ಕಬ್ಬಿಗೆ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಿ

KannadaprabhaNewsNetwork |  
Published : Oct 11, 2026, 04:15 AM IST
10ಸದಚಬಸಬಚಸದಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಪಾಲಬಾವಿರೈತರು ಬೆಳೆದ ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು. ಎನ್‌ಎಸ್‌ಪಿ ದರವನ್ನು ₹60 ಹೆಚ್ಚಿಸಬೇಕು ಹಾಗೂ ಎಥೆನಾಲ್ ಅನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಪಾಲಬಾವಿ

ರೈತರು ಬೆಳೆದ ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಂಬಲ ಬೆಲೆ ನಿಗದಿಪಡಿಸಬೇಕು. ಎನ್‌ಎಸ್‌ಪಿ ದರವನ್ನು ₹60 ಹೆಚ್ಚಿಸಬೇಕು ಹಾಗೂ ಎಥೆನಾಲ್ ಅನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಖರೀದಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಸಮೀಪದ ಕಪ್ಪಲಗುದ್ದಿ–ಸೈದಾಪುರ ಗ್ರಾಮಗಳ ಗಡಿಭಾಗದಲ್ಲಿರುವ ಮುನ್ಯಾಳ ಉಪಕಾಲುವೆ ಸಮೀಪ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ಶನಿವಾರ ನಡೆದ ರೈತ ಸಂಘದ ನಾಮಫಲಕ ಉದ್ಘಾಟನೆ ಹಾಗೂ ‘ಶಾಲು ದೀಕ್ಷೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅ.12ರಂದು ದೆಹಲಿಯಲ್ಲಿ ಕೇಂದ್ರ ಸಚಿವರು, ನಾಡಿನ ಮಹಾತ್ಮರು ಹಾಗೂ ರೈತ ಮುಖಂಡರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸುವ ನಿರ್ಧಾರ ಕೈಗೊಳ್ಳಬೇಕು. ಸಭೆ ಯಶಸ್ವಿಯಾಗದಿದ್ದರೆ ಅ.13ರಂದು ರಾಜ್ಯಾದ್ಯಂತ ಎಲ್ಲ ಹೆದ್ದಾರಿಗಳನ್ನು ಬಂದ್ ಮಾಡುವಂತೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಬೇಕು ಎಂದು ಆಗ್ರಹಿಸಿದರು.

ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಅನ್ನದಾತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಕಬ್ಬಿಗೆ ನ್ಯಾಯಯುತ ಬೆಲೆ ಘೋಷಿಸುವುದು ಅಗತ್ಯವಾಗಿದೆ ಎಂದು ಚೂನಪ್ಪ ಪೂಜೇರಿ ಹೇಳಿದರು.100ಕ್ಕೂ ಅಧಿಕ ರೈತರಿಗೆ ಶಾಲು ದೀಕ್ಷೆ: ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅವರು 100ಕ್ಕೂ ಅಧಿಕ ರೈತರಿಗೆ ಕೊರಳಿಗೆ ಹಸಿರು ಶಾಲು ಹಾಕಿ, ಶಾಲು ದೀಕ್ಷೆ ನೀಡಿ ಗೌರವಿಸಿದರು.ಸಮೀರವಾಡಿ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ರಂಗನಗೌಡ ಪಾಟೀಲ, ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿನಗುಂಡಿ, ಮುಗಳಖೋಡ ಪುರಸಭೆ ಸದಸ್ಯ ಕೆಂಪಣ್ಣ ಅಂಗಡಿ ಹಾಗೂ ಶಿವಲಿಂಗ ಕೌಜಲಗಿ ಮಾತನಾಡಿದರು.ವೇದಿಕೆಯಲ್ಲಿ ರೈತ ಸಂಘದ ರಾಯಬಾಗ ತಾಲೂಕು ಅಧ್ಯಕ್ಷ ರಮೇಶ ಕಲ್ಲಾರ, ಬಸವರಾಜ ಮೆಕ್ಕಳಕ್ಕಿ, ರೋಣ ಜಿಲ್ಲಾಧ್ಯಕ್ಷ ಈರಣ್ಣ ಅಂಗಡಿ, ಪ್ರಗತಿಪರ ರೈತ ಪರಪ್ಪ ಬಂಗಿ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಸಿದ್ದಪ್ಪ ಲಂಗೋಟಿ, ಶಿವಪ್ಪ ಅಥಣಿ, ಕಲ್ಲನಗೌಡ ಪಾಟೀಲ, ವಿಜಯ ನಾಯಿಕ, ರಾಮಕೃಷ್ಣ ಸಂಕಾನಟ್ಟಿ ಹಾಗೂ ಪ್ರಕಾಶ ಉಮಾರಾಣಿ ಉಪಸ್ಥಿತರಿದ್ದರು.ಈ ವೇಳೆ ಲಕ್ಷ್ಮಣ ತುಕ್ಕಾನಟ್ಟಿ, ಮಕ್ತುಮ್ ನದಾಫ್, ಗಂಗಾಧರ ನಾಯಿಕ, ಗಂಗಾಧರ ಉಮಾರಾಣಿ, ಮಹಾಂತೇಶ ರಡರಟ್ಟಿ, ಧರೆಪ್ಪ ಮಂಗಳೂರ, ಗೌಡಪ್ಪಗೌಡ ಪಾಟೀಲ, ನಾಗಪ್ಪ ಮಂಟೂರ, ಧರೆಪ್ಪ ನುಚ್ಚುಂಡಿ, ಕೃಷ್ಣಪ್ಪ ಗೊಲಬಾವಿ, ಚಿದಾನಂದ ಅಂಗಡಿ, ಸಿದ್ದರಾಮ ಕುಂದರಗಿ, ವಿಠ್ಠಲ ಗೌರವ್ವಗೋಳ, ಬರಮಪ್ಪ ಬಾಗೋಜಿ, ಶ್ರೀಶೈಲ ಹೊರಟ್ಟಿ, ಬಸವರಾಜ ಬಿರಾಜ, ಸಿದ್ದಪ್ಪ ರಾಜಾಪುರ, ನಿಂಗಪ್ಪ ಅಂಗಡಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಿಪ್ಪಾಣಿ–ಮುಧೋಳ ರಾಜ್ಯ ಹೆದ್ದಾರಿಯಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಸೇರಿದಂತೆ ರೈತ ಮುಖಂಡರನ್ನು ತೆರೆದ ವಾಹನದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಕರೆತರಲಾಯಿತು. ಯಂತ್ರದ ಮೂಲಕ ಪುಷ್ಪವೃಷ್ಟಿ ಮಾಡಿ ಮುಖಂಡರನ್ನು ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು.ಈರಪ್ಪ ಸಪ್ತಸಾಗರ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಬಳಿಕ ದಾಸೋಹದ ಛತ್ರದಲ್ಲಿ ಅನ್ನಸಂತರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮದ ರಕ್ಷಣೆ ದಸರಾ ಮಹೋತ್ಸವದ ಮೂಲ ಗುರಿ: ರಂಭಾಪುರಿ ಜಗದ್ಗುರು
24 ಸಾವಿರ ಲೀಟರ್ ಮದ್ಯಸಾರ ಅಕ್ರಮ ಸಾಗಣೆ