ಸಚಿವ ಪುಟ್ಟರಂಗಶೆಟ್ಟರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ನಲ್ಲಿ ಶಾಸಕ ಎಆರ್‌ಕೆಗೆ ಅಪಮಾನ: ಕಿಡಿ

KannadaprabhaNewsNetwork |  
Published : Aug 06, 2026, 01:45 AM IST
ಸಚಿವ ಶೆಟ್ಟರಿಗೆ ಸ್ವಾಗತ ಪ್ಲೆಕ್ಸ್ ಅಳವಡಿಕೆ ವೇಳೆ ಶಾಸಕರಿಗೆ ಅವಮಾನ | Kannada Prabha

ಸಾರಾಂಶ

ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸ್ವಾಗತಿಸುವ ಭರದಲ್ಲಿ ಕೊಳ್ಳೇಗಾಲ ಪಟ್ಟಣದಿಂದ ಸತ್ತೇಗಾಲ ಗಡಿಯಂಚಿನ ತನಕ ಫ್ಲೆಕ್ಸ್ ಅಳವಡಿಸಿರುವ ಅಭಿಮಾನಿಗಳು, ಇದರಲ್ಲಿ ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಅವರ ಪೋಟೊ ಹಾಕದೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮತ್ತೊಮ್ಮೆ ಫ್ಲೆಕ್ಸ್‌ನಲ್ಲಿ ಶಾಸಕರಿಗೆ ಅವಮಾನಿಸಿದರೆ ಫ್ಲೆಕ್ಸ್‌ ಹರಿದು ಹಾಕ್ತೇವೆ: ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸ್ವಾಗತಿಸುವ ಭರದಲ್ಲಿ ಕೊಳ್ಳೇಗಾಲ ಪಟ್ಟಣದಿಂದ ಸತ್ತೇಗಾಲ ಗಡಿಯಂಚಿನ ತನಕ ಫ್ಲೆಕ್ಸ್ ಅಳವಡಿಸಿರುವ ಅಭಿಮಾನಿಗಳು, ಇದರಲ್ಲಿ ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿ ಅವರ ಪೋಟೊ ಹಾಕದೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಕೊಳ್ಳೇಗಾಲ ಪಟ್ಟಣ ಸೇರಿದಂತೆ ಗಡಿ ಭಾಗದ ತನಕ ಪುಟ್ಟರಂಗಶೆಟ್ಟರ ಅಭಿಮಾನಿ, ಪುಟ್ಟರಂಗಶೆಟ್ಟರ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಎಂಬುವರ ಹೆಸರು ಬಳಸಿ ಜೊತೆಗೆ ಹಲವು ಅಭಿಮಾನಿಗಳ ಪೋಟೊಗಳನ್ನು ಸಹ ಅಳವಡಿಸಲಾಗಿದೆ. ಅದೇ ರೀತಿಯಲ್ಲಿ ಮೇಲಿನ ಭಾಗದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಶಾಸಕ ಜಿ.ಎನ್. ನಂಜುಂಡ ಸ್ವಾಮಿ ,ಜಿಪಂನ ಮಾಜಿ ಸದಸ್ಯ ಯೋಗೀಶ್‌ರ ಪೋಟೊಗಳನ್ನು ಮುದ್ರಿಸಿ ಸಾಕಷ್ಟು ಕಡೆ ಸುಮಾರು 15 ಕಿಲೋಮೀಟರ್‌ ಉದ್ದಕ್ಕೂ ಅಳವಡಿಸಲಾಗಿದೆ. ಈ ಫ್ಲೆಕ್ಸ್‌ನಲ್ಲಿ ಕೊಳ್ಳೇಗಾಲ ಮೀಸಲು ಕ್ಷೇತ್ರದ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರ ಪೋಟೊವನ್ನು ಕೈಬಿಡಲಾಗಿದ್ದು, ಉದ್ದೇಶಪೂರ್ವಕವಾಗಿ ಈ ಕೖತ್ಯ ಮಾಡಲಾಗಿದೆ. ಇಂತಹ ಬೆಳವಣಿಗೆ ಸರಿಯಲ್ಲ ಎಂದು ಶಾಸಕರ ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರಸಭೆ ನಾಮನಿರ್ದೇಶಿತ ಸದಸ್ಯ ಅನ್ಸರ್‌ ಬೇಗ್ ಅವರು ಶಾಸಕರಿಗೆ ಈ ರೀತಿ ಅವಮಾನ ಮಾಡಲಾಗುತ್ತಿದೆ. ಈಗಲೇ ಈ ರೀತಿಯಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು. ಮುಂದೆ ಈ ರೀತಿ ಘಟನೆ ನಡೆದರೆ ಮುಲಾಜಿಲ್ಲದೆ ಫ್ಲೆಕ್ಸ್ ಕಿತ್ತುಹಾಕುವುದಾಗಿ ಎಚ್ಚರಿಸಿದ್ದಾರೆ.--ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸ್ವಾಗತ ಕೋರುವ ಭರದಲ್ಲಿ ಕೊಳ್ಳೇಗಾಲ ಶಾಸಕರನ್ನು ಅವರ ಬೆಂಬಲಿಗರು ಮರೆತಂತಿದೆ. ಎ.ಆರ್‌. ಕೃಷ್ಣಮೂರ್ತಿ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೈತಪ್ಪಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಇದನ್ನೇ ಮಾನದಂಡ ಮಾಡಿಕೊಂಡು ಅಪಮಾನ ಮಾಡುವ ರೀತಿ ಮುಂದಿನ ದಿನಗಳಲ್ಲಿ ನಡೆದುಕೊಂಡರೆ ನಾವು ಸಹಿಸುವುದಿಲ್ಲ.- ಅನ್ಸರ್‌ ಬೇಗ್, ನಗರಸಭೆ ನಾಮನಿರ್ದೇಶಿತ ಸದಸ್ಯ

---5ಕೆಜಿಎಲ್ 14ಕೊಳ್ಳೇಗಾಲದಾದ್ಯಂತ ಹೆದ್ದಾರಿ ವ್ಯಾಪ್ತಿಯಲ್ಲಿ ಅಳವಡಿಸಿರುವ ಪ್ಲೆಕ್ಸ್‌--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ಬಾರೆಡ್ಡಿಗೆ ಸಿಗದ ಸಚಿವ ಸ್ಥಾನ: ಗುಡಿಬಂಡೆ ಬಂದ್ ಯಶಸ್ವಿ
ಪ್ರಮುಖ 4 ರೈಲ್ವೆ ಬೇಡಿಕೆ ಈಡೇರಿಸಲು ಕೇಂದ್ರಕ್ಕೆ ಸಂಸದೆ ಮನವಿ