ಗೋ ಶಾಲೆಗಳಿಗೆ ಮೇವು ಪೂರೈಕೆ ವಿಫಲ

KannadaprabhaNewsNetwork |  
Published : May 03, 2024, 01:04 AM ISTUpdated : May 03, 2024, 01:05 AM IST
2ಸಿಎಚ್‌ಎನ್‌52ಹನೂರು ಪಟ್ಟಣದ ತಹಸಿಲ್ದಾರ್ ಕಚೇರಿ ಮುಂಭಾಗ ಭಾರತೀಯ ಕಿಸಾನ್ ಸಂಘದ ವತಿಯಿಂದ ಗೋಶಾಲೆಗಳಿಗೆ ನಿರಂತರ ಮೇವು ಪೂರೈಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಗೋ ಶಾಲೆಗಳಿಗೆ ಸಮರ್ಪಕ ಮೇವು ಒದಗಿಸಲು ಅಧಿಕಾರಿಗಳು ವಿಫಲರಾಗಿರುವುದನ್ನು ಖಂಡಿಸಿ ಕಿಸಾನ್ ಸಂಘದ ವತಿಯಿಂದ ಹನೂರಿನ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ‌ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಗೋ ಶಾಲೆಗಳಿಗೆ ಸಮರ್ಪಕ ಮೇವು ಒದಗಿಸಲು ಅಧಿಕಾರಿಗಳು ವಿಫಲರಾಗಿರುವುದನ್ನು ಖಂಡಿಸಿ ಕಿಸಾನ್ ಸಂಘದ ವತಿಯಿಂದ ಹನೂರಿನ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ‌ ನಡೆಸಲಾಯಿತು.

ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ತಾಲೂಕಿನಲ್ಲಿ ಕಾಟಾಚಾರಕ್ಕೆ ಬೆರಳೆಣಿಕೆಯಷ್ಟು ಮಾತ್ರ ಗೋಶಾಲೆಗಳನ್ನು ತೆರೆಯಲಾಗಿದ್ದು, ಬರಗಾಲದ ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಕೂಡ ಗೋಶಾಲೆ ತೆರೆದು ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ಪೂರೈಕೆಗೆ ಮುನ್ನೆಚರಿಕೆ ಕ್ರಮವಹಿಸುವಂತೆ ಕಳೆದ ಮೂರು ತಿಂಗಳ ಹಿಂದೆ ಹಲವಾರು ಬಾರಿ ಒತ್ತಾಯ ಮಾಡಿದ್ದರೂ ಜಿಲ್ಲಾಡಳಿತ ವಿಫಲವಾಗಿದೆ. ಇದರಿಂದ ತಾಲೂಕಿನ ವಿವಿಧಡೆ ಜಾನುವಾರುಗಳಿಗೆ ಮೇವಿಲ್ಲದೆ ಮರಣ ಹೊಂದುತ್ತಿವೆ. ಈ ಬಗ್ಗೆ ತಹಸೀಲ್ದಾರ್, ಸ್ಥಳೀಯ ಪಶುಸಂಗೋಪನೆ ಅಧಿಕಾರಿಗಳು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ತೆರೆದಿರುವಂತಹ ಡಿಎಂ ಸಮುದ್ರ ಕೊರಟ್ಟಿ ಹೊಸೂರು ಗೋಶಾಲೆಗಳಿಗೆ ಕಳೆದ ಎರಡರಿಂದ ಮೂರು ದಿನಗಳಿಂದಲೂ ಸಹ ಜಿಲ್ಲಾಡಳಿತ ಮೇವು ಒದಗಿಸಿಲ್ಲ‌. ಇದರಿಂದ ಎಷ್ಟೋ ಜಾನುವಾರುಗಳು ಮೇವಿಲ್ಲದೆ ಕಂಗಾಲಾಗಿವೆ ಪಶು ಸಂಗೋಪನಾ ಸಚಿವರು, ಉಸ್ತುವಾರಿ ಸಚಿವರು ಚಾಮರಾಜನಗರ ಜಿಲ್ಲೆಯಲ್ಲಿ ಇಂತಹ ಪರಿಸ್ಥಿತಿ ಆದರೆ ರಾಜ್ಯದ ವಿವಿಧ ಜಿಲ್ಲೆಗಳನ್ನು‌ ಯಾವ ರೀತಿ ನಿಭಾಯಿಸುವುದು ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

ಇದೆ ವೇಳೆಯಲ್ಲಿ ತಾಲೂಕು ಅಧ್ಯಕ್ಷ ಹರೀಶ್ ಪ್ರಧಾನ ಕಾರ್ಯದರ್ಶಿ ಬೊಸ್ಕೋ ಮಣಿಗರ್ ಶಿವಲಿಂಗ ಪ್ರಸಾದ್ ಶಿವರಾಜ್ ಮಹೇಶ್ ರಾಜು ನಾಗರಾಜ್ ಸದಾಶಿವ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?