ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಘಟ್ಟದಲ್ಲಿ ರೋಚಕತೆ ಪಡೆದು ಕುತೂಹಲ ಮೂಡಿಸಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಎದೆಬಡಿತ ಜೋರಾಗುವಂತೆ ಮಾಡಿತು.
ದ್ವಿತೀಯ ಸ್ಥಾನವನ್ನು ಕೇರಳದ ಬಿಎಂಸಿ ಪಡೆದು ೭೫ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು. ತೃತೀಯ ಚೆನ್ನೈನ ಇಂಕಂಟ್ಯಾಕ್ಸ್ ಸ್ಥಾನವನ್ನು ಪಡೆದು ೫೦ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು, ನಾಲ್ಕನೇ ಸ್ಥಾನ ಕೇರಳ ಪೊಲೀಸ್ ಪಡೆದು ೨೫ ಸಾವಿರ ನಗದು ಜೊತೆಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.ಮಹಿಳಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಚೆನ್ನೈನ ಐಸಿಎಫ್ ೫೦ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದರೆ, ದ್ವಿತೀಯ ಸ್ಥಾನವನ್ನು ಚೆನ್ನೈನ ಎಸ್‌ಆರ್‌ಎಂ ೪೦ ಸಾವಿರ ನಗದು ಜೊತೆಗೆ ಟ್ರೋಫಿ ಪಡೆಯಿತು, ತೃತೀಯ ಸ್ಥಾನವನ್ನು ಬ್ಯಾಂಕ್ ಆಫ್ ಮಹಾರಾಷ್ಟ್ರ ೩೦ ಸಾವಿರ ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು. ಕರ್ನಾಟಕ ವಾಲಿಬಾಲ್ ತಂಡ ೨೦ ಸಾವಿರ ರು. ನಗದು ಜೊತೆಗೆ ಟ್ರೋಫಿ ಪಡೆದುಕೊಂಡಿತು.