ಕಲ್ಯಾಣ ಕರ್ನಾಟಕದ ವಿವಿಧೆಡೆ ಧ್ವಜಾರೋಹಣ

KannadaprabhaNewsNetwork |  
Published : Aug 16, 2024, 12:54 AM IST
ಚಿತ್ರ 15ಬಿಡಿಆರ್50 | Kannada Prabha

ಸಾರಾಂಶ

Flag hoisting at various places of Kalyan Karnataka

-ಅಲ್ಲಲ್ಲಿ ಧ್ವಜಾರೋಹಣ

------

ಕನ್ನಡಪ್ರಭ ವಾರ್ತೆ ಬೀದರ್

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್ ವಿಭಾಗದ ಘಟಕ-2 ರಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯೋ ತ್ಸವ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ವಿಠಲ್ ರಾವ್ ಕದಂ ಧ್ವಜಾರೋಹಣ ಮಾಡಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಸಹಾಯಕ ಕಾರ್ಯಾಧೀಕ್ಷಕರಾದ ರಾಜೇಂದ್ರ ಚಿಟ್ಟಾ, ಅಶ್ವಿನ್ ಮಹಾರಾಜ್, ಬಸವರಾಜ್ ಚಾಮರೆಡ್ಡಿ, ಸೂರ್ಯಕಾಂತ ಟೈಗರ್, ಜಗನ್ನಾಥ್ ಶಿವಯೋಗಿ, ರಮೇಶ್ ಕಾಂಬಳೆ, ಈರಣ್ಣ ಹೂಗಾರ್, ಶ್ರೀಮಂತ, ಮಾರುತಿ, ರಾಜಕುಮಾರ್ ಪಾಟೀಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೌಕರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

--------

ಫೋಟೊ:15ಬಿಡಿಆರ್50

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬೀದರ್ ವಿಭಾಗದ ಘಟಕ-2 ರಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ್ಯೋ ತ್ಸವ ಆಚರಿಸಲಾಯಿತು.

-------

ಡಾ.ಬಾಬು ಜಗಜೀವನ್ ರಾಮ ಭವನದಲ್ಲಿ ಧ್ವಜಾ ರೋಹಣ

ಬೀದರ್: ಬೀದರ್ ನಗರದ ವಾರ್ಡ ಸಂಖ್ಯೆ 11ರ ಶಾಹಗಂಜ್ ನಲ್ಲಿ ಇರುವ ಡಾ:ಬಾಬು ಜಗಜೀವನ್ ರಾಮ ಭವನದಲ್ಲಿ 78ನೇ ಸ್ವಾತಂತ್ರ್ಯಿ ದಿನಾಚರಣೆ ನಿಮಿತ್ತ ಧ್ವಜಾ ರೋಹಣ ಜರುಗಿತು. ಮುಖ್ಯ ಅತಿಥಿಯಾಗಿ ಬೀದರ್ ಡಿವೈಎಸ್ಪಿ ಶಿವನಗೌಡ ಪಾಟೀಲ್‌ ಭಾಗನಹಿಸಿ ಧ್ವಜಾರೋಹಣ ನೆರವೆರಿಸಿದರು. ಈ ಸಂದರ್ಭದಲ್ಲಿ ಡಾ. ಬಾಬು ಜಗಜೀವರಾಂ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಭಿ ಕಾಳೆ, ಓಣಿಯ ಸಮಸ್ತ ಸಮಾಜದ ಮುಖಂಡರು, ಯುವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

--------

ಚಿತ್ರ 15ಬಿಡಿಆರ್51

ಬೀದರ್‌ ವಾರ್ಡ ಸಂಖ್ಯೆ 11ರಲ್ಲಿರುವ ಡಾ. ಬಾಬು ಜಗಜೀವನ್ ರಾಮ ಭವನದಲ್ಲಿ ಸ್ವಾತಂತ್ರ್ಯ್ ದಿನಾಚರಣೆ ನಿಮಿತ್ತ ಧ್ವಜಾರೋಹಣ ಜರುಗಿತು.

--------

ಕೆಪಿ ವಿದ್ಯಾ ಸಂಸ್ಥೆಯಲ್ಲಿ ಧ್ವಜಾರೋಹಣ

ಬೀದರ್: ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ 78ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಾದ ನಾವು ಸಿನಿಮಾ ತಾರೆಯರು, ಸೆಲೆಬ್ರಿಟಿಗಳನ್ನು ಬದಿಗಿಟ್ಟು ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೀರ ಯೋಧರನ್ನು ಆದರ್ಶವಾದಿಗಳನ್ನಾಗಿ ಮಾಡಿಕೊಂಡು ನಡೆಯಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಭಾಷಣ, ನೃತ್ಯ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಜೀಜಾಮಾತಾ ಶಿಕ್ಷಣ ಸಂಸ್ಥೆ ನಡೆಸಿದ ಸಾಮಾನ್ಯ ಜ್ಞಾನದಲ್ಲಿ ಎರಡನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಮಲ್ಲಯ್ಯ ಸ್ವಾಮಿ, ನಿರ್ದೇಶಕರಾದ ಸಂತೋಷ ಬಾಲೋಡೆ, ಕನ್ನಿಕಾ ಪರಮೇಶ್ವರಿ ಕನ್ನಡ ಪ್ರಾಥಮಿಕ ಪ್ರೌಢ ಹಾಗೂ ಆಂಗ್ಲ ಹಿರಿಯ ಮಾಧ್ಯಮ ಮುಖ್ಯಗುರುಗಳಾದ ವಿಜಯ ಕುಮಾರ ಪಾಟೀಲ ಯರನಳ್ಳಿ, ಸೇರಿದಂತೆ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

------

ಚಿತ್ರ 15ಬಿಡಿಆರ್52

ಬೀದರ್ ನಗರದ ಕೆಪಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಸಂಸ್ಥೆಯ ಅಧ್ಯಕ್ಷ ಬಾಬು ವಾಲಿ ಧ್ವಜಾರೋಹಣ ನಡೆಸಿ ಮಾತನಾಡಿದರು.

----------

ಯೋಗ ಸಾಧಕರಿಂದ ಧ್ವಜಾರೋಹಣ

ಬೀದರ್: ಬೀದರಿನ ಬರೀದ ಶಾಹಿ ಉದ್ಯಾನದಲ್ಲಿ ದೇಶದ 78ನೆ ಸ್ವಾತಂತ್ರೋತ್ಸವ ಹಾಗೂ ಧ್ವಜಾರೋಹಣವು ಯೋಗ ಸಾಧಕರಿಂದ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಡಾ. ನಂದಕುಮಾರ ತಾಂದಳೆ ಅವರು ಪೂಜೆ ಸಲ್ಲಿಸಿದರು. ಹಿರಿಯ ನ್ಯಾಯವಾದಿ ಗಂಗಪ್ಪ ಸಾವಳೆ ಮಾತನಾಡಿದರು. ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅವರು ದೇಶಭಕ್ತಿ ಗೀತೆ ಹಾಡಿದರು ಸಮಸ್ತ ಯೋಗ ಸಾಧಕರು ಪಾಲ್ಗೊಂಡಿದ್ದರು.

--------

ಚಿತ್ರ 15ಬಿಡಿಆರ್53

ಬೀದರ್‌ ನ ಬರೀದ ಶಾಹಿ ಉದ್ಯಾನವನದಲ್ಲಿ ಯೋಗ ಸಾಧಕರಿಂದ ಧ್ವಜಾರೋಹಣ ಕಾರ್ಯಕ್ರಮ ಜರುಗಿತು.

-------

ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಧ್ವಜಾರೋಹಣ

ಬೀದರ್: 78ನೇ ಸ್ವಾತಂತ್ರೊತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು. ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸೋಮಶೇಖರ ಪಾಟೀಲ ಧ್ವಜಾರೋಹಣ ನೆರವೆರಿಸಿದರು. ಕಾರ್ಯದರ್ಶಿಗಳಾದ ಡಾ. ವಿರೆಂದ್ರ ಶಾಸ್ತ್ರಿ, ಆಡಳಿತ ಮಂಡಳಿ ಸದಸ್ಯರಾದ ಕಂಟೆಪ್ಪ ಪಾಟೀಲ, ಭರತ ಶೆಟಕಾರ, ವೀರಕುಮಾರ ಮಜಗೆ, ಸಂಜೀವಕುಮಾರ ನಾರಾಯಣ ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

--

ಚಿತ್ರ 15ಬಿಡಿಆರ್54

ಬೀದರ್‌ನ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ಧ್ವಜಾರೋಹಣ ಜರುಗಿತು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!