ಬೆಂಗಳೂರು : ಐವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ

KannadaprabhaNewsNetwork | Updated : Mar 09 2025, 11:01 AM IST

ಸಾರಾಂಶ

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯಶ್ರೀ ಮತ್ತು 2022ನೇ ಸಾಲಿನ ದತ್ತಿ ಬಹುಮಾನ ಮತ್ತು ಪುಸ್ತಕ ಬಹುಮಾನ ಪ್ರಕಟ 

 ಬೆಂಗಳೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯಶ್ರೀ ಮತ್ತು 2022ನೇ ಸಾಲಿನ ದತ್ತಿ ಬಹುಮಾನ ಮತ್ತು ಪುಸ್ತಕ ಬಹುಮಾನ ಪ್ರಕಟಗೊಂಡಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ 2023ನೇ ಗೌರವ ಪ್ರಶಸ್ತಿಗೆ ಡಾ.ಸಿ.ವೀರಣ್ಣ (ಬೆಂಗಳೂರು), ಜಾಣಗೆರೆ ವೆಂಕಟರಾಮಯ್ಯ(ತುಮಕೂರು), ಡಾ.ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ), ಎ.ಎಂ.ಮದರಿ(ಕೊಪ್ಪಳ) ಮತ್ತು ಡಾ.ಸಬಿಹಾ ಭೂಮಿಗೌಡ (ಮಂಗಳೂರು) ಆಯ್ಕೆಯಾಗಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು, ಸಾಹಿತ್ಯಶ್ರೀ ಮತ್ತು ಪುಸ್ತಕ ಬಹುಮಾನಕ್ಕೆ ತಲಾ 25 ಸಾವಿರ ನಗದು ಪ್ರಶಸ್ತಿ ಒಳಗೊಂಡಿದೆ ಎಂದು ತಿಳಿಸಿದರು.

2023ನೇ ಸಾಹಿತ್ಯ ಶ್ರೀ ಪ್ರಶಸ್ತಿಗೆ ಡಾ.ಎಂ.ಎಸ್‌.ಶೇಖರ್‌ (ಮೈಸೂರು), ಜಿ.ಎನ್.ಮೋಹನ್‌ (ಬೆಂಗಳೂರು), ಡಾ.ಟಿ.ಎಸ್.ವಿವೇಕಾನಂದ (ತುಮಕೂರು), ಡಾ.ಜಯಶ್ರೀ ಕಂಬಾರ (ಬೆಳಗಾವಿ), ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ (ಧಾರವಾಡ), ಡಾ.ಬಾಲಗುರುಮೂರ್ತಿ(ಕೋಲಾರ), ಪ್ರೊ.ಶಿವಗಂಗಾ ರುಮ್ಮಾ (ಕಲಬುರಗಿ), ಡಾ.ರೀಟಾ ರೀನಿ (ಬೆಂಗಳೂರು), ಡಾ.ಕಲೀಂ ಉಲ್ಲಾ (ಶಿವಮೊಗ್ಗ) ಮತ್ತು ಡಾ.ವೆಂಕಟಗಿರಿ ದಳವಾಯಿ (ಬಳ್ಳಾರಿ) ಆಯ್ಕೆಗೊಂಡಿದ್ದಾರೆ.

2022ನೇ ವರ್ಷದ ಪುಸ್ತಕ ಬಹುಮಾನಕ್ಕೆ 18 ಲೇಖಕರ ಕೃತಿಗಳು ಆಯ್ಕೆಗೊಂಡಿವೆ. ರಾಮು ಮೈಸೂರು-ವಿಷ್ಣುಕ್ರಾಂತಿ ಮತ್ತು ಇತರೆ ಪದ್ಯಗಳು(ಕಾವ್ಯ), ಜಿ.ಆರ್‌.ರೇವಣ ಸಿದ್ದಪ್ಪ- ಬಾಳ ನೌಕೆಗೆ ಬೆಳಕಿನ ದೀಪ (ಕಾದಂಬರಿ), ಸುಮಂಗಲಾ ಎಸ್‌.ಮಮ್ಮಿಗಟ್ಟಿ- ಬಯಲ ಬೆರಗು (ಕಾದಂಬರಿ), ದಯಾನಂದ- ಬುದ್ಧನ ಕಿವಿ (ಸಣ್ಣಕತೆ), ಬಿದರಹಳ್ಳಿ ನರಸಿಂಹಮೂರ್ತಿ- ಮಾಯಾದಂಡ (ನಾಟಕ), ಶ್ರೀಹರ್ಷ ಸಾಲಿಮಠ- ಡಾರ್ಕ್‌ ಹ್ಯೂಮರ್‌ (ಲಲಿತ ಪ್ರಬಂಧ), ಚಿಂತಾಮಣಿ ಕೊಡ್ಲೆಕೆರೆ- ಗಿಂಡಿಯಲ್ಲಿ ಗಂಗೆ (ಪ್ರವಾಸ ಸಾಹಿತ್ಯ), ಪಿ.ರಾಮಯ್ಯ- ನಾನು ಹಿಂದೂ ರಾಮಯ್ಯ (ಆತ್ಮಕಥೆ) ಆಯ್ಕೆಯಾಗಿದ್ದಾರೆ.

ಡಾ.ಚನ್ನಪ್ಪ ಕಟ್ಟಿ- ಕುಯಿಲು (ಸಾಹಿತ್ಯ ವಿಮರ್ಶೆ), ಸಂತೆಬೆನ್ನೂರು ಫೈಜ್ನಟ್ರಾಜ್‌- ಮಗಳಿಗೆ ಹೇಳಿದ ಕಥೆಗಳು (ಮಕ್ಕಳ ಸಾಹಿತ್ಯ), ಡಾ.ಸುಕನ್ಯಾ ಸೂನಗಹಳ್ಳಿ- ಬೆಳೆ ರೋಗಗಳು, ಕೀಟಗಳು ಮತ್ತು ಅವುಗಳ ನಿರ್ವಹಣೆ (ವಿಜ್ಞಾನ ಸಾಹಿತ್ಯ), ಎಚ್‌.ಎನ್‌.ನಾಗಮೋಹನ ದಾಸ್‌- ಸಂವಿಧಾನ ಮತ್ತು ವಚನಗಳು (ಮಾನವಿಕ), ಡಾ.ಶೈಲಜಾ ಇಂ.ಹಿರೇಮಠ- ನಿರೂಪಣೆಯಾಚೆಗೆ (ಸಂಶೋಧನೆ), ಅನಿಲ ಸಿ.ಹೊಸಮನಿ- ಡಾ.ಅಂಬೇಡ್ಕರ್‌ ಸಹವಾಸದಲ್ಲಿ (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ), ರಾಜರಾಂ ತಲ್ಲೂರು- ಕರಿಡಬ್ಬಿ (ಅಂಕಣ ಬರಹ/ ವೈಚಾರಿಕ ಬರಹ), ಪಿ.ವಿ.ನಂಜರಾಜ ಅರಸ್‌- ಟೀಪೂ ಮಾನ್ಯತೆ ಸಿಗದ ಸುಲ್ತಾನ್ ಅಂದು-ಇಂದು (ಸಂಕೀರ್ಣ), ಮಲ್ಲಿಕಾರ್ಜುನ ಶೆಲ್ಲಿಕೇರಿ- ದೀಡೆಕರೆ ಜಮೀನು (ಲೇಖಕರ ಮೊದಲ ಸ್ವತಂತ್ರ ಕೃತಿ), ಪೈಯನೂರು ಕುಸ್ಲಿರಾಮನ್ ಮತ್ತು ಮೋಹನ ಕುಂಟಾರ- ಚಾರು ವಸಂತ (ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ) ಕೃತಿಗಳು ಆಯ್ಕೆಗೊಂಡಿವೆ.

2022ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನಕ್ಕೆ ಎಚ್.ಎಸ್‌.ಅನುಪಮಾ- ಚದುರಂಗ ದತ್ತಿ ಬಹುಮಾನ ( ಕಾದಂಬರಿ- ಬೆಳಗಿನೊಳಗು ಮಹಾದೇವಿಯಕ್ಕ), ಫಾತಿಮಾ ರಲಿಯಾ- ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ (ಲಲಿತ ಪ್ರಬಂಧ- ಕಡಲು ನೋಡಲು ಹೋದವಳು), ಶಾರದಾ ವಿ.ಮೂರ್ತಿ- ಸಿಂಪಿ ಲಿಂಗಣ್ಣ ದತ್ತ ಬಹುಮಾನ (ಜೀವನ ಚರಿತ್ರೆ), ವಿನಯಾ ನಂದಿಹಾಳ- ಪಿ.ಶ್ರೀನಿವಾಸರಾವ್‌ ದತ್ತಿ ಬಹುಮಾನ (ಸಾಹಿತ್ಯ ವಿಮರ್ಶೆ-ಕಣ್ಣಂಚಿನ ಕಿಟಕಿ), ವಿಕ್ರಮ ವಿಸಾಜಿ-ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನ (ಅನುವಾದ- ದೇಹವೇ ದೇಶ), ಜೆ.ಆರ್.ಸುಶ್ರುತ್‌- ಮಧುರಚೆನ್ನ ದತ್ತಿ ಬಹುಮಾನ (ಮೊದಲ ಸ್ವತಂತ್ರ ಕೃತಿ- ಪರಿಣಯ ಪ್ರಪಂಚ), ಅಕ್ಷತಾ ಕೃಷ್ಣಮೂರ್ತಿ- ಬಿ.ವಿ.ವೀರಭದ್ರಪ್ಪ ದತ್ತಿ ಬಹುಮಾನ (ವೈಚಾರಿಕ- ಇಸ್ಕೂಲು), ಕೃಷ್ಣಮೂರ್ತಿ ಚಂದರ್‌- ಅಮೆರಿಕನ್ನಡ ದತ್ತಿನಿಧಿ ಬಹುಮಾನ (ಕನ್ನಡದಿಂದ ಇಂಗ್ಲಿಷಿಗೆ ಅನುವಾದ-ಕವಿರಾಜಮಾರ್ಗ ಆ್ಯಂಡ್‌ ದಿ ಕನ್ನಡ ವರ್ಲ್ಡ್‌), ಡಾ.ಶ್ರೀಧರ ಹೆಗಡೆ ಭದ್ರನ್‌- ಜಲಜಾ ಶ್ರೀಪತಿ ಆಚಾರ್ಯ ಗಂಗೂರ್‌ ದತ್ತಿನಿಧಿ ಬಹುಮಾನ(ದಾಸ ಸಾಹಿತ್ಯ- ಸುಜ್ಞಾನ ಅಡಿಗೆ)ಕ್ಕೆ ಆಯ್ಕೆಗೊಂಡಿವೆ.

Share this article