ರೀಫ, ಸೇವಾದಳದ ಪ್ರಮುಖರಾದ ವಿ.ವಿ.ತುಳಸಿಗೇರ, ಗಿರಿಜಾ ಹೂಗಾರ, ವಿಜಯಕುಮಾರ ಕಾಳೆ, ಮುಖಂಡರಾದ ಅಬ್ದುಲರಜಾಕ ಹೊರ್ತಿ, ಸುಭಾಷ ಕಾಲೇಬಾಗ, ಶಬ್ಬೀರ ಜಾಗಿರದಾರ, ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ, ಸೇರಿದಂತೆ ಸೇವಾದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!