ವಿಜಯಪುರ: ಪಟ್ಟಣದ ವಹ್ನಿಕುಲ ಕ್ಷತ್ರಿಯ ಸಂಘ ಆಯೋಜಿಸಿದ್ದ ಜಿಲ್ಲಾಮಟ್ಟದ "ವಹ್ನಿಕುಲ ಕ್ಷತ್ರಿಯ ಪ್ರೀಮಿಯರ್ ಲೀಗ್-೨೦೨೫ " ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಮಗೊಂಡನಹಳ್ಳಿಯ ಅನಿಲ್ ಕುಮಾರ್ ತಂಡ ಟ್ರೋಫಿಯೊಂದಿಗೆ ಒಂದು ಲಕ್ಷ ರು. ನಗದು ಬಹುಮಾನ ಗೆದುಕೊಂಡಿತು.
ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯರ ಸಂಘದ ರಾಜ್ಯಾಧ್ಯಕ್ಷ ಮು.ಕೃಷ್ಣಮೂರ್ತಿ ಮಾತನಾಡಿ, ಸಂಘದಿಂದ ಪ್ರಸ್ತುತ ತಾಲೂಕು, ಜಿಲ್ಲಾಮಟ್ಟದ ಕ್ರಿಕೆಟ್ ಟೂರ್ನ್‌ಮೆಂಟನ್ನು ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟನ್ನು ಆಯೋಜಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷತ್ರಿಯ ಮಹಾಸಭಾ ಅಧ್ಯಕ್ಷರಾದ ನಿವೃತ್ತ ಎಸಿಪಿ ಸುಬ್ಬಣ್ಣ, ಮಹಾಸಭಾ ನಿರ್ದೇಶಕರಾದ ಕನಕರಾಜು, ಸಂಘಟನಾ ಕಾರ್ಯದರ್ಶಿ ಜೆಆರ್ ಮುನಿವೀರಣ್ಣ, ಪವಿತ್ರಾ ಮಂಜುನಾಥ್, ದೇವನಹಳ್ಳಿ ಮೌಕ್ತಿಕಾಂಬ ದೇವಾಲಯದ ಅಧ್ಯಕ್ಷರಾದ ನಾಗರಾಜು, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ವಿ.ಮುನಿರಾಜು, ಪುರಸಭಾ ಸದಸ್ಯ ನಂದಕುಮಾರ್, ಎಂಪಿಸಿಎಸ್ ಅಧ್ಯಕ್ಷ ನಾಗರಾಜು, ನಿರ್ದೇಶಕ ವೆಂಕಟೇಶ್, ರಾಜ್ಯ ಉಪಾಧ್ಯಕ್ಷ ಎಡಗೊಂಡನಹಳ್ಳಿ ಮುನಿರಾಜು, ಮುನೀಂದ್ರ, ಚೆನ್ನಕೃಷ್ಣ, ಮುರಳಿಧರ್, ಹೂಪರ್, ಮಂಜುನಾಥ್, ಅರುಣ್ ಇತರರಿದ್ದರು.ಇದೇ ಸಂದರ್ಭದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಕರಗ ಪೂಜಾರಿ ಭೀಮಣ್ಣ, ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದ ಕರಗ ಪೂಜಾರಿ ಜೆಆರ್ ದೇವರಾಜ್, ಘಂಟೆ ಪೂಜಾರಿಗಳಾದ ಅನಂತಕುಮಾರ್, ಎಂ.ನಾರಾಯಣ ಮತ್ತಿತರನ್ನು ಸನ್ಮಾನಿಸಲಾಯಿತು.
೦೧ ವಿಜೆಪಿ ೧೫ವಿಜಯಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ವಹ್ನಿಕುಲ ಕ್ಷತ್ರಿಯ ಸಂಘ ಆಯೋಜಿಸಿದ್ದ ಜಿಲ್ಲಾಮಟ್ಟದ "ವಹ್ನಿಕುಲ ಕ್ಷತ್ರಿಯ ಪ್ರೀಮಿಯರ್ ಲೀಗ್-೨೦೨೫ " ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ರಾಮಗೊಂಡನಹಳ್ಳಿ ಅನಿಲ್ ಕುಮಾರ್ ತಂಡ ಟ್ರೋಫಿಯೊಂದಿಗೆ ಒಂದು ಲಕ್ಷ ರು.ನಗದು ಬಹುಮಾನ ಪಡೆದುಕೊಂಡರು.