ಕಂಪ್ಲಿ: ಗಂಗಾ ಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಕುರಿತು ಈ ಹಿಂದಿನ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಈ ವಿಚಾರವೀಗ ಕೇಂದ್ರ ಸರ್ಕಾರದ ಹಂತದಲ್ಲಿದೆ. ಮುಂದೊಂದು ದಿನ ಗಂಗಾಮತ ಮತ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಖಂಡಿತ ಸೇರ್ಪಡೆಗೊಳ್ಳಲಿದೆ. ಅದಾಗ್ಯೂ ಈ ವಿಚಾರವನ್ನು ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಕಂಪ್ಲಿಯ ಮೀನುಗಾರರಿಗೆ ಮೀನು ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್, ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ:
ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ್, ಮುಖಂಡರಾದ ಬಿ.ನಾರಾಯಣಪ್ಪ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಅಯ್ಯೋದಿ ವೆಂಕಟೇಶ, ಕಟ್ಟೆ ಸಣ್ಣ ದುರುಗಪ್ಪ, ಎ.ತಾಯಣ್ಣ, ಬಿ.ನೇಣಿಗಿರೀಶ, ಆಟೋ ರಾಘವೇಂದ್ರ, ಕೆ.ಪ್ರಕಾಶ, ನಡವಿ ಮಂಜುನಾಥ ಇತರರಿದ್ದರು.