ಸಿದ್ದಾಪುರ ಪಟ್ಟಣದ ವಿವಿಧೆಡೆ ಧ್ವಜಾರೋಹಣ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಿದ್ದಾಪುರ ಪಟ್ಟಣದ ವಿವಿಧೆಡೆ ಧ್ವಜಾರೋಹಣ ನೆರವೇರಿಸಲಾಯಿತು.
ಲಯನ್ಸ ಬಾಲಭವನದಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸ್ಥಳೀಯ ಲಯನ್ಸ ಕ್ಲಬ್ಬಿನ ಅಧ್ಯಕ್ಷ ನ್ಯಾಯವಾದಿ ಎಂ.ಆರ್. ಪಾಟೀಲ್ ಹೊಸೂರು ಧ್ವಜಾರೋಹಣ ನೆರವೇರಿಸಿದರು.
ಲಯನ್ಸ ಮಾಜಿ ಜಿಲ್ಲಾ ಗವರ್ನರ್ ರವಿ ಹೆಗಡೆ ಹೂವಿನಮನೆ, ಕ್ಲಬ್ಬಿನ ಮಾಜಿ ಅಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿದರು. ಹಿಂದಿನ ಅಧ್ಯಕ್ಷರಾದ ಸಿ.ಎಸ್. ಗೌಡ ಹೆಗ್ಗೋಡಮನೆ, ಶಾಮಲ ಹೆಗಡೆ ಹೂವಿನಮನೆ, ರವಿ ಎಂ. ಪಾಟೀಲ್ ಹೊಸೂರು, ಎ.ಜಿ. ನಾಯ್ಕ, ನಾಗರಾಜ ಪಾಟೀಲ್ ಮಳವತ್ತಿ, ಆಕಾಶ್ ಹೆಗಡೆ ಗುಂಜಗೋಡು, ಗಣೇಶ್ ಪೈ ಇಟಗಿ, ವೀಣಾ ಶೇಟ್, ಆನಂದ ಶೇಟ್, ರವಿ ಗೌಡರ್ ಹೊಸೂರು, ನವೀನ ಪೈ ಇಟಗಿ, ಸಂಕೇತ್ ನೀಲೆಕಣಿ, ರಾಜೇಶ್ ಹೆಗಡೆ ಹರಗಿ ಮುಂತಾದವರಿದ್ದರು.
ಮಾರ್ಕೆಟಿಂಗ್ ಸೊಸೈಟಿಯಲ್ಲಿ:
ಸ್ಥಳೀಯ ತಾಲೂಕು ಮಾರ್ಕೆಟಿಂಗ್ ಸೊಸೈಟಿಯಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಧ್ವಜರೋಹಣ ನೆರವೇರಿಸಿದರು. ವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ, ಉಪವ್ಯವಸ್ಥಾಪಕ ಪ್ರಸನ್ನ ಕುಮಾರ ಭಟ್ಟ ಕೆರೆಹೊಂಡ ನಿರ್ದೇಶಕ ರಮಾನಂದ ಹೆಗಡೆ ಮಳಗುಳಿ ಹಾಗೂ ಜಿ.ಜಿ. ಹೆಗಡೆ ಬಾಳಗೋಡ, ಕೆ.ಆರ್. ಹೆಗಡೆ ಹೆಬ್ಕುಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಎಸ್.ಎಲ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಹಾರ್ಸಿಕಟ್ಟಾ ಸೇ.ಸ.ಸಂಘ:
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಧ್ವಜಾರೋಹಣ ನೆರವೇರಿಸಿ ನಂತರ ಕಾಳುಮೆಣಸಿನ ಹಾಗೂ ಏಲಕ್ಕಿ ಗಿಡ ನೆಟ್ಟರು. ಉಪಾಧ್ಯಕ್ಷ ನರೇಂದ್ರ ಹೆಗಡೆ ಹೊಂಡಗಾಶಿ, ನಿರ್ದೇಶಕರಾದ ಮಂಜುನಾಥ ನಾಯ್ಕ, ಎಂ.ಎನ್. ಭಟ್ಟ, ನಾಗರಾಜ ಹೆಗಡೆ, ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ ಚಳ್ಳೆಹದ್ದ ಹಾಗೂ ಸಿಬ್ಬಂದಿ, ಸಂಘದ ಸದಸ್ಯರುಗಳಿದ್ದರು.
ನಾಣಿಕಟ್ಟಾ:
ತಾಲೂಕಿನ ನಾಣಿಕಟ್ಟಾ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಧ್ವಜಾರೋಹಣ ನೆರವೇರಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಹೇಶ ಹೆಗಡೆ ತ್ಯಾಗಲಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿದರು. ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆ ಹಾಡಿದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರಾಘವೇಂದ್ರ ನಾಯ್ಕ, ಸದಸ್ಯ ರಘುಪತಿ ನಾಯ್ಕ, ಕಾಲೇಜು ಮತ್ತು ಪ್ರೌಢಶಾಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು, ಎರಡೂ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಗಂಗೊಳ್ಳಿ ಹಾಗೂ ವಿದ್ಯಾರ್ಥಿ ರಫಾನ್ ಧ್ವಜಾರೋಹಣದ ನಿರ್ವಹಣೆ ಮಾಡಿದರು. ಕಾಲೇಜಿನ ಉಪನ್ಯಾಸಕ ಎಂ.ಆಯ್. ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಪ್ರೌಢಶಾಲಾ ಮುಖ್ಯಸ್ಥರಾದ ರೀನಾ ನಾಯಕ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.