- ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿ
ಶಾಲಾ ಶಿಕ್ಷಕರ ಹಾಜರಾತಿಗೆ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆ ಅಳವಡಿಸಿದ ಮೊದಲ ಶಾಲೆಯಾಗಿ ತಾಲೂಕಿನ ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಮನ ಸೆಳೆದಿದೆ ಎಂದು ನಮ್ಮ ಶಾಲೆ ನಮ್ಮನೆನಪು ಟ್ರಸ್ಟ್ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.
ಎಸ್ ಡಿ ಎಮ್ ಸಿ ಯ ನಿರ್ಣಯದಂತೆ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಸಹಯೋಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದು ತಂತ್ರಜ್ಞಾನ ಆಧಾರಿತ ಹಾಜರಾತಿ ಅಳವಡಿಸಲಾಯಿತು ಎಂದರು. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಹಾಜರಾತಿ ವ್ಯವಸ್ಥೆ ಇವೆ. ಇಂತಹ ಮಾದರಿ ಸರ್ಕಾರಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿಈ ಅಳವಡಿಸುವ ಯೋಜನೆ ಶಿಕ್ಷಣ ಇಲಾಖೆಯಿಂದ ಜಾರಿ ಹಂತದಲ್ಲಿದೆ, ಆದರೆ ನಮ್ಮ ಶಾಲೆ ನಮ್ಮ ನೆನಪು ಟ್ರಸ್ಟ್ ಈ ಉಪಕರಣವನ್ನು ಶಾಲೆಗೆ ಅಳವಡಿಸಿ ತಾಲೂಕಿನಲ್ಲಿಯೇ ಪ್ರಥಮ ಬಯೋಮೆಟ್ರಿಕ್ ಶಾಲೆಯನ್ನಾಗಿಸಿದೆ. ಈ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ, ಎಸ್ ಡಿ ಎಮ್ ಸಿ ಹಾಗೂ ಶಿಕ್ಷಕರು ಪ್ರಶಂಶಿಸಿ ಪ್ರೋತ್ಸಾಹಿಸಿದ್ದಾರೆ ಎಂದು ತಿಳಿಸಿದ್ದಾರೆ.ಕಳೆದ 7 ವರ್ಷಗಳಿಂದ ಕರಕುಚ್ಚಿಯ ಸರ್ಕಾರಿ ಮಾದರಿ ಹಿರಿ ಪ್ರಾಥಮಿಕ ಶಾಲೆ ಗೆ ನಮ್ಮಶಾಲೆ ನಮ್ಮ ನೆನಪು ಟ್ರಸ್ಟ್ ಹಲವು ಕೊಡುಗೆ ನೀಡುತ್ತ ಬಂದಿದೆ.ಶಾಲಾ ಕೊಠಡಿಗೆ ಅನುದಾನ, ಬಾಲಕಿಯರಿಗೆ ಸುಸಜ್ಜಿತ ಶೌಚಾಲಯ, ಗ್ರಂಥಾಲಯ, ಶುದ್ಧ ಕುಡಿಯವ ನೀರಿನ ಘಟಕ, ಪೀಠೋಪಕರಣ, ದಾಖಲಾತಿ ಅಭಿಯಾನ, ಸಾಂಸ್ಕೃತಿಕ ಸಂಘಟನೆ ಹೀಗೆ ಹಲವು ಯೋಜನೆಗಳು ಮತ್ತು ಕಾರ್ಯಕ್ರಮ ನೀಡುತ್ತಿದೆ ಎಂದರು.
-- ಕೋಟ್-ಕರಕುಚ್ಚಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಟ್ರಸ್ಟ್ ಅಧ್ಯಕ್ಷ, ಸದಸ್ಯರು ಮತ್ತು ಎಸ್.ಡಿಎಂಸಿ ಕ್ರೀಯಾ ಶೀಲವಾಗಿದ್ದು, ಶೈಕ್ಷಣಿಕ ಅಭಿವೃದ್ದಿಗೆ ತಮ್ಮ ಸ್ವಂತ ಖರ್ಚಿನಲ್ಲಿ, ಬಯೋ ಮೆಟ್ರಿಕ್ ಅಳವಡಿಸಿರುವುದರ ಮುಖ್ಯ ಉದ್ದೇಶ ಶಿಕ್ಷಕರ ಕ್ರಮಬದ್ಧ ಹಾಜರಾತಿ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದಾಗಿದೆ. ಈ ಕಾರ್ಯಕ್ಕೆ ಇಲಾಖೆ ಜೊತೆಗೆ ಕೈಜೋಡಿಸಿ
- ಎಚ್.ಎ.ಪರುಶುರಾಮಪ್ಪಕ್ಷೇತ್ರ ಶಿಕ್ಷಣಾಧಿಕಾರಿ
21ಕೆಟಿಆರ್.ಕೆ1ತರೀಕೆರೆ ಸಮೀಪದ ಕರಕುಚ್ಚಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕಿನಲ್ಲೇ ಪ್ರಥಮ ಬಾರಿಗೆ ಬಯೋಮೆಟ್ರಿಕ್ ಸಿಸ್ಟಸ್ ಅಳವಡಿಸಲಾಗಿದೆ.
21ಕೆಟಿಆರ್.ಕೆ.2ಃ ಎಚ್.ಎ.ಪರುಶುರಾಮಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ