ಕಾರಟಗಿಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪೂಜೆ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಅಯ್ಯಪ್ಪ ಸ್ವಾಮಿಯ ಮಹಾಪೂಜೆಯ ಮತ್ತು ವಾಸವಿ ಮಹಿಳಾ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಮಂಡಲ ಪೂಜಾ ನಿಮಿತ್ಯ ರಾತ್ರಿ ೧೦,೩೦ಕ್ಕೆ ದಾನ್ಯ ಗಳೊಂದಿಗೆ ಮೂರ್ತಿಯನ್ನು ವಿಲೀನ ಗೊಳಿಸುವ ಹರಿಹರಾಸನಮ್ ಕಾರ್ಯಕ್ರಮದ ಬಳಿಕ ದೇವಸ್ಥಾನ ದ್ವಾರ ಬಾಗಿಲು ಮುಚ್ಚಲಾಯಿತು.

ಕಾರಟಗಿ: ಇಲ್ಲಿನ ಜೆಪಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರಥಮ ವರ್ಷದ ಮಂಡಲ ಪೂಜೆ ಕಾರ್ಯಕ್ರಮಗಳು ನಡೆದವು.ಗುರುಸ್ವಾಮಿ ಶ್ರೀಧರ್ ಅವರ ನೇತೃತ್ವದಲ್ಲಿ ಪ್ರಾರ್ಥಕಾಲದ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗೆ ಅಭಿಷೇಕ ವಿಶೇಷ ಪೂಜಾ ಹೂವಿನ ಅಲಂಕಾರ ನಂತರ ಮಹಾ ಮಂಗಳಾರತಿ ನಡೆಯಿತು.ನಂತರ ಮಾತನಾಡಿದ ಶ್ರೀಧರ್, ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರತಿಷ್ಠಾಪನೆಗೊಂಡ ನಂತರ ಪ್ರಥಮ ಬಾರಿಗೆ ಮೊದಲ ವರ್ಷದ ಮಂಡಲ ಪೂಜೆಯ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ನಿಂದ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಯಿಂದ ಅಯ್ಯಪ್ಪ ಸ್ವಾಮಿಗೆ ಅಭಿಷೇಕ ವಿಶೇಷ ಪೂಜಾ ಹೂವಿನ ಅಲಂಕಾರ ನಂತರ ಮಹಾ ಮಂಗಳಾರತಿ ನಂತರ ಅಯ್ಯಪ್ಪ ಸ್ವಾಮಿಗಳಿಗೆ ಮತ್ತು ಭಕ್ತರಿಗೆ ಸರ್ವರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.ಸಂಜೆ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯ ಮತ್ತು ವಾಸವಿ ಮಹಿಳಾ ಭಜನಾ ಮಂಡಳಿಯಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಮಂಡಲ ಪೂಜಾ ನಿಮಿತ್ಯ ರಾತ್ರಿ ೧೦,೩೦ಕ್ಕೆ ದಾನ್ಯ ಗಳೊಂದಿಗೆ ಮೂರ್ತಿಯನ್ನು ವಿಲೀನ ಗೊಳಿಸುವ ಹರಿಹರಾಸನಮ್ ಕಾರ್ಯಕ್ರಮದ ಬಳಿಕ ದೇವಸ್ಥಾನ ದ್ವಾರ ಬಾಗಿಲು ಮುಚ್ಚಲಾಯಿತು.ಡಿ.೩೦ರಂದು ಸಂಜೆ ೫ ಗಂಟೆಯಿಂದ ಯಥಾ ಪ್ರಕಾರ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜಾ ಧಾರ್ಮಿಕ ವಿಧಿ ವಿಧಾನಗಳಿಂದ ಪೂಜಾ ಕೈಂಕರ್ಯ ಜರುಗಿಸಲಾಗುತ್ತದೆ. ಅಂದು ವಿಶೇಷ ದರ್ಶನ ಪಡೆಯಬಹುದಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಅಯ್ಯಪ್ಪ ಸ್ವಾಮಿಯ ಮಾಲಾ ದೀಕ್ಷಾದಾರಿ ಸಿದ್ದು ವಳಕಲದಿನ್ನಿ ಮಾತನಾಡಿ, ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ ಪ್ರಥಮ ವರ್ಷದ ಮಂಡಲ ಪೂಜಾ ಕಾರ್ಯಕ್ರಮ ನಡೆಸಲಾಯಿತು ಎಂದರು.ಈ ವೇಳೆ ಶ್ರೀಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ಸುಮಾರು ೭೦ಕ್ಕೂ ಅಧಿಕ ಅಯ್ಯಪ್ಪ ಸ್ವಾಮಿಯ ಭಕ್ತರು ಇದ್ದರು.

Share this article