ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭವಾರ್ತೆ ಚಿತ್ರದುರ್ಗ
ಗುರುವಾರ ರಾತ್ರಿ ಕೆರೆಯ ತೂಬಿಗೆ (ನೀರು ಹೊರ ಹೋಗುವ ಪ್ರದೇಶ) ಜೆಸಿಬಿ ಯಂತ್ರದ ಮೂಲಕ ಹಾನಿ ಪಡಿಸಿ ಮೂರು ಅಡಿಯಷ್ಟು ನೀರು ಹೊರ ಕಳಿಸುವ ಕಾರ್ಯಕ್ಕೆ ಕೈ ಹಾಕಿದೆ. ರಾತ್ರಿ ಏಕಾಏಕಿ ಕೆರೆ ನೀರು ಹೊರ ಹೋಗಿದ್ದರಿಂದ ಕೆಲ ರೈತರ ಜಮೀನಿಗೆ ನೀರು ನುಗ್ಗಿ ಹಾನಿಯಾಗಿದೆ. ರೈತರಿಗೆ ಇದು ಅಭಿವೃದ್ದಿ ಕಾರ್ಯದ ಫಲ ಎಂದು ಗೊತ್ತೇ ಇಲ್ಲ. ಕೆರೆ ಭರ್ತಿಯಾಗಿ ನೀರು ಹೊರ ಬಿಟ್ಟಿದ್ದಾರೆ ಎಂದೇ ಭಾವಿಸಿದ್ದಾರೆ.
ಏನಿದು ಕೆರೆ ಅಭಿವೃದ್ದಿ ಯೋಜನೆಚಿತ್ರದುರ್ಗ ಮುರುಘಾಮಠದ ಮುಂಭಾಗದಲ್ಲಿ ಒಂದು ಕೆರೆಯಿದ್ದು, ಅದನ್ನು ಅರಸನಕೆರೆ ಎಂದೇ ಕರೆಯಲಾಗುತ್ತದೆ. ಕವಾಡಿಗರಹಟ್ಟಿ ಮೇಲ್ಭಾಗದಿಂದ ಹರಿದು ಬರುವ ಚರಂಡಿ ಹಾಗೂ ಡ್ರೈನೇಜ್ ನೀರು ನೇರವಾಗಿ ಈ ಕೆರೆಯಲ್ಲಿ ಸಂಗ್ರಹವಾಗಿದೆ. ಈ ಕೆರೆಗೆ ನೈಸರ್ಗಿಕವಾಗಿ ಹರಿದು ಬರುವ ನೀರಿನಿಂದ ಮತ್ತು ಅಲ್ಲಿ ಬಡಾವಣೆಗಳು ತಲೆಎತ್ತಿರುವುದರಿಂದ ಬಹಳ ವರ್ಷಗಳ ಕಾಲ ಕೆರೆಯಲ್ಲಿ ಗುಂಡಿಗಳಿದ್ದವು.
ಕೆರೆ ಅಭಿವೃದ್ಧಿಪಡಿಸಿ, ಅದನ್ನೊಂದು ಪ್ರವಾಸಿ ತಾಣವಾಗಿ ಮಾಡಲು ಯಾರ ವಿರೋಧವೂ ಇಲ್ಲ. ಆದರೆ ಕೆರೆ ಯಾವುದೆಂಬುದೇ ಮುಖ್ಯವಾಗುತ್ತದೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಇದೇ ಗ್ರಾಮದಿಂದ ಚರಂಡಿ ನೀರು ಸಂಗ್ರಹವಾಗುವ ಕೆರೆಗೆ ಅಭಿವೃದ್ಧಿ ಕೈಗೆತ್ತಿಕೊಂಡರೆ, ಅಲ್ಲಿ ವಾಕ್ ಮಾಡುವರು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಕೆರೆ ಪಕ್ಕ ಹೋದರೆ ಮೂಗು ಮುಚ್ಚಿಕೊಂಡು ಹೋಗುವಷ್ಟರ ಮಟ್ಟಿಗೆ ದುರ್ನಾತ ಬೀರುತ್ತದೆ. ಇಂತಹ ಕೆರೆ ಅಭಿವೃದ್ಧಿ ಪಡಿಸಲು ಐದು ಕೋಟಿ ಸುರಿಯುವುದು ಮೂರ್ಖತನವೆಂದೇ ಜನತೆ ಅಭಿಪ್ರಾಯಪಡುತ್ತಾರೆ.
ನಗರಾಭಿವೃದ್ದಿ ಪ್ರಾಧಿಕಾರದವರು ಐದು ಕೋಟಿ ಖರ್ಚು ಮಾಡಿ ಅರಸನಕೆರೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ ಎಂದಷ್ಟೇ ಗೊತ್ತು. ಅದರ ಪೂರ್ಣ ಪ್ರಮಾಣದ ವಿವರ ಗಮನಿಸಿಲ್ಲ. ಪ್ರಾಧಿಕಾರದ ಆಯುಕ್ತರ ಬಳಿ ಮಾಹಿತಿ ತರಿಸಿಕೊಂಡು ಪರಿಶೀಲಿಸಲಾಗುವುದು.ಬಿ.ಟಿ.ಕುಮಾರಸ್ವಾಮಿ ಅಪರ ಜಿಲ್ಲಾಧಿಕಾರಿ