ಬಸವಸಾಗರ ಜಲಾಶಯದಿಂದ 2 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ । ಕೃಷ್ಣಾ ಜಲಾನಯನ ಪ್ರದೇಶದ ನಿವಾಸಿಗಳ ಭೇಟಿ ಮಾಡಿದ ಜಿಲ್ಲಾಧಿಕಾರಿ
------ಕನ್ನಡಪ್ರಭ ವಾರ್ತೆ ಕೊಡೇಕಲ್
ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಬುಧವಾರ ಬೆಳಿಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ನಿಗಮದ ಅಧಿಕಾರಿಗಳೊಡನೆ ದೀರ್ಘ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ ಅವರು, ಜಲಾಶಯಕ್ಕೆ ಬರುತ್ತಿರುವ ಒಳಹರಿವು ಹಾಗೂ ನದಿಗೆ ಬಿಡಲಾಗುತ್ತಿರುವ ಹೊರಹರಿವಿನ ಕುರಿತು ಚರ್ಚಿಸಿದರು.
ಬಳಿಕ ಜಿಲ್ಲಾಧಿಕಾರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮರ‍್ನಾಲ್ಕು ದಿನಗಳಿಂದ 1.50 ಲಕ್ಷಕ್ಕೂ ಅಧಿಕ ನೀರು ಬಿಡುತ್ತಿದ್ದು, ಬುಧವಾರದಿಂದ 2 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವೆಡೆ ಪ್ರವಾಹ ಉಂಟಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಸಕಲ ರೀತಿಯಿಂದಲೂ ಸನ್ನದ್ಧಗೊಂಡಿದೆ. ಕಂದಾಯ ಅಧಿಕಾರಿಗಳು ಹಾಗೂ ಗ್ರಾಮಾಡಳಿತಾಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಪ್ರತಿನಿತ್ಯ ನದಿ ತೀರದ ಗ್ರಾಮಗಳತ್ತ ತೆರಳಿ ಜನರಿಗೆ ನದಿಯತ್ತ ಸುಳಿದಂತೆ ಜಾಗೃತಗೊಳಿಸುತ್ತಿದ್ದಾರೆ. ಜಲಾಶಯದಿಂದ 3.50 ಲಕ್ಷಕ್ಕೂ ಅಧಿಕ ನೀರು ಬಿಟ್ಟಲ್ಲಿ ನೀಲಕಂಠರಾಯನ ಗಡ್ಡೆಯಲ್ಲಿ ವಾಸಿಸುತ್ತಿರುವ ಜನತೆಗೆ ತೊಂದರೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಅವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ನಡೆದಿದೆ. ಆದರೆ, ಗ್ರಾಮಸ್ಥರು ಗಡ್ಡೆ ತೊರೆಯಲು ಒಪ್ಪುತ್ತಿಲ್ಲವಾದರೂ ಸಹಿತ ಅವರ ಮನವೊಲಿಸಿ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂದರು.ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ: ಜಲಾಶಯದಿಂದ 3.50 ಲಕ್ಷಕ್ಕೂ ಅಧಿಕ ನೀರು ಬಿಟ್ಟಲ್ಲಿ ಕೃಷ್ಣಾ ಜಲಾನಯನದ ಕೆಲವು ನದಿ ತೀರದ ಜಮೀನುಗಳಿಗೆ ನೀರು ನುಗ್ಗುವ ಸಂದರ್ಭಸಹವಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
2 ಲಕ್ಷ ಕ್ಯುಸೆಕ್ ನೀರು ನದಿಗೆ: ಬುಧವಾರ ಬೆಳಿಗ್ಗೆಯಿಂದ ಬಸವಸಾಗರ ಜಲಾಶಯಕ್ಕೆ 2 ಲಕ್ಷಕ್ಕೂ ಅಧಿಕ ನೀರು ಬಿಡಲಾಗುತ್ತಿದೆ. ಜಲಾಶಯಕ್ಕೆ ಸದ್ಯ 2 ಲಕ್ಷ ಒಳಹರಿವು ಹರಿದು ಬರುತ್ತಿರುವುದರಿಂದ ಜಲಾಶಯದ ಪ್ರಮುಖ 25 ಗೇಟ್‌ಗಳಿಂದ 2.02.625 ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.ಛಾಯಾದೇವಿಗೆ ಜಲದಿಗ್ಭಂದನ: ಬಸವಸಾಗರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ನೀರು ಬಿಡುತ್ತಿರುವುದರಿಂದ ನಾರಾಯಣಪುರ ಸಮೀಪದ ನದಿತೀರದಲ್ಲಿರುವ ಐತಿಹಾಸಿಕ ಛಾಯಾದೇವಿಯ ಪಾದ ಸ್ಪರ್ಶಿಸಲು ತವಕವಿರುವೆಂಬಂತೆ ಕೃಷ್ಣೆಯು ರೌದ್ರ ನರ್ತನದೊಂದಿಗೆ ಕೃಷ್ಣಾ ಕಣಿವೆಯಲ್ಲಿ ಸಾಗುತ್ತಿದ್ದು, ಯಾವುದೇ ಸಂದರ್ಭದಲ್ಲಿಯೂ ಸಹ ದೇವಸ್ಥಾನಕ್ಕೆ ನೀರು ನುಗ್ಗುವ ಸಾಧ್ಯತೆಗಳಿರುವುದರಿಂದ, ದೇವಸ್ಥಾನಕ್ಕೆ ತೆರಳುವ ಮೆಟ್ಟಿಲಿಗೆ ಗೃಹ ರಕ್ಷಕಾ ದಳದ ಸಿಬ್ಬಂದಿ ಗೇಟ್ ಅಳವಡಿಸಿದ್ದು, ದೇವಸ್ಥಾನದ ಪ್ರವೇಶವನ್ನು ನಿಷೇಧಿಸಲಾಗಿದೆ. ಸದ್ಯ ದೇವಿಯ ಉತ್ಸವ ಮೂರ್ತಿಯನ್ನು ಅರ್ಚಕರಾದ ಚಿದಂಭರಭಟ್ ಜೋಶಿ ಅವರು ಮೆಟ್ಟಿಲು ಮೇಲೆ ಇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
-------ಬಾಕ್ಸ್ ----ನುಗ್ಗುವ ಸಾಧ್ಯತೆ: ಸ್ಥಳಾಂತರ ಸಾಧ್ಯತೆ
ಬಸವಸಾಗರ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕೃಷ್ಣಾ ಜಲಾನಯನದ ನಿರ್ಭಂದಿತ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿರುವ ಮೇಲಿನಗಡ್ಡಿ ಪ್ರದೇಶದ ಸುಮಾರು 10 ಕ್ಕೂ ಹೆಚ್ಚಿನ ಕುಟುಂದದವರನ್ನು ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಬಿ. ಅವರು ಭೇಟಿ ನೀಡಿ ಮಾತನಾಡಿ, ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣದಿಂದ ಜಲಾನಯನ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಾಗ ಸ್ಥಳಾಂತರ ಮಾಡಬೇಕಾಗಬಹುದು ಎಂದು ಹೇಳಿದರು.--------
ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಕೊಡೇಕಲ್ ಉಪತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಆಣೆಕಟ್ಟು ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಗೇಶ, ವಿಜಯಕುಮಾರ ಅರಳಿ, ಸಹಾಯಕ ನಿರೀಕ್ಷಕರಾದ ಮಲ್ಲಿಕಾರ್ಜುನ, ಶರಣುಗೌಡ, ಅಭಿಯಂತರರಾದ ಶಿವರಾಜ, ಕಂದಾಯ ನೀರಿಕ್ಷಕ ಶಾಂತಗೌಡ, ಗ್ರಾಮ ಆಡಳಿತಾಧಿಕಾರಿ ಅಪ್ಪಣ್ಣ ಗುಡಿಮನಿ ಸೇರಿದಂತೆ ಇತರರಿದ್ದರು.---
-----ಬಾಕ್ಸ್ ---ಜಲಾಶಯದ ನೀರಿನ ಮಟ್ಟ
492.25ಮೀ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 490.84 ಮೀ ತಲುಪಿದ್ದು, 27.21 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ 25 ಗೇಟ್‌ಗಳ ಮೂಲಕ 2 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ.--------
ಫೋಟೊ:24ವೈಡಿಆರ್ಕೊಡೇಕಲ್ ಸಮೀಪದ ಬಸವಸಾಗರ ಜಲಾಶಯಕ್ಕೆ ಬುಧವಾರ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರು ಭೇಟಿ ನೀಡಿ, ಪರಿಶೀಲಿಸಿದರು.
-----ಫೋಟೊ: 24ವೈಡಿಆರ್ :
ಬಸವಸಾಗರ ಜಲಾಶಯದಿಂದ ಬುಧವಾರ 2 ಲಕ್ಷಕ್ಕೂ ಅಧಿಕ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಯಿತು.----
ಫೋಟೊ: 24ವೈಡಿಆರ್ : ಛಾಯಾ ದೇವಿಯ ಮೆಟ್ಟಿಲವರೆಗೆ ಬಂದಿರುವ ನೀರು.-----
ಛಾಯಾ ದೇವಿಯ ಉತ್ಸವ ಮೂರ್ತಿಯನ್ನು ಮೆಟ್ಟಿಲ ಮೇಲೆ ಪೂಜಿಸುತ್ತಿರುವ ಅರ್ಚಕ ಚಿದಂಭರಭಟ್ ಜೋಶಿ.-----
ಫೋಟೊ:24ವೈಡಿಆರ್ಛಾಯದೇವಿ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ.
---000---