ಕನಕಪುರ: ಜಾನಪದ ಕಲೆಗಳು ಸಮಾಜದಲ್ಲಿ ಐಕ್ಯತೆ ಯನ್ನು ಬೆಸೆಯುವ ಕೊಂಡಿಗಳಾಗಿವೆ, ಇಂತಹ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಾನಪದ ಗಾಯಕ ಡಾ.ಜೋಗಿಲ ಸಿದ್ದರಾಜು ತಿಳಿಸಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಾಧವ ರಾವ್ ಮಾತನಾಡಿ, ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಂತಹ ಜಾನಪದ ಉತ್ಸವಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಭಾಗವಹಿಸಬೇಕು. ಜಾನಪದ ಕಲೆ ಸಂಸ್ಕೃತಿ ಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಿ ಸಂರಕ್ಷಿಸುವ ಉದ್ದೇಶದಿಂದ ಇಂತಹ ಉತ್ಸವಗಳು ಸಹಕಾರಿಯಾಗ ಲಿವೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕಾಳಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇತಿಹಾಸ ಪರಂಪರೆಯನ್ನು ಪ್ರತಿನಿಧಿಸಿ ಸಮುದಾಯಗಳ ಸಹಬಾಳ್ವೆಗೆ ಸಹಕಾರಿ ಯಾಗಿರುವ ಜಾನಪದ ಕಲೆಗಳು ಸೂಕ್ತ ಪ್ರೋತ್ಸಾಹ ಸಿಗದೆ ಅವನತ್ತಿಯತ್ತ ಸಾಗುತ್ತಿದೆ. ಇದನ್ನು ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಎಂದರು.ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮುಂಭಾಗ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಎಂ.ಜಿ ರಸ್ತೆ, ಚನ್ನಬಸಪ್ಪ ವೃತ್ತದ ಮೂಲಕ ರೋಟರಿ ಭವನವದವರೆಗೂ ನಡೆದ ಮೆರವಣಿಗೆಯಲ್ಲಿ, ಪಟ, ಡೊಳ್ಳು, ನಗಾರಿ, ಟಮಟೆ, ಕೀಲುಗೊಂಬೆ ಹುಲಿವೇಷ, ಹುಲಿವೇಷ ಸೇರಿದಂತೆ ಅನೇಕ ಜಾನಪದ ಕಲಾ ತಂಡಗಳ ಪ್ರದರ್ಶನ ಗಮನ ಸಳೆಯಿತು.
ಜಾನಪದ ಕ್ಷೇತ್ರದಲ್ಲಿ ಅನ್ನದಾನಯ್ಯ, ಎಂ.ಜೆ.ಅಭಿಲಾಶ್, ಶಿಕ್ಷಣ ಕ್ಷೇತ್ರದಲ್ಲಿ ಎನ್.ಕುಮಾರ್, ವೈ.ಸಿ.ನಟರಾಜ್ ಅವರಿಗೆ ಸುಗ್ಗಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಸೋಬಾನ ಪದ, ನೀಲಗಾರರ ಪದ, ಜಾನಪದ ಗಾಯನ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆದವು.ಉತ್ಸವದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಚಿಕ್ಕಮರಿಗೌಡ, ಸಂಸ್ಥೆ ಅಧ್ಯಕ್ಷ ವೆಂಕಟಾಚಲುವಯ್ಯ, ರಂಗಭೂಮಿ ನಿರ್ದೇಶಕ ಎಂ.ಸಿ. ನಾಗರಾಜು, ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್, ವಕೀಲ ಸಿ.ಸುರೇಶ್, ಎಂ.ಮಲ್ಲಿಕಾರ್ಜುನ್, ಚಿಕ್ಕಸ್ವಾಮಿ, ಗೋವಿಂದಸ್ವಾಮಿ, ಮಳಗಾಳು ದಿನೇಶ್, ನಟರಾಜ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ್, ತಾಲೂಕು ಅಧ್ಯಕ್ಷ ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಶಿವಲಿಂಗಯ್ಯ ಮತ್ತಿತರರು ಭಾಗವಹಿಸಿದ್ದರು.
ಕೆ ಕೆ ಪಿ ಸುದ್ದಿ 1(1):ಕನಕಪುರದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಆಯೋಜಿಸಿದ್ದ ಜಾನಪದ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಡಾ.ಜೋಗಿಲ ಸಿದ್ದರಾಜು ಉದ್ಘಾಟಿಸಿದರು. ಚಿಕ್ಕಮರಿಗೌಡ, ಸತೀಶ್,ಕಾಳಯ್ಯ ಎಂ.ಸಿ.ನಾಗರಾಜು, ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01 (2):ಕನಕಪುರದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ವತಿಯಿಂದ ನಡೆದ ಜಾನಪದ ಸುಗ್ಗಿ ಸಂಭ್ರಮದ ಕಲಾ ತಂಡಗಳ ಮೆರವಣಿಗೆಗೆ ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಸತೀಶ್, ಕಾಳಯ್ಯ, ಚಿಕ್ಕಸ್ವಾಮಿ ಉಪಸ್ಥಿತರಿದ್ದರು.