ಮೀನು ಮಾರಾಟ ಫೆಡರೇಶನ್‌ನಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್‌ರೇ ಯಂತ್ರ ಕೊಡುಗೆ

KannadaprabhaNewsNetwork |  
Published : Mar 09, 2026, 02:45 AM IST
ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್‌ರೇ ಯಂತ್ರ ಹಸ್ತಾಂತರಿಸಿ ಮಾತನಾಡುತ್ತಿರುವ ಶಾಸಕ ಯಶ್‌ಪಾಲ್ ಸುವರ್ಣ | Kannada Prabha

ಸಾರಾಂಶ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗೆ ನೀಡಿದ ಎಕ್ಸ್ ರೇ ಯಂತ್ರವನ್ನು ಫೆಡರೇಶನ್ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗೆ ನೀಡಿದ ಎಕ್ಸ್ ರೇ ಯಂತ್ರವನ್ನು ಫೆಡರೇಶನ್ ಅಧ್ಯಕ್ಷ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.

ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಸರ್ಜನ್ ಅವರು ಎಕ್ಸ್ ರೇ ಸೇವೆಯಲ್ಲಿ ವ್ಯತ್ಯಯದಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಫೆಡರೇಶನ್ ಮೂಲಕ ಜಿಲ್ಲಾಸ್ಪತ್ರೆಗೆ ನೂತನ ಎಕ್ಸ್ ರೇ ಯಂತ್ರವನ್ನು ನೀಡಿದ್ದು, ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ದಿನ ನಿತ್ಯ ಚಿಕಿತ್ಸೆಗೆ ಬರುವ ನೂರಾರು ರೋಗಿಗಳಿಗೆ ಸಹಾಯವಾಗಲಿದೆ ಎಂದರು.

ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಶೋಕ್, ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗೆ ಎಕ್ಸ್ ರೇ ಯಂತ್ರವನ್ನು ಫೆಡರೇಶನ್ ವತಿಯಿಂದ ನೀಡಿದ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ನಿರ್ದೇಶಕರಿಗೆ ಜಿಲ್ಲಾಸ್ಪತ್ರೆ ಪರವಾಗಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭ ಮೀನು ಮಾರಾಟ ಫೆಡರೇಷನ್ ಉಪಾಧ್ಯಕ್ಷ ದೇವಪ್ಪ ಕಾಂಚನ್, ನಿರ್ದೇಶಕರಾದ ರಾಮಚಂದ್ರ ಕುಂದರ್, ಸುರೇಶ್ ಸಾಲ್ಯಾನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ರಶ್ಮಿ ಸಿ. ಭಟ್, ಸುಂದರ ಕಲ್ಮಾಡಿ, ಯೋಗೀಶ್ ಸಾಲ್ಯಾನ್, ಟಿ.ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಎಡ್ಲಿನ್ ಕರ್ಕಡ, ಮೀನುಗಾರ ಮುಖಂಡರಾದ ದಯಾನಂದ ಸುವರ್ಣ, ಜಗನ್ನಾಥ ಕಡೆಕಾರ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ನಾಗರಾಜ ಸುವರ್ಣ, ರತ್ನಾಕರ ಸಾಲ್ಯಾನ್, ಸುಂದರ ಸಾಲ್ಯಾನ್, ವಿನಯ ಕರ್ಕೇರ, ಕರುಣಾಕರ ಸಾಲ್ಯಾನ್, ನಾಗರಾಜ ಕುಂದರ್, ಮಿಥುನ್ ಕುಂದರ್, ಕೃಷ್ಣ ಕೋಟ್ಯಾನ್, ಗೀತಾ ಕರ್ಕೇರ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ, ವೈದ್ಯರಾದ ಡಾ. ಆಮ್ನ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬನ್ನಂಜೆ ಶನಿ ಕ್ಷೇತ್ರ: ಚಂದ್ರಮಂಡಲ ರಥೋತ್ಸವ
ಧರ್ಮ ಮತ್ತು ಕಾಯಕ ಬೇರೆ ಅಲ್ಲ: ಬಸವರಾಜ ಬೊಮ್ಮಾಯಿ